ಪಶ್ಚಿಮ ಬೆಂಗಳೂರು ಭಾವಸಾರ ಕ್ಷತ್ರಿಯ ಸಮಾಜ
8ನೇ ವರ್ಷದ ಡಿಂಡಿ ಮಹೋತ್ಸವ ಮತ್ತು ಪಾಂಡುರಂಗ ವಿಠ್ಠಲ, ರುಕ್ಮಿಣಿ ಮೂರ್ತಿ ಭವ್ಯ ಮೆರವಣಿಗೆ ಶೋಭಾಯಾತ್ರೆ
ಬೆಂಗಳೂರು: ವಿಜಯನಗರದ ಹಂಪಿನಗರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪಶ್ಚಿಮ ಬೆಂಗಳೂರು ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಪೋಥಿ ಮತ್ತು ಧ್ವಜ ಸ್ಥಾಪನೆ ಮಹಾಮಂಗಳಾರತಿ ಹಾಗು ಪ್ರಸಾದ ವಿನಿಯೋಗ, 8ನೇ ವರ್ಷದ ಡಿಂಡಿ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಪಾಡುರಂಗ ವಿಠ್ಠಲ, ರುಕ್ಮಿಣಿಯ ಮೂರ್ತಿ ಪೂಜೆ ಸಲ್ಲಿಸಿದ ಹರಿಭಕ್ತ ಪಾರಾಯಣ ಪಂಡಿತರಾದ ಭಾನುದಾಸ ಸರ್ವದೆ, ಶಾಸಕ ಎಂ.ಕೃಷ್ಣಪ್ಪ, ಅಧ್ಯಕ್ಷ ಹರಿಶಂಕರ್ ಸುಲಾಖೆ, ಪ್ರಧಾನ ಕಾರ್ಯದರ್ಶಿ ಸತೀಶ್ ಅಂಬೋರ್, ಪಿ.ವಿಶ್ವನಾಥ್ ಪಿಸ್ಸೆ, ಎಸ್.ಗುರುಪ್ರಸಾದ್ ಅಷ್ಟಕರ್ ಭಾವಸಾರ ಕ್ಷತ್ರಿಯ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ಸಂತೋಷ್ ಕುಮಾರ್ ಅಂಬೋರ್ ಶೋಭಯಾತ್ರೆ ಮತ್ತು ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.
ಎಂ.ಕೃಷ್ಣಪ್ಪರವರು ಮಾತನಾಡಿ, ಭಾವಸಾರ ಕ್ಷತ್ರಿಯ ಮಹಾಸಭಾದ ವತಿಯಿಂದ ಡಿಂಡಿ ಮಹೋತ್ಸವದಲ್ಲಿ ಭಾಗವಹಿಸಿ ಪಾಡುರಂಗರ ಆಶೀರ್ವಾದ ಪಡೆಯುವ ಸೌಭಾಗ್ಯ ಲಭಿಸಿದೆ.
ಪಾಡುರಂಗ ವಿಠ್ಠಲನ ಕೃಪೆಯಿಂದ ಎಲ್ಲರು ಬಾಳಿನಲ್ಲಿ ಸಂಕಷ್ಟಗಳ ನಿವಾರಣೆಯಾಗಲಿ, ನಾಡಿನಲ್ಲಿ ಸುಖ, ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸಂತೋಷ್ ಕುಮಾರ್ ಅಂಬೋರ್ ಮಾತನಾಡಿ, ಸತತ 8 ವರ್ಷಗಳಿಂದ ಡಿಂಡಿ ಮಹೋತ್ಸವ ಅಚರಣೆಯನ್ನು ಎರಡು ದಿನಗಳ ಕಾಲ ಮಾಡಿಕೊಂಡು ಬರಲಾಗುತ್ತಿದೆ. ಭಾವಸಾರ ಕ್ಷತ್ರಿಯ ಸೇವಾ ಸಮಾಜ ಟ್ರಸ್ಟ್ ಸಮಾಜದವರಿಗೆ ಡಿಜಿಟಲ್ ಕಾರ್ಡ್ ಮಾಡಲಾಗುತ್ತಿದೆ. ಒಂದು ಜಾತಿ ಸಂಘಟನೆ ಸಮಾಜದ ಪ್ರತಿಯೊಬ್ಬರಿಗೂ ಡಿಜಿಟಲ್ ಕಾರ್ಡ್ ನೀಡುತ್ತಿರುವುದು ಇದು ರಾಜ್ಯದಲ್ಲಿಯೆ ಮೊದಲು ಎಂದು ಹೇಳಿದರು.
ಭಾವಸಾರ ಕ್ಷತ್ರಿಯ ಸಮಾಜ ರಾಜ್ಯದಲ್ಲಿ 20 ಲಕ್ಷ ಜನಸಂಖ್ಯೆ ಇದೆ. ವರ್ಷದಲ್ಲಿ ಒಂದು ಬಾರಿ ಡಿಂಡಿ ಮಹೋತ್ಸವವನ್ನು ಭಾವಸಾರ ಕ್ಷತ್ರಿಯ ಸಮಾಜದವರು ಒಂದು ಕಡೆ ಸೇರಿ, ಪಾಂಡುರಂಗ ಭಜನೆ ಮಾಡಿ ಸಮುದಾಯದ ಸಂಘಟನೆ ಮಾಡಲಾಗುತ್ತಿದೆ. ಭಾವಸಾರ ಕ್ಷತ್ರಿಯ ಸಮಾಜವು ಬೆಂಗಳೂರಿನ 35 ಕಡೆಗಳಲ್ಲಿ ದೇವಸ್ಥಾನವಿದೆ ಹುಣ್ಣಿಮೆ, ಏಕಾದಶಿ ದಿನದಂದು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಭಾವಸಾರ ಕ್ಷತ್ರಿಯ ಸಮಾಜದ ಶ್ರೇಯೋಭಿವೃದ್ದಿಗೆ ಹಲವಾರು ಸಾಮಾಜಿಕ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ಪಾಂಡುರಂಗ ವಿಠ್ಠಲ, ರುಕ್ಮಿಣಿ ಉತ್ಸವ ಮೂರ್ತಿಗಳನ್ನು ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಸಾಗಿದರು.
ಜಯದೇವ ಸ್ಮಾರಕ ರಾಷ್ಟೋತ್ಥನ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರಾ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.




