ರಾಮನಗರ: ಬಂಜಾರ ಭಾಷೆ ಕನ್ನಡ ಭಾಷೆಯಷ್ಟೇ ಹಿಂದಿನ ಹಳಮೆಯನ್ನು ಹೊಂದಿದ್ದು ಭಾಷೆಯಲ್ಲಿ ಸಾಹಿತ್ಯ ರಚನೆಯು ಅಗತ್ಯವಾಗಿದೆ ಎಂದು ಬಂಜಾರ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್ ಗೋವಿಂದಸ್ವಾಮಿ ಹೇಳಿದರು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
“ಬಂಜಾರ ಅಕಾಡೆಮಿ ನಡೆ ತಾಂಡಗಳ ಕಡೆ 2025-26ʼʼ ಬಂಜಾರ ಕಲೆ, ಸಾಹಿತ್ಯ – ಸಂಸ್ಕೃತಿ ಹಾಗೂ ಶಿಕ್ಷಣದ ಕುರಿತು ಜಾಗೃತಿ ಅಭಿಯಾನವನ್ನು ಲೋಕನಾಯ್ಕನ ತಾಂಡ, ಮರಳವಾಡಿ ಹೋ|| ಹಾರೋಹಳ್ಳಿ ತಾ|| ರಾಮನಗರ ಜಿಲ್ಲೆಯಲ್ಲಿ ಸಮಾರಂಭವನ್ನು ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್ ಗೋವಿಂದಸ್ವಾಮಿ ಉದ್ಘಾಟಿಸಿ ಮತನಾಡಿದರು.
ಬಂಜಾರರ ಮೌಖಿಕ ಸಾಹಿತ್ಯ ಹಾಗೂ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಗೆ ಬಂಜಾರ ಕಲಾವಿದರು, ಸಾಹಿತಿಗಳ ಸಹಕಾರ ಅಗತ್ಯವಿದೆ ಎಂದರು.
ಅಕಾಡೆಮಿಗೆ ತಮ್ಮ ಮಾನವ ಸಂಪನ್ಮೂಲವನ್ನು ಒದಗಿಸಿ ಅಕಾಡೆಮಿ ಜೊತೆಗೆ ಗುರುತಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಇಂದು ಬಂಜಾರರ ಸಮಗ್ರ ಅಭಿವೃದ್ಧಿಗೆ ಅಕಾಡೆಮಿ ಸಾಹಿತ್ಯ, ಸಂಸ್ಕೃತಿ ಸಮಾಜಿಕ ಶಿಕ್ಷಣ ಇತರೆ ಅಭಿವೃದ್ಧಿಗೆ ಅಕಾಡೆಮಿಯು ಸರ್ವಾಂಗೀಣವಾಗಿ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ಅಕಾಡೆಮಿಯು ಒಂದು ಅತ್ಯುತ್ತಮವಾದ ಸಂಸ್ಥೆಯಾಗಿದ್ದು ಇದಕ್ಕೆ ಬಂಜಾರರೆಲ್ಲರಿಗೂ ನನ್ನ ಸಂಸ್ಥೆಯೆಂದು ಪರಿಭಾವಿಸಿ ಸಹಕಾರ ನೀಡಿದರೆ ಅಕಾಡೆಮಿ ಅತ್ಯುತ್ತಮವಾಗಿ ಕೆಲಸಮಾಡಲು ಅನುಕೂಲವಾಗುವುದು ಎಂದರು.
ಎಲ್ಲಾ ಜಿಲ್ಲಾ ವಲಯಗಳಲ್ಲಿ ಇದೇ ರೀತಿ ನಾವು ಜಾಗೃತಿ ಕಾರ್ಯಕ್ರಮಗಳು, ಬಂಜಾರ ಸಂಸ್ಕೃತಿ ಕೋಶ, ಬಂಜಾರರ ಪ್ರಮುಖರ ಸಾಮಾಜಿಕ ಸ್ವಾತಂತ್ಯ್ರ ಹೋರಾಟ ಚಿಂತಕರ 70ಕ್ಕೂ ಹೆಚ್ಚು ಕೃತಿಗಳನ್ನು ಈ ವರ್ಷ ರಚನೆ ಮಾಡುತ್ತಿದ್ದೇವೆ. ಸಾಕ್ಷ್ಯಚಿತ್ರ ಮಾಡುತ್ತಿದ್ದೇವೆ, ತರಬೇತಿ ಮಾಡುತ್ತಿದ್ದೇವೆ, ಸಮೇಳನ ಮಾಡುತ್ತಿದ್ದೇವೆ ಎಂದರು
ಅಂತರರಾಷ್ಟ್ರೀಯ ಮಟ್ಟದ ಒಂದು ಸಮ್ಮೇಳನಕ್ಕೆ ವಿದೇಶಿ ಬಂಜಾರರಿಂದ ಮೌಖಿಕವಾಗಿ ಒಂದು ಬೇಡಿಕೆ ಬಂದಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಅಂತರಾಷ್ಟ್ರೀಯ ಬಂಜಾರ ಸಾಹಿತ್ಯ, ಸಂಸ್ಕೃತಿ, ಕಲಾ ಮಹಾ ಸಮ್ಮೇಳನವನ್ನು ನಡೆಸುವ ಅಲೋಚನೆ ಅಕಾಡೆಮಿಗೆ ಇದೆ ಎಂದರು.
ನಮಗೆ ಈ ವರ್ಷ ಹೆಚ್ಚಿನ ಬಜೆಟ್ ನ ಅಗತ್ಯವಿದೆ. ಇತರೆ ಅಕಾಡೆಮಿಗಳಿಗೆ ಕೊಟ್ಟಿರುವ ಹಾಗೆ ನಮಗೂ ಕನಿಷ್ಠ 5 ಕೋಟಿಗಿಂತ ಹೆಚ್ಚಿನ ಬಜೆಟ್‌ನ್ನು ಆರಂಭದಲ್ಲಿ ಕೊಟ್ಟರೆ ಅಕಾಡೆಮಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯ ಎಂದರು.
ಈಗಾಗಲೆ ಸರ್ಕಾರ ನಮಗೆ ಉತ್ತಮ ರೀತಿಯಲ್ಲಿ ಸಹಕಾರ ಕೊಡುತ್ತಿರುವುದಕ್ಕೆ ಧನ್ಯವಾದ. ಈಗಾಗಲೆ ಎಲ್ಲಾ ಕಡೆ ಸಾಹಿತ್ಯ ಸಮ್ಮೇಳನ, ತರಬೇತಿ ಶಿಬಿರಗಳನ್ನು ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದರು.
ಪ್ರೊ. ಶಿವಣ್ಣ ನಾಯಕ್ ಮಾತನಾಡಿ, ಅಕಾಡೆಮಿ ನಮ್ಮಂತಹ ಕುಗ್ರಾಮದಲ್ಲೂ ಬಂದು ಈ ರೀತಿಯ ಒಂದು ಮಹನ್ನೊತವಾದಂತಹ ನಮ್ಮ ಹಳ್ಳಿ ಗಾಡಿನ ಜನರನ್ನ ಸಾಹಿತ್ಯ, ಸಾಂಸ್ಕೃತಿಕ ಪ್ರಬುದ್ದತೆ ಬೆಳೆಸುವುದಕ್ಕೆ ಜಾಗೃತಿ ಅರಿವು, ತರಬೇತಿ ಕಾರ್ಯಕ್ರಮಗಳನ್ನು ನಡೆಡಸುತ್ತಿರುವುದು ಅಗತ್ಯವಾದ ಕೆಲಸ ಅಕಾಡೆಮಿ ಮಾಡಉತ್ತಿರುವ ಕೆಲಸ ಹೆಮ್ಮೆ ಎನಿಸಿದೆ ಎಂದರು.
ಸಮಾರಂಭದಲ್ಲಿ ಡಾ.ಎಂ.ನಾಗರಾಜ ನಾಯ್ಕ, ಡಾ.ಶಿವಣ್ಣ ನಾಯ್ಕ, ಅನಸೂಯಮ್ಮ ಎಂ, ರಮೇಶ್ ನಾಯ್ಕ, ಶ್ಯಾಮರಾಜ್ ನಾಯ್ಕ ಸ್ವಾಮೀಜಿ, ಮರಿಯಪ್ಪ ನಾಯ್ಕ, ಗಿರಿಶ್ ನಾಯ್ಕ್ ಮೊದಲಾದವರು ಹಾಜರಿದ್ದರು.



