ಲೇಖಕರಿಗೆ ವಿಶಿಷ್ಟ ಅವಕಾಶ
ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ತನ್ನ ಪ್ರಸ್ತುತ ಸಾಲಿನ ಯೋಜನೆಯಲ್ಲಿ ಬಂಜಾರ ಸಮುದಾಯದ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ವಿವಿಧ ಆಯಾಮಗಳನ್ನು ದಾಖಲಿಸಲು ಉದ್ದೇಶಿಸಿರುವ ಮಹತ್ವದ ಯೋಜನೆಯ ಭಾಗವಾಗಿ, ಕನಿಷ್ಠ 25 ಪುಟಗಳ 100 ವಿಭಿನ್ನ ವಿಷಯಗಳಿಗೆ ಸಂಬಂಧಿಸಿದಂತೆ ಕೃತಿಗಳನ್ನು ಪ್ರಕಟಣೆ ಮಾಡಲು ಬಂಜಾರ ಅಕಾಡೆಮಿ ನಿರ್ಧರಿಸಿದೆ. ಆರಂಭಿಕ ಹಂತದಲ್ಲಿ, ಆಯ್ಕೆ ಸಮಿತಿಯ ಶಿಫಾರಸ್ಸು ಮೇರೆಗೆ 50 ಕಿರು ಹೊತ್ತಿಗೆಗಳ ರಚನೆಗಾಗಿ ಲೇಖಕರನ್ನು ಆಯ್ಕೆ ಮಾಡಲಾಗುವುದು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ಯೋಜನೆಯ ಅಡಿಯಲ್ಲಿ ಲೇಖಕರು ತಮ್ಮ ಕೃತಿಗಳನ್ನು ಈ ಕೆಳಗಿನ ಪ್ರಮುಖ ವಿಷಯಗಳಲ್ಲಿ ರಚಿಸಬಹುದು:
ಬಂಜಾರ ಕಲಾ ಪರಂಪರೆ
ಬಂಜಾರ ಭಾಷೆ ಮತ್ತು ಸಾಹಿತ್ಯ ಮೌಖಿಕ ಸಾಹಿತ್ಯ
ಬಂಜಾರ ಜನಜೀವನ ಮತ್ತು ಸಂಪ್ರದಾಯಗಳು, ಆಚರಣೆಗಳು, ಹಬ್ಬಗಳು ಇತರೆ
ಬಂಜಾರ ಸಮುದಾಯದ ಹಿರಿಯ ಸಾಧಕರು, ಸಾಹಿತಿಗಳು, ಕಲಾವಿದರು ಹಾಗೂ ತಜ್ಞರು, ರಾಷ್ಟ್ರ-ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು
ಬಂಜಾರ ಹೋರಾಟಗಾರರು ಮತ್ತು ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಪ್ರಮುಖ ಮುಖಂಡರು
ಬಂಜಾರ ಪ್ರಮುಖ ಶ್ರದ್ಧಾ ಕೇಂದ್ರಗಳು
ಬಂಜಾರ ಐತಿಹಾಸಿಕ ತಾಣಗಳು
ಬಂಜಾರ ಸಮಾಜಶಾಸ್ತ್ರ
ಬಂಜಾರ ಶಿಕ್ಷಣ
ಬಂಜಾರ ನೃತ್ಯ
ಬಂಜಾರ ಸಂಗೀತ
ಬಂಜಾರ ನಾಟಕಗಳು ಹಾಗೂ ಪ್ರಯೋಗಗಳು ಮೊದಲಾದ ಕ್ಷೇತ್ರಗಳು
ಈ ಅಕಾಡೆಮಿಯ ಮಹತ್ವದ ಕೆಲಸದಲ್ಲಿ ಲೇಖಕರು ಕೈಜೋಡಿಸಿ ಭಾಗವಹಿಸಲು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಕೋರಿದ್ದಾರೆ.
ಆಸಕ್ತ ಬಂಜಾರ ಹಾಗೂ ಇತರೆ ಲೇಖಕರು ತಮ್ಮ ಕೃತಿಗಳ ಶೀರ್ಷಿಕೆಗಳ, ಸಾರಾಲೇಖ ಹಾಗೂ ಸ್ವವಿವರಗಳನ್ನು ದಿನಾಂಕ:19.07.2025 ರ ಒಳಗಾಗಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕಚೇರಿಗೆ ನೊಂದಾಯಿಸಿಕೊಳ್ಳಲು ಅಥವಾ ಕಚೇರಿಗೆ ಖುದ್ದಾಗಿ ಅರ್ಚಿ ಸಲ್ಲಿಸಲು ಅಥವಾ ಅಂಚೆ, ಕೋರಿಯರ್ ಮೂಲಕ ಸ್ವವಿವರದೊಂದಿಗೆ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶವಿದೆ.
ಯುವ ಬಂಜಾರ ಸಂಶೋಧಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಲೇಖಕರಿಗೆ ನಿಯಮಾನುಸಾರ ಗೌರವ ಸಂಭಾವನೆ ಪಾವತಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಳಾಸ: ರಿಜಿಸ್ಟ್ರಾರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕನ್ನಡ ಭವನ , 1 ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-560002
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080-29917745




