ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಪ್ರಶಸ್ತಿಗಳ ಘೋಷಣೆ

1 year ago

2023-2024ನೇ ಸಾಲಿನ ಶ್ರೀ ಸಂತಸೇವಾಲಾಲ್ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿಗೆ ಆಯ್ಕೆ 
                                                        
ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಪ್ರಥಮವಾಗಿ ಪ್ರಸಕ್ತ ಸಾಲಿಗೆ ಬಂಜಾರ ಹಾಗೂ ಇತರೆ ಸಾಧಕರಿಗೆ ಅಕಾಡೆಮಿ ನೂತನವಾಗಿ ಸ್ಥಾಪಿಸಿದ ʻʻಶ್ರೀ ಸಂತ ಸೇವಾಲಾಲ್ʼʼ ವಾರ್ಷಿಕ ಪ್ರಶಸ್ತಿಗೆ ರೂ 1,00,000 ಗಳ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ, ಹಾಗೂ ಬಂಜಾರ ಸಮುದಾಯದ ಕಲಾವಿದರು, ಸಾಹಿತಿಗಳು ಹಾಗೂ ಇತರೆ ಸಾಂಸ್ಕೃತಿಕ  ಕ್ಷೇತ್ರದ ಸಾಧಕರಿಗೆ ʻʻಗೌರವ ಪ್ರಶಸ್ತಿʼʼ ತಲಾ ರೂ-50,000ಹಾಗೂ ʻʻವಾರ್ಷಿಕ ಪ್ರಶಸ್ತಿʼʼ ರೂ 25,000 ಪುರಸ್ಕೃತರಿಗೆ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರಿನ ಸರ್ವ ಸದಸ್ಯರ ಸಭೆಯಲ್ಲಿ ಸಾಹಿತಿ, ಕಲಾವಿದರನ್ನು 2024ನೇ ಸಾಲಿನ ʻʻಶ್ರೀ ಸಂತ ಸೇವಾಲಾಲ್ʼʼಪ್ರಶಸ್ತಿ, ʻʻಗೌರವ ಪ್ರಶಸ್ತಿʼʼಹಾಗೂ ʻʻವಾರ್ಷಿಕ ಪ್ರಶಸ್ತಿʼʼಗೆ ಸರ್ವಾನುಮತದಿಂದ ಈ ಕೆಳಕಂಡವರಂತೆ ಆಯ್ಕೆ ಮಾಡಲಾಗಿದೆ.

I. 2024ನೇ ಸಾಲಿನʻಶ್ರೀ ಸಂತ ಸೇವಾಲಾಲ್  ಪ್ರಶಸ್ತಿʼಪುರಸ್ಕೃತರು: ಡಾ.ಬಿ.ಟಿ.ಲಲಿತಾನಾಯಕ್, ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ  ಚಿಂತಕರು
II. 2023 ನೇ ಸಾಲಿನʻಗೌರವ ಪ್ರಶಸ್ತಿʼಪುರಸ್ಕೃತರು
ಕ್ರ.ಸಂ ಹೆಸರು ಕ್ಷೇತ್ರ ಜಿಲ್ಲೆ
1. ಡಾ. ಕೃಷ್ಣಪ್ಪಾ ಭಿಕ್ಕಪ್ಪಾ ಪವಾರ (ಡಾ.ಕೆ.ಬಿ. ಪವಾರ), ಹಿರಿಯ ಸಾಹಿತಿ ಶಿರಸಿ ಜಿಲ್ಲೆ
2. ಶಂಕರ್ ಎಚ್ ಲಮಾಣಿ, ನಾಟಕಕಾರರು ಬಾಗಲಕೋಟೆ
3. ಬಾಬು ಲಚ್ಚು ರಾಠೋಡ ವಾಝ ಕಲಾವಿದರು ಬರಟಗಿ
4. ರಾಮಚಂದ್ರ ಭಗವಾನ್ ದಾಸ್, ಭಜನೆ ಕಲಾವಿದರು ವಿಜಯನಗರ ಜಿಲ್ಲೆ
5. ಡಾ.ಸಣ್ಣರಾಮ, ಹಿರಿಯ ಸಾಹಿತಿ ಶಿವಮೊಗ್ಗ ಜಿಲ್ಲೆ
III. 2024 ನೇ ಸಾಲಿನ ʻಗೌರವ ಪ್ರಶಸ್ತಿʼ ಪುರಸ್ಕೃತರು
ಕ್ರ.ಸಂ ಹೆಸರು ಜಿಲ್ಲೆ ಕ್ಷೇತ್ರ
1. ಪುಟ್ಟಿಬಾಯಿ ಲಕ್ಷ್ಮಣ ನಾಯಕ್ , ಚಿತ್ರದುರ್ಗ ಜಿಲ್ಲೆ ಜಾನಪದ ವೈದ್ಯೆ/ಕಸೂತಿ
2. ಮಹದೇವ ದಮಳ ಚವ್ಹಾಣ, ಗುಲಬರ್ಗ ಜಿಲ್ಲೆ ಗಾಯನ
3. ಪಿ. ಲಕ್ಷ್ಮಣ ನಾಯಕ್, ಕೊಪ್ಪಳ ಜಿಲ್ಲೆ ಕಲಾವಿದರು
4. ಸೀತವ್ವ ಲಮಾಣಿ , ಧಾರವಾಡ ಜಿಲ್ಲೆ ನೃತ್ಯ
5. ರಾಘವೇಂದ್ರ ನಾಯಕ್ , ದಾವಣಗೆರೆ ಜಿಲ್ಲೆ ಭಾಷಾ ಜಾಗೃತಿ
ಸರ್ವ ಸದಸ್ಯರ ಸಭೆಯಲ್ಲಿ ಈ ಕೆಳಕಂಡಂತೆ ಸಾಹಿತಿ, ಕಲಾವಿದರನ್ನು 2023ಹಾಗೂ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿರುತ್ತದೆ. ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25,000-00ಗಳ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.


IV. 2023 ನೇ ಸಾಲಿನʻವಾರ್ಷಿಕ ಪ್ರಶಸ್ತಿʼಪುರಸ್ಕೃತರು
ಕ್ರ.ಸಂ ಹೆಸರು ಕ್ಷೇತ್ರ ಜಿಲ್ಲೆ
1. ಗೋವಿಂದ ಬಂಜಾರ, ಭಜನೆ ಬಸವಕಲ್ಯಾಣ ತಾ.
2. ಸೋಮ್ಲವ್ವಾ ಪುಟ್ಟಪ್ಪಾ ಲಮಾಣಿ, ಬಂಜಾರ ಕಲಾವಿದೆ ಉತ್ತರ ಕನ್ನಡ
3. ವೆಂಕಟೇಶ್ ನಾಯ್ಕ, ನಗಾರಿ ಕಲಾವಿದ ಚಿತ್ರದುರ್ಗ ಜಿಲ್ಲೆ
4. ಕುಬೇರನಾಯಕ್ ಎಲ್, ಗಾಯಕ ದಾವಣಗೆರೆ ಜಿಲ್ಲೆ
5. ಸುಮಂಗಲವ್ವ ಪೊ. ಲಂಬಾಣಿ, ಬಂಜಾರ ನೃತ್ಯ ತರಬೇತಿ ಧಾರವಾಡ ಜಿಲ್ಲೆ
6. ರಾಜನಾಯ್ಕ s/o ಗೋಪಲನಾಯ್ಕ, ಬಂಜಾರ ಮದುವೆ ಶಾಸ್ತ್ರಗಳು ಚಾಮರಾಜನಗರ ಜಿಲ್ಲೆ
7. ಡಾ. ಬಿ.ಎಸ್ ಪುಷ್ಪ, ಶೈಕ್ಷಣಿಕ/ಕಸೂತಿ ವಿಜಯನಗರ ಜಿಲ್ಲೆ
8. ಸುನೀಲ ಕುಮಾರ ಚವ್ಹಾಣ, ಬಂಜಾರಭಾಷೆ;ಮೊದಲ ಸಿನಿಮಾ ನಟ ಹಾವೇರಿ ಜಿಲ್ಲೆ
9. ಹನುಮಂತನಾಯ್ಕ್ , ಬಂಜಾರ ಕಲಾ ಸಂಘಟಕ, ಪೂಜಾ ಕುಣಿತ ರಾಮನಗರ ಜಿಲ್ಲೆ
10. ಆಶಾ ರಾಠೋಡ್, ಬಂಜಾರ ನೃತ್ಯ/ಕಸೂತಿ ಬೀದರ್ ಜಿಲ್ಲೆ
V. 2024 ನೇ ಸಾಲಿನʻವಾರ್ಷಿಕ ಪ್ರಶಸ್ತಿʼಪುರಸ್ಕೃತರು
ಕ್ರ.ಸಂಖ್ಯೆ ಹೆಸರು ಕ್ಷೇತ್ರ ಜಿಲ್ಲೆ
1. ಡಾ. ಎಲ್. ಪಿ. ನಾಯಕ ಕಠಾರಿ, ಶೈಕ್ಷಣಿಕ/ಯುವಕರಿಗೆ ತರಬೇತಿ ಹೂವಿನಹಡಗಲಿ
2. ಭಾಗ್ಯಬಾಯಿ ಕೆ ಬಂಜಾರ, ನೃತ್ಯ ಕನಕಪುರ
3. ಛತ್ರಪ್ಪ ತಂಬೂರಿ , ರಂಗಭೂಮಿ ಕೊಪ್ಪಳ ಜಿಲ್ಲೆ
4. ಕಾಂತ ನಾಯಕ್ ಬಂಜಾರ ವಾಝ, ಪಟ ಕುಣಿತ ರಾಮನಗರ ಜಿಲ್ಲೆ
5. ಎಸ್. ಮೀಠ್ಯಾನಾಯ್ಕ್, ಗಾಯನ ಚಿತ್ರದುರ್ಗ ಜಿಲ್ಲೆ
6. ಸಿ.ಹೆಚ್ ಉಮೇಶ್ ನಾಯಕ್, ಗಾಯಕರು ದಾವಣಗೆರೆ ಜಿಲ್ಲೆ
7. ಅಶೋಕ ಸೋಮಲು ವಾಲಿಕಾರ, ಬಂಜಾರ ಹಲಗೆ ವಿಜಯಪುರ ಜಿಲ್ಲೆ
8. ಎಲ್. ಎಂ ನಾಗರಾಜು, ಮಾಧ್ಯಮ, ಬೆಂಗಳೂರು
9. ರಮೇಶ ಮಂಗ್ಲಪ್ಪ ಲಮಾಣಿ ಗಾಯನ ಗದಗ ಜಿಲ್ಲೆ
10. ಜ್ಯೋತಿ ಎನ್, ನೃತ್ಯ/ ತರಬೇತಿ ವಿಜಯನಗರ ಜಿಲ್ಲೆ
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ 2023 ಹಾಗೂ2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ವಾರ್ಷಿಕ  ಪ್ರಶಸ್ತಿ ಬಹುಮಾನ ವಿತರಣಾ ಸಮಾರಂಭವನ್ನು ಮಾರ್ಚ್ ಮಾಹೆಯಲ್ಲಿ ಏರ್ಪಡಿಸಲಾಗುವುದು ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ ಎ.ಆರ್. ಗೋವಿಂದಸ್ವಾಮಿ ತಿಳಿಸಿದ್ದಾರೆ.

Leave a Reply