ಶ್ರೀರಾಮಮಂದಿರ 63 ಅಡಿ ಶ್ರೀರಾಮಾಂಜನೇಯ ಪ್ರತಿಮೆ ಮುಂಭಾಗ ಲಕ್ಷ ದೀಪೋತ್ಸವ
ಬೆಂಗಳೂರು: ಶ್ರೀರಾಮಮಂದಿರದ 63 ಅಡಿ ಶ್ರೀರಾಮಾಂಜನೇಯ ಪ್ರತಿಮೆ ಮುಂಭಾಗದಲ್ಲಿ ಶ್ರೀರಾಮಸೇವಾ ಮಂಡಳಿ ಮತ್ತು ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮತ್ತು ನಲ್ಲಾನ್ ಚಕ್ರವರ್ತಿ ಟ್ರಸ್ಟ್ ಸಹಯೋಗದಲ್ಲಿ 9ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು.
- ಚಿತ್ರದುರ್ಗ ಜಿಲ್ಲೆಯ ವಸತಿ ರಹಿತರಿಗೆ ಸುವರ್ಣಾವಕಾಶ
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ ಮತ್ತು ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯರಾದ ಮೋಹನ್ ಕುಮಾರ್, ಜಯರತ್ನ ಹಾಗೂ ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್.ಶ್ರೀಧರ್ ಪೂಜೆ ಸಲ್ಲಿಸಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಹನ್ನೆರಡು ಮಾಸಗಳಲ್ಲಿ ಎಂಟನೇ ಮಾಸವಾದ ಕಾರ್ತಿಕ ಮಾಸವು ಬಹಳ ಶೇಷ್ಠವಾದದ್ದು, ಈ ಮಾಸವು ಶಿವ ಹಾಗೂ ವಿಷ್ಣು ಇಬ್ಬರಿಗೂ ಬಹಳ ಪ್ರಿಯಾವಾದ ಮಾಸವಾಗಿದ್ದು ಎಲ್ಲರೂ ಒಂದುಗೂಡಿ ದೀಪವನ್ನು ಹಚ್ಚುವ ಮೂಲಕ ಹಿಂದಿನ ಪಾಪ ಮತ್ತು ತಪ್ಪುಗಳೆಂಬ ಕತ್ತಲಿನಿಂದ ಮುಕ್ತಿ ಪಡೆಯಲು ಹಾಗೂ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂಬ ನಂಬಿಕೆ ಇದೆ.

ದೀಪ ಬೆಳುಗುದರಿಂದ ಬಂದ ಸಂಕಷ್ಟಗಳು, ಬರುವ ಸಂಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಲಭಿಸುತ್ತದೆ ಎಂಬ ನಂಬಿಕೆ ಇದೆ.




