ಪ್ರಿಯರೇ, ಮೊನ್ನೆ ಪ್ರಜಾವಾಣಿ ಗೆ ಟಿ.ಎಂ.ಕೃಷ್ಣ ಕುರಿತು ಲೇಖನ ಬರೆಯುವಾಗ ನನಗೆ ಕೇವಲ ಐನೂರು ಶಬ್ದಗಳಲ್ಲಿ ಲೇಖನ ಬರೆಯಬೇಕಾಗಿತ್ತು. ಹಾಗಾಗಿ ಈ ವಿಷಯ ಬರೆಯಲಾಗಲಿಲ್ಲ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಕೃಷ್ಣ ಮತ್ತು ಪೆರುಮಾಳ್ ಮುರುಗನ್ ಇಬ್ಬರೂ ಜೊತೆಗೂಡಿ ಸಂಗಂ ಯುಗದ ತಮಿಳು ಪ್ರಾಚೀನ ಕಾವ್ಯವನ್ನು ಸಂಗೀತಕ್ಕೆ ಅಳವಡಿಸುತ್ತಿದ್ದಾರೆ. ಮುರುಗನ್ ಕಾವ್ಯವನ್ನು ಆಯ್ಕೆ ಮಾಡಿದರೆ, ಟಿ.ಎಂ. ಕೃಷ್ಣ ಅವರು ಅವುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಾರೆ.
ಇಷ್ಟು ಮಾತ್ರವಲ್ಲದೆ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತಾಗಿ ಕಾವ್ಯ ರಚಿಸಿ, ರಾಗ ಸಂಯೋಜನೆಯೊಂದಿಗೆ ಹಾಡಿರುವ ಒಂದು ಹಾಡು ಈಗ ತಮಿಳುನಾಡಿನ ತಳವರ್ಗದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ.
ವಿಕೃತ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಂದ ನಾಯಕ ವ್ಯಕ್ತಿ ಸ್ವಾತಂತ್ರ್ಯ ತಂದುಕೊಟ್ಟ ಅನನ್ಯ ರತ್ನ ಎಂಬ ಅರ್ಥಗರ್ಭಿತ ಸಾಲುಗಳ ಈ ಕಾವ್ಯವನ್ನು ಪೆರುಮಾಳ್ ಮುರುಗನ್ ರಚಿಸಿದ್ದರೆ, ಟಿ.ಎಂ. ಕೃಷ್ಣ ಅದೇ ತಲ್ಲೀನತೆ ಹಾಗೂ ಶ್ರದ್ಧೆಯಿಂದ ಭಾವಪೂರ್ಣವಾಗಿ ಹಾಡಿದ್ದಾರೆ.
ಸಾಹಿತ್ಯ ಮತ್ತು ಸಂಗೀತ ಅಥವಾ ಸಾಂಸ್ಕೃತಿಕ ಲೋಕದ ಎರಡು ಪ್ರತಿಭೆಗಳು ಒಟ್ಟುಗೂಡಿದರೆ, ಏನೆಲ್ಲಾ ಮಾಡಬಹುದು ಎಂಬುದನ್ನು ಈ ಎರಡು ಪ್ರತಿಭೆಗಳು ಮಾಡಿತೋರಿಸಿದ್ದಾರೆ. ಸಂಗೀತವನ್ನು ದಲಿತರ ಮತ್ತು ತಳವರ್ಗದ ಕೇರಿಗೆ ಕೊಂಡೊಯ್ಯುತ್ತಿದ್ದಾರೆ. ಇದು ತಮಿಳುನಾಡಿನಲ್ಲಿ ಬ್ರಾಹಣ್ಯವನ್ನು ಆರಾಧಿಸುವವರ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ. ಯಾರೊಬ್ಬರೂ ಈವರೆಗೆ ಟಿ.ಎಂ. ಕೃಷ್ಣ ಅವರ ಸಂಗೀತ ಕುರಿತಾಗಿ ತುಟಿಬಿಚ್ಚಿ ಮಾತನಾಡಲು ಸಾಧ್ಯವಾಗಿಲ್ಲ. ಇದು ಅವರ ಪ್ರಖರ ಪ್ರತಿಭೆಗೆ ಸಾಕ್ಷಿಯಾಗಿದೆ.
- ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



