ದಾವಣಗೆರೆ: ಸಾಮಾಜಿಕ ನ್ಯಾಯ ಎತ್ತಿಹಿಡಿದ ದಾರ್ಶನಿಕ ಭಕ್ತ ಕನಕದಾಸರು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕದಾಸರ ಕೀರ್ತನೆಗಳ ಮುಖಾಂತರ ಸಮಸಮಾಜ ನಿರ್ಮಾಣವನ್ನು ಮಾಡಲು ಹೋರಾಟ ಮಾಡಿದಂತಹ ವ್ಯಕ್ತಿ ಕನಕದಾಸರು. ಅವರ ಕೀರ್ತನೆಗಳನ್ನು ನಮ್ಮ ಜೀವನದಲ್ಲಿಯೂ ಕೂಡ ಅಳವಡಿಸಿಕೊಳ್ಳಬೇಕು. ನಮ್ಮ ನಡೆ ನುಡಿಯಲ್ಲಾದರೂ ಸ್ವಲ್ಪ ಬದಾಲಾವಣೆ ಮಡಿಕೊಂಡರೆ, ಇಂತಹ ಜಯಂತಿಗೆ ಅರ್ಥಬರುತ್ತದೆ ಎಂದರು.
ಕನಕದಾಸರ ಸಾಹಿತ್ಯ ಅನುಭವದಿಂದ ಕೂಡಿದೆ, ಅವುಗಳೆಲ್ಲ ಭಕ್ತಿ, ಸಮಾಜ ಚಿಂತನೆಗಳನ್ನು ಒಳಗೊಂಡಿವೆ. ಲೋಕವನ್ನು ಆಡುಭಾಷೆಯಲ್ಲಿಯೇ ಹೇಳಿ ತಿದ್ದುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟ ದಾರ್ಶನಿಕ. ದ್ವೇಷವನ್ನು ಪ್ರೀತಿಯಿಂದ ಗೆದ್ದು ಸಮಾನತೆಯ ಸಮಾಜ ಕಟ್ಟಲು ನೆರವಾದ ಮಾರ್ಗದರ್ಶಿ ಎಂದರು.
ಅಂಬೇಡ್ಕರ್, ಬಸವಣ್ಣ, ಕನಕದಾಸ ಈ ಮೂವರ ಚಿಂತನೆಗಳು ಒಂದೇ ಆಗಿದ್ದುದರಿಂದ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಯಿತು. ಕನಕದಾಸರಿಗೆ ಏಳು ಕೊಪ್ಪರಿಗೆ ಬಂಗಾರ ಸಿಕ್ಕಿದಾಗ ಅದನ್ನು ತನ್ನ ಸ್ವಾರ್ಥಕ್ಕಾಗಿ ಬಳಸದೇ ಸಮಾಜದ ಉದ್ದಾರಕ್ಕಾಗಿ ನೀಡಿದ ಕೀರ್ತಿ ಅವರಿಗೆ ಸಲುತ್ತದೆ. ಮುಂದಿನ ದಿನಗಳಲ್ಲಿ ಜಯಂತಿಗಳ ಆಚರಣೆಗೆ ಶಾಲಾ, ಕಾಲೇಜು ಮಕ್ಕಳನ್ನು ಕರೆಸಿ ಆಚರಣೆ ಮಾಡಬೇಕು ಎಂದರು.
ಮಹಾನಗರಪಾಲಿಕೆಯ ಮೇಯರ್ ಚಮನ್ ಸಾಬ್ ಮಾತಾನಾಡಿ, ಜಯಂತಿಗಳಿಗೆ ಜನ ಸೇರಿ ಸಂತ, ಶರಣರ ಮಾರ್ಗದರ್ಶವನ್ನು ಮತ್ತು ಅದರಲ್ಲಿರುವ ಅಂಶವನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿ.ಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಉಪಮೇಯರ್ ಸೋಗಿ ಶಾಂತಕುಮಾರ್, ದೂಡಾ ಆಯುಕ್ತ ಹುಲುಮನಿ ತಿಮ್ಮಣ್ಣ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಸೋಗಿ ಶಾಂತಕುಮಾರ್, ಕಾರ್ಯದರ್ಶಿ ಲೋಕಿಕೆರೆ ಸಿದ್ದಣ್ಣ, ವಿರೋಧಪಕ್ಷದ ನಾಯಕ ಪ್ರಸನ್ನ ಕುಮಾರ್, ಮುಖಂಡ ಆನಂದಪ್ಪ ಸೇರಿದಂತೆ ಇತರರು ಹಾಜರಿದ್ದರು.




