೧೩ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡಿಗರ ನಡಿಗೆ ಕಸಾಪದೆಡೆಗೆ
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ೧೩ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಾಮರಾಜಪೇಟೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಚಿಂತಕರು, ಪತ್ರಕರ್ತರು ಹಾಗೂ ಸಾಹಿತಿಗಳಾದ ಶ್ರೀ ಶೂದ್ರ ಶ್ರೀನಿವಾಸ್ ಅವರು ಆಯ್ಕೆಯಾಗಿದ್ದಾರೆ.
- ಮಾಂಜಾ ದಾರ ಮಾರಾಟ, ಬಳಕೆ ನಿಷೇಧಕ್ಕೆ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್
- ಶೂದ್ರ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
- ಕಬ್ಬಿಗೆ ಬೆಂಬಲ ಬೆಲೆ, ಸಾಲ ಮನ್ನಾಗೆ ಆಗ್ರಹಿಸಿ ಗಣಂಗೂರು ಟೋಲ್ ಬಳಿ ರೈತರ ಹೆದ್ದಾರಿ ಬಂದ್
- ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹ
- ಇನ್ಸ್ಟಾಗ್ರಾಮ್ಗೆ ಎಂಟ್ರಿ ಕೊಟ್ಟ ಸೋನಿಯಾ ಗಾಂಧಿ
‘ಕನ್ನಡಿಗರ ನಡಿಗೆ : ಕಸಾಪದೆಡೆಗೆ’ ಹಾಗೂ “ಬೆಂಗಳೂರಿನಲ್ಲಿ ಕನ್ನಡ ಉಳಿದರೆ, ಕರ್ನಾಟಕದಲ್ಲಿ ಕನ್ನಡ ಉಳಿದೀತು” ಎಂಬ ಆಶಯದೊಂದಿಗೆ ಆಯೋಜಿಸಲಾಗಿರುವ ಈ ಸಮ್ಮೇಳನ ಕೇವಲ ನುಡಿಜಾತ್ರೆಯಷ್ಟೇ ಅಲ್ಲದೆ, ಚಿಂತನೆ, ರಂಜನೆ ಮತ್ತು ಅಭಿನಂದನೆಗಳ ಸಂಗಮವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಮ್ಮೇಳನದ ವಿವರಗಳು:
ಸಮ್ಮೇಳನಾಧ್ಯಕ್ಷರು: ಶೂದ್ರ ಶ್ರೀನಿವಾಸ್
ದಿನಾಂಕ: ೩೦-೧೦-೨೦೨೬ ಮತ್ತು ೩೧-೧೦-೨೦೨೬ (ಶುಕ್ರವಾರ ಮತ್ತು ಶನಿವಾರ)
ಸಮಯ: ಬೆಳಗ್ಗೆ ೦೯:೦೦ ರಿಂದ ರಾತ್ರಿ ೦೮:೦೦ ರವರೆಗೆ
ಸ್ಥಳ:
1. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದ ಒಳಾಂಗಣ ಮತ್ತು ಹೊರಾಂಗಣ
2. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ. ಅಂಬರೀಷ್ ಆಡಿಟೋರಿಯಂ, ಡಾ. ರಾಜಕುಮಾರ್ ಭವನ
ವಿಳಾಸ: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು – ೫೬೦ ೦೧೮

ಸಾಹಿತ್ಯಾಭಿಮಾನಿಗಳಿಗೆ ಆಹ್ವಾನ: ಎರಡು ದಿನಗಳ ಕಾಲ ನಡೆಯಲಿರುವ ಈ ಅಕ್ಷರ ಜಾತ್ರೆಗೆ ಬೆಂಗಳೂರಿನ ಸಮಸ್ತ ಸಾರ್ವಜನಿಕರು, ಸಾಹಿತ್ಯಾಸಕ್ತರು ಹಾಗೂ ಅವರ ಕುಟುಂಬ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: ೯೪೪೮೭೨೦೯೫೧




