ತುಮಕೂರು: ಪ್ರೊ. ಬರಗೂರು ರಾಮಚಂದ್ರಪ್ಪ ಅವರ ‘ಬಯಲಾಟದ ಭೀಮಣ್ಣ’ ಕಥೆ ಅಥವಾ ‘ಮನುಷ್ಯರು ಬೇಕಾಗಿದ್ದಾರೆ, ಹುಡುಕೋಣ ಬನ್ನಿ’ ಲೇಖನ ಮತ್ತು ಡಾ. ಲಲಿತಾ ಸಿದ್ಧಬಸಯ್ಯ ಅವರ ‘ಮೇಡಂ ಅಂಡ್ ಆಡಂ’ ಕಥೆ ಅಥವಾ ಆಯ್ದ ಐದು ಕವಿತೆಗಳ ಕುರಿತು ವಿಮರ್ಶಾ ಬರಹಗಳನ್ನು ಕಳುಹಿಸಲು ಕೋರಲಾಗಿದೆ.
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
- ಮ್ಯಾಥ್ಎರಾ ಟೆಕ್ ಪ್ರೈವೇಟ್ ಲಿಮಿಟೆಡ್ ನಿಂದ ಪದವೀಧರರಿಗೆ ಉದ್ಯೋಗಾವಕಾಶ
ಸೂಚನೆಗಳು:
ಈ ಮೇಲಿನ ಇಬ್ಬರೂ ಲೇಖಕರ ಎರಡು ಬರಹಗಳಲ್ಲಿ, ತಲಾ ಒಂದೊಂದು ಬರಹವನ್ನು ಕುರಿತು ವಿಮರ್ಶೆ ಬರೆಯಬೇಕು. ಅಂದರೆ ಸ್ಪರ್ಧೆಗೆ ಎರಡು ಲೇಖನಗಳನ್ನು ಕಳುಹಿಸಬೇಕು. ಒಂದೇ ಲೇಖಕರ ಎರಡು ಬರಹಗಳನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ.
ಗರಿಷ್ಠ ಮಿತಿ: ಎರಡೂ ಲೇಖನಗಳು ಸೇರಿ ಫುಲ್‌ಸ್ಕೇಪ್ 8-10 ಪುಟ ಅಥವಾ 2000-3000 ಪದಗಳು.
ವಿದ್ಯಾರ್ಥಿಯು ಕಾಲೇಜಿನ ಐಡಿ ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ವಿದ್ಯಾರ್ಥಿಯ ಸ್ವಂತ ಬರಹವೆಂದು ಪ್ರಮಾಣೀಕರಿಸಲಾದ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರವನ್ನು ಲಗತ್ತಿಸಿರಬೇಕು.
ಪ್ರತಿ ಕಾಲೇಜಿನಿಂದ ಗರಿಷ್ಠ ನಾಲ್ಕು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಕಡೆಯ ದಿನಾಂಕ ಜನವರಿ, 27, 2026 ರ ಒಳಗೆ ಡಾ. ನಾಗಭೂಷಣ ಬಗ್ಗನಡು, ಮುಖ್ಯಸ್ಥರು, ಕನ್ನಡ ವಿಭಾಗ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, 577502 (ಮೊ. 9964852581) ಇವರಿಗೆ ತಲುಪುವಂತೆ ಬರಹಗಳನ್ನು ನೇರವಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬೇಕು.
ಆಯ್ದ ಸಾಹಿತಿಗಳ ಲೇಖನ ಮತ್ತು ಕಥೆಗಳನ್ನು ಈ ಪೋಸ್ಟರ್‌ನೊಂದಿಗೆ ಕಳುಹಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನಿಮ್ಮ ಕಾಲೇಜಿನ ಆಯೋಜಕರಿಂದ ಪಡೆದುಕೊಳ್ಳಬಹುದು.
ಗಮನಿಸಿ: ಭಾನುವಾರ, ಫೆಬ್ರವರಿ 1, 2026 ರಂದು, ತುಮಕೂರಿನ ಕನ್ನಡ ಭವನದಲ್ಲಿ ನಡೆಯುವ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಪುಸ್ತಕಗಳ ಖರೀದಿಗಾಗಿ ಕೆಳಗಿನ ಮೊತ್ತದ ವೋಚರ್ ನೀಡಲಾಗುವುದು.
ಪ್ರಥಮ ಬಹುಮಾನ: ರೂ.1500/-
ದ್ವಿತೀಯ ಬಹುಮಾನ: ರೂ.1250/-
ತೃತೀಯ ಬಹುಮಾನ: ರೂ.1000/-
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮಹೇಶ್ ಕುಮಾರ್ ಸಿ. ಎಸ್., ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, 88841 51513
ಸರ್ವೆ ನಂ. 66, ಬುರುಗುಂಟೆ ಹಳ್ಳಿ, ಬಿಕ್ಕನಹಳ್ಳಿ ಮುಖ್ಯರಸ್ತೆ, ಸರ್ಜಾಪುರ, ಬೆಂಗಳೂರು – 562125 | 080 66144900





