ಜೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ, ನಟ ರಮೇಶ್ ಅರವಿಂದ್ , ”ನಿನ್ನ ತಂಗಿ ಯಾರಾದ್ರೂ ಮೆಕ್ಯಾನಿಕ್ ಒಬ್ಬನನ್ನು ಪ್ರೀತಿಸಿದರೆ ನಿನ್ನ ತಂಗಿಗೆ ಹೇಗೆ ಬುದ್ಧಿ ಹೇಳ್ತೀಯ? ನಿನಗೆ ತೋಚಿದ್ದನ್ನು ತೋಚಿದಂತೆ ಮಾತಾಡು” ಎಂದು ಒಬ್ಬ ಬಾಲಕಿಗೆ ಕೇಳುತ್ತಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಆಗ ಆ ಹುಡುಗಿಯು, ‘ಕೊಚ್ಚೆ ಗುಂಡಿಗೆ ಬೀಳಬೇಡ. ದುಡ್ಡು ಮುಖ್ಯ. ನೀನು ಮೆಕ್ಯಾನಿಕ್ ನ ಪ್ರೀತಿಸಿದರೆ ಗ್ರೀಸು ತಿಂದ್ಕೊಂಡು ಬದುಕಬೇಕಾಗುತ್ತೆ” ಎಂದು ದೊಡ್ಡ ಉಮೇದಿನಿಂದ ಹೇಳುತ್ತಾಳೆ. ಆ ಹುಡುಗಿಯ ಮಾತು ಕೇಳಿ, ರಮೇಶ್ ಅರವಿಂದ್ ಮತ್ತು ಆತನ ಜೊತೆಯಲ್ಲಿದ್ದ
ಹೊಟ್ಟೆ ತುಂಬಿದ ಅಹಂಕಾರಿಗಳು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಆ ಹುಡುಗಿಯನ್ನು ಮತ್ತಷ್ಟು ಹುರಿದುಂಬಿಸಿ ಪ್ರಚೋದಿಸುತ್ತಾರೆ.
ಆಗ ಆ ಹುಡುಗಿ, “ಮೆಕ್ಯಾನಿಕ್ ಗಳನ್ನು ಪ್ರೀತಿಸುವುದು ಕೊಚ್ಚೆ ಗುಂಡಿಗೆ ಬಿದ್ದಂತೆ, ಗ್ರೀಸ್ ತಿಂದು ಬದುಕಬೇಕಾಗುತ್ತೆ” ಎಂದು ಹೇಳುತ್ತಾಳೆ. ಮೌಲ್ಯಪ್ರಜ್ಞೆ ಕಳೆದುಕೊಂಡ ಆ ಹುಡುಗಿಗೆ ಈ ಮಹನೀಯರು ಬುದ್ಧಿ ಹೇಳುವುದು ಬಿಟ್ಟು ಚಪ್ಪಾಳೆ ತಟ್ಟಿ ಕೇಕೆಹಾಕಿ ಶಿಳ್ಳೆ ಹೊಡೆದು ನಗುತ್ತಾರೆ.
ಮೆಕ್ಯಾನಿಕ್ ಗಳ ಅಥವಾ ಇನ್ನಾವುದೇ ಜನರ ಬಡತನದ ಬದುಕನ್ನು ಲೇವಡಿ ಮಾಡಿಕೊಂಡು ನಗುವ ಇವರು ಎಂತಹ ಕ್ರೂರಿಗಳಿರಬಹುದು ? ಸಿರಿವಂತಿಕೆಯ ಅಹಂಕಾರ ನೆತ್ತಿಗೇರಿ ಮಾನವೀಯತೆಯ ಚಿಗುರನ್ನೇ ಒಸಕಿ ಹಾಕುವಷ್ಟು ಮನುಷ್ಯರು ಕ್ರೂರಿಗಳಾಗಬಾರದು.
– ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




