ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಹೆಸರಿನಲ್ಲಿ ದೇಶದಲ್ಲಿ ಹಲವಾರು ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಬಿಜೆಪಿಗೆ ಅನುಕೂಲವಾಗುವಂತೆ ಸಿದ್ಧಪಡಿಸಿಕೊಂಡು ಚುನಾವಣೆಗಳನ್ನ ನಡೆಸಿ, ಚುನಾವಣಾ ಆಯೋಗದ ಸಹಕಾರದಿಂದ ಚುನಾವಣೆಗಳಲ್ಲಿ ಗೆಲುವನ್ನು ಸಾಧಿಸಿರುವ, ಬಿಜೆಪಿಯ ನಾಯಕರಿಗೆ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿರುವ ಡಿ.ಕೆ.ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಹರಿಪ್ರಸಾದ್ ಅವರು ಮತದಾರ ಪಟ್ಟಿಯಲ್ಲಿನ ಪರಿಷ್ಕರಣೆಯ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಹಿಂದುಳಿದ ವರ್ಗದವರು, ದಲಿತರು ಮತ್ತು ಅಲ್ಪಸಂಖ್ಯಾತಕರ ಮತಗಳನ್ನು ಫಾರಂ ನಂಬರ್ ಸೆವೆನ್ ಬಳಸಿ ತೆಗೆದು ಹಾಕುವಂತಹ ಕುತಂತ್ರವನ್ನು ಗಮನಿಸಿ, ಅದರ ವಿರುದ್ಧ ಚುನಾವಣಾ ಆಯೋಗದ ಅಧಿಕಾರಿಗಳ ಕ್ರಮಕ್ಕೆ ಒತ್ತಾಯಿಸಿ ಹೋರಾಟವನ್ನು ಮಾಡುತ್ತಿದ್ದಂತೆಯೇ, ರಾಜ್ಯದ ಬಿಜೆಪಿ ನಾಯಕರು ಇದಕ್ಕೆ ಧರ್ಮದ ಲೇಪನವನ್ನು ಹಚ್ಚಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
- ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನೆ
- ತಪ್ಪು ಮುಚ್ಚಿಕೊಳ್ಳಲು ಧರ್ಮದ ಲೇಪನ ಹಚ್ಚುವ ಬಿಜೆಪಿ ನಾಯಕರು
- ರಾಷ್ಟ್ರಪಿತ ಗಾಂಧೀಜಿ ಹಾಗೂ ಮಾಜಿ ಪ್ರಧಾನಿಗಳ ಹತ್ಯೆ ಸಮರ್ಥನೆ
- ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ನಾಯಕರಿಂದ ರಾಜಕೀಯ ಒತ್ತಡ: ಆರ್.ಅಶೋಕ
- ದುರುದ್ದೇಶಪೂರ್ವಕ Form-7 ಸಲ್ಲಿಕೆ ಕುರಿತು SIT ತನಿಖೆ ನಡೆಸಿ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗ ಸಂವಿಧಾನಾತ್ಮಕವಾದ ಸಂಸ್ಥೆಯಾಗಿದ್ದು, ಅದು ಯಾವುದೇ ಸರ್ಕಾರದ ಅಥವಾ ನಾಯಕರ ಅಡಿಯಲ್ಲಿ ಕೆಲಸವನ್ನ ಮಾಡುವಂತಿಲ್ಲ. ಆದರೆ ಸದ್ಯದಲ್ಲಿ ಚುನಾವಣಾ ಆಯೋಗ ಮತ್ತು ಅದರ ಮುಖ್ಯಆಯುಕ್ತರು ಬಿಜೆಪಿಯ ನಾಯಕರ ಆದೇಶದಂತೆ ನಡೆದುಕೊಳ್ಳುತ್ತಾ ಅವರಿಗೆ ಅನುಗುಣವಾಗಿ ಪರಿಷ್ಕರಣೆಯಲ್ಲಿ ಅನೇಕ ಮಾರ್ಗಗಳನ್ನು ಕಲ್ಪಿಸಿ ಕೊಟ್ಟಿರುವುದನ್ನ ಗಮನಿಸಿದಾಗ ಚುನಾವಣಾ ಆಯೋಗದ ಸ್ಥಿತಿ ಈ ಮಟ್ಟಕ್ಕೆ ಬಂದು ತಲುಪಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಮಾರಕವಾದದ್ದು.
ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಹರಿಪ್ರಸಾದ್ ಅವರು ರಾಜ್ಯದ ನಿಜವಾದಂತಹ ಮತದಾರರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಹೋರಾಟ ಮಾಡುತ್ತಿರುವುದಕ್ಕೆ ಪ್ರಜಾಪ್ರಭುತ್ವವನ್ನ ಪ್ರೀತಿಸುವ ಪ್ರತಿಯೊಬ್ಬರು ಅಭಿನಂದಿಸಲೇಬೇಕು.
ಸದಾ ಬಾಂಗ್ಲಾದೇಶದ ವಲಸಿಗರು ಬಂದಿದ್ದಾರೆ, ಅವರ ಮತಗಳನ್ನು ಪಡೆದುಕೊಂಡು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳುತ್ತಾ, ಪರಿಷ್ಕರಣೆಯಲ್ಲಿ ಅವರ ಮತಗಳನ್ನು ತೆಗೆದು ಹಾಕುತ್ತಿದ್ದೇವೆ ಎಂದು ತಮ್ಮ ಕುತಂತ್ರಗಳಿಗೆ ಸಮರ್ಥನೆಯನ್ನು ಕೊಡುತ್ತಾರೆ.
ಕಳೆದ 12 ವರ್ಷದ ಅವಧಿಯಲ್ಲಿ ಭಾರತ ದೇಶದಿಂದ, ಅಸ್ಸಾಮಿನಿಂದ, ಬಾಂಗ್ಲಾದೇಶಕ್ಕೆ ಮರಳಿ ಹೋಗಿರುವಂತಹ ವಲಸಿಗರು ಕೇವಲ ಎರಡರಿಂದ ಮೂರು ಸಾವಿರ ಮಂದಿ ಮಾತ್ರ.
ಇನ್ನು ಪಶ್ಚಿಮ ಬಂಗಾಳದಿಂದಲೂ ಕೆಲವೇ, ಕೆಲವು ಸಾವಿರ ಮಂದಿ ಮಾತ್ರ ಬಾಂಗ್ಲಾದೇಶಕ್ಕೆ ವಲಸಿಗರು ಮರಳಿ ಹೋಗಿದ್ದಾರೆ ಅಂಕಿಅಂಶಗಳ ಪ್ರಕಾರ ಕಳೆದ 20 ವರ್ಷದ ಅವಧಿಯಲ್ಲಿ ಮತ್ತು ವಿಶೇಷವಾಗಿ ಕಳೆದ 12 ವರ್ಷದ ಅವಧಿಯಲ್ಲಿ ಕೇವಲ, ಕೆಲವೇ ಕೆಲವು ಸಾವಿರ ಮಂದಿ ಮಾತ್ರ ಬಾಂಗ್ಲಾದೇಶಕ್ಕೆ ವಲಸಿಗರು ಮರಳಿ ಹೋಗಿದ್ದಾರೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶಕ್ಕೆ ವಲಸಿಗರನ್ನು ಹಿಂತಿರುಗಿಸಿರುವುದು 2009 ರಿಂದ 2011ರ ಅವಧಿಯಲ್ಲಿ ಎನ್ನುವುದನ್ನು ಗಮನಿಸಬೇಕಾಗಿದೆ.
ಬಾಂಗ್ಲಾದೇಶದ ಗಡಿ ಬೆಂಗಳೂರಿನ ಪಕ್ಕದಲ್ಲಿ ಇಲ್ಲ. ಕರ್ನಾಟಕದ ಪಕ್ಕದಲ್ಲಿ ಇಲ್ಲ. ಅದು ಇರುವುದು ಪಶ್ಚಿಮ ಬಂಗಾಳ, ಅಸ್ಸಾಂ, ಮುಂತಾದಂತಹ ರಾಜ್ಯಗಳಲ್ಲಿ. ಅಲ್ಲಿಂದ ಮಾತ್ರ ಅಕ್ರಮ ವಲಸಿಗರು ಬರಲು ಸಾಧ್ಯವಿದೆ. ಆದರೆ ಬಿಜೆಪಿಯ ಸರ್ಕಾರ ಕೇಂದ್ರದಲ್ಲಿ ಕಳೆದ 12 ವರ್ಷಕ್ಕೂ ಹೆಚ್ಚು ಅವಧಿಯಿಂದ ಅಧಿಕಾರದಲ್ಲಿದೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಿ ಬರುವ ವಲಸಿಗರನ್ನು ತಡೆಯಲು ಯಾಕೆ ಸಾಧ್ಯವಾಗಿಲ್ಲ? ಇದು ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆಯ ಜವಾಬ್ದಾರಿಯಾಗಿರುತ್ತದೆ.
ದೇಶದ ಗಡಿಯಿಂದ ಅವರು ರೈಲುಗಳಲ್ಲಿ ವಿವಿಧ ರಾಜ್ಯಕ್ಕೆ ಬರುವತನಕ ಗೃಹ ಇಲಾಖೆ ಇವರನ್ನು ಏಕೆ ನಿಯಂತ್ರಿಸಲಾಗುತ್ತಿಲ್ಲ? ಮತ್ತು ಇವರು ಹೆಚ್ಚಾಗಿ ಬರುವುದು ರೈಲುಗಳಲ್ಲಿ ಆಗಿರುವುದರಿಂದ ರೈಲ್ವೆ ಇಲಾಖೆ ಇದರ ಬಗ್ಗೆ ಗಮನಹರಿಸಲು ಯಾರು ಬೇಡವೆಂದು ಹೇಳಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭದಲ್ಲಿ ಯಾರು ನಿಧನರಾಗಿರುವ ಮತದಾರರನ್ನು ಸೇರಿಸಿ ಎಂದು ಹೇಳುತ್ತಿಲ್ಲ. ಎರಡೆರಡು ಕಡೆ ಮತದಾರ ಪಟ್ಟಿಯಲ್ಲಿ ಹೆಸರನ್ನು ಉಳಿಸಿಕೊಡಿ ಎಂದು ಯಾರೂ ಕೇಳುತ್ತಿಲ್ಲ. ಬಾಂಗ್ಲಾದೇಶದಿಂದ ವಲಸೆ ಬಂದಿರುವ ಅಕ್ರಮ ವಲಸಿಗರನ್ನು ಮತದಾರ ಪಟ್ಟಿಯಲ್ಲಿ ಸೇರಿಸಿ ಎಂದು ಯಾರೂ ಕೇಳುತ್ತಿಲ್ಲ. ಧರ್ಮದ ಹೆಸರಿನಲ್ಲಿ ಮತ್ತು ಧ್ವನಿ ಇಲ್ಲದವರ ಕಾರಣದಿಂದ ಈ ದೇಶದಲ್ಲಿಯೇ ಹಲವಾರು ಶತಮಾನಗಳಿಂದ ಉಳಿದುಕೊಂಡಿರುವ ಈ ದೇಶದ ನಾಗರೀಕರಾಗಿರುವ ಈ ದೇಶದ ಸಂವಿಧಾನವನ್ನು ಒಪ್ಪಿ ಬದುಕುತ್ತಿರುವ, ನೈಜ ಮತದಾರರಿಗೆ ಮತದಾನದ ಹಕ್ಕಿನಿಂದ ವಂಚನೆ ಯಾಗಬಾರದು ಎಂಬುದು ಅಷ್ಟೇ ಉದ್ದೇಶವಾಗಿರುತ್ತದೆ.
ಯಾವುದೇ ಕಾರಣಕ್ಕೂ ಮುಸ್ಲಿಂ ರಾಷ್ಟ್ರಗಳೊಂದಿಗೆ ವ್ಯಾಪಾರ ವ್ಯವಹಾರ ನಡೆಸುವುದಿಲ್ಲ ಎಂದು ಘೋಷಿಸಿ ಬಿಡಲಿ. ವ್ಯಾಪಾರ ವ್ಯವಹಾರ ಮುಂತಾದ ಕಾರಣಗಳಿಗೆ ವಿವಿಧ ದೇಶಗಳಿಗೆ ವಿವಿಧ ಧರ್ಮದ ಜನರು ಆಳುತ್ತಿರುವ ರಾಷ್ಟ್ರಗಳೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಧರ್ಮದ ವಿಚಾರ ಇವರಿಗೆ ನೆನಪಿಗೆ ಬರುವುದಿಲ್ಲ.
ಭಾರತದಲ್ಲಿ ಮಾತ್ರ ಚುನಾವಣೆಯ ಸಂದರ್ಭದಲ್ಲಿ ಇವರಿಗೆ ಧರ್ಮಗಳು ನೆನಪಿಗೆ ಬರುತ್ತವೆ. ಅನ್ಯ ಧರ್ಮದವರಿಗೆ ಮತದಾನದ ಹಕ್ಕನ್ನು ಕೊಡುವ ವಿಚಾರದಲ್ಲೂ ತಕರಾರು ಇರುತ್ತದೆ. ಅನಾವಶ್ಯಕವಾಗಿ ಅವರುಗಳ ವಿಚಾರವನ್ನು ಪ್ರಸ್ತಾಪಿಸುತ್ತಾ ಭಾಷಣವನ್ನು ಮಾಡದಿದ್ದರೆ ಇವರಿಗೆ ಸಮಾಧಾನವೇ ಆಗುವುದಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




