ಶರಣರ ವಚನಗಳಲ್ಲಿ ಸಮಸಮಾಜದ ಪರಿಕಲ್ಪನೆ: ಲೇಖನ ಸ್ಪರ್ಧೆ

3 years ago

ಧಾರವಾಡ: ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ
ಗಣಕರಂಗ(ರಿ), ಧಾರವಾಡ ಆಯೋಜಿಸುತ್ತಿರುವ
’ಶರಣರ ವಚನಗಳಲ್ಲಿ ಸಮಸಮಾಜದ ಪರಿಕಲ್ಪನೆ’ ಲೇಖನ ಸ್ಪರ್ಧೆಗೆ ಮುಕ್ತ ಆಹ್ವಾನ.

ವಿಶ್ವಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯಾದ ವಚನ ಸಾಹಿತ್ಯ ಪ್ರಕಾರವು ಹನ್ನೆರಡನೇಯ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ನೇತೃತ್ವದಲ್ಲಿ ಆರಂಭಗೊಂಡ ಶಿವಶರಣರ ಕಾಯಕ, ಸಮಾನತೆ, ದಾಸೋಹ, ಲಿಂಗದೀಕ್ಷೆ, ಅನುಭವ ಮತ್ತು ಅನುಭಾವ ಮುಂತಾದ ಸಮಾಜ ಸುಧಾರಣೆಯ ಹಲವಾರು ಸತ್ವಯುತ ಪರಿಕಲ್ಪನೆಗಳು ಇಂದಿಗೂ ಸಮಾಜದಲ್ಲಿ ಸದೃಢವಾಗಿ ನೆಲೆಯೂರಿವೆ. ಈ ಹಿನ್ನಲೆಯಲ್ಲಿ 890ನೇಯ ಬಸವಣ್ಣನವರ ಜಯಂತಿ ಆಚರಣೆ (23-04-2023) ಪ್ರಯುಕ್ತ ಗಣಕರಂಗ (ರಿ), ಧಾರವಾಡ ಸಂಸ್ಥೆಯು ವೈಚಾರಿಕ ಲೇಖನ ಸ್ಪರ್ಧೆ ಆಯೋಜಿಸಿದೆ.

ದಯವಿಟ್ಟು ಗಮನಿಸಿ

ಲೇಖನ ಸ್ಪರ್ಧೆಯ ವಿಷಯ : ”ಶರಣರ ವಚನಗಳಲ್ಲಿ ಸಮಸಮಾಜದ ಪರಿಕಲ್ಪನೆ”

ಸ್ಪರ್ಧೆಗೆ ಲೇಖನ ಕಳಿಸಲು ಕೊನೆಯ ದಿನಾಂಕ : ಎಪ್ರೀಲ್-20, 2023, ಗುರುವಾರ
ಲೇಖನ ಕಳಿಸಲು ಇಮೇಲ್ : ganakarangaspardhe@gmail.com

ಸ್ಪರ್ಧೆಯ ನಿಯಮಗಳು:
1. ಎಲ್ಲಿಯೂ ಪ್ರಕಟವಾಗಿರದ, ತಪ್ಪಿಲ್ಲದಂತೆ ಟೈಪಿಸಿರುವ, ಉತ್ತಮ ಭಾಷಾ ಬಳಕೆಯ ಎ4 ಹಾಳೆಯಲ್ಲಿ 3 ರಿಂದ 4 ಪುಟಗಳ (ಎರಡು ಸಾವಿರ ಪದಗಳ) ಮಿತಿಯ ಸ್ವರಚಿತ ಲೇಖನಕ್ಕೆ ನಿಮ್ಮದೇ ಸ್ವಂತ ಆಕರ್ಷಕ ಶೀರ್ಷಿಕೆಯನ್ನು ಕಡ್ಡಾಯವಾಗಿ ಹಾಕಿರಬೇಕು. ಹಾಕದಿದ್ದರೆ ಪ್ರಥಮ ಹಂತದಲ್ಲಿ ತಿರಸ್ಕರಿಸಲಾಗುವುದು. ಸಹಕರಿಸಿರಿ.

2. *’ಸ್ಪರ್ಧೆಯ ವಿಷಯದ ಕುರಿತು ಮಾತ್ರ ಲೇಖನವಿರಲಿ. ಬಸವಣ್ಣನವರು, ಶಿವಶರಣರ ಜೀವನ ಚರಿತ್ರೆ ಕಳಿಸಬೇಡಿ.

3. ಸರಿಯಾಗಿ ಗಮನಿಸಿರಿ….ಇಮೇಲ್‌ ಮೂಲಕ ಕಳಿಸುವ ಲೇಖನದ ಜೊತೆಗೆ ನಿಮ್ಮ ಇತ್ತೀಚಿನ ಪೋಟೋ (ಪ್ರಮಾಣಪತ್ರದಲ್ಲಿ ಹಾಕಲು), ಸಂಪೂರ್ಣ ವಿಳಾಸ (ಪಿನ್ ಕೋಡ್ ಸಹಿತ), ಸ್ಪರ್ಧೆಯ updates ತಿಳಿಸಲು ಮೊಬೈಲ್ ನಂಬರ್ ಕಡ್ಡಾಯವಾಗಿ ಬರೆದಿರಬೇಕು.

4. ಸರಿಯಾಗಿ ಗಮನಿಸಿರಿ… ಕೈಬರಹದ ಪೋಟೋ, ಪಿಡಿಎಪ್, ಪೋಟೋ ಮತ್ತಿತರ ಆವೃತ್ತಿಯ ಲೇಖನ ಕಳಿಸಿದರೆ ತಿರಸ್ಕರಿಸಲಾಗುವುದು. ಲೇಖನವು ಕಡ್ಡಾಯವಾಗಿ ನುಡಿ ಫಾಂಟ್ಸ್‌ ಬಳಸಿದ MS Word format ಅಥವಾ ನುಡಿ Unicode fonts ಬಳಸಿದ (ಮೊಬೈಲ್‌ ದಲ್ಲಿ ಟೈಪಿಸಿದ ಮಾದರಿಯಂತೆ) ಲೇಖನ ಕಳಿಸಬೇಕು.

5. ಒಬ್ಬರು ಒಂದೇ ಲೇಖನವನ್ನು ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ.

6. ಫಲಿತಾಂಶ ಪ್ರಕಟವಾಗುವವರೆಗೆ ಲೇಖನವನ್ನು ಬೇರೆಲ್ಲೂ ಪ್ರಕಟಿಸಬಾರದು. ಪ್ರಕಟಿಸಿದರೆ ಸ್ಪರ್ಧೆಗೆ ಪರಿಗಣಿಸುವುದಿಲ್ಲ.

7. ಲೇಖನ ಸ್ಪರ್ಧೆಯಲ್ಲಿ ಯಾರನ್ನಾಗಲಿ, ಯಾವುದೇ ರೀತಿಯ ಅವಹೇಳನಕಾರಿ, ಅಪಮಾನಿಸುವ, ಸಮಾಜವಿರೋಧಿ, ಸಂವಿಧಾನ ವಿರೋಧಿ, ದೇಶದ ಭಾವೈಕ್ಯತೆಗೆ ದಕ್ಕೆ ತರುವ ವಿಷಯಗಳಿರಬಾರದು. ಹಾಗೇನಾದರೂ ಕಂಡು ಬಂದರೆ ಸ್ಪರ್ಧೆಯ ಆರಂಭದಲ್ಲಿಯೇ ಲೇಖನವನ್ನು ಮುಲಾಜಿಲ್ಲದೇ ತಿರಸ್ಕರಿಸಲಾಗುವುದು.

8. ಲೇಖನವನ್ನು ಕಡ್ಡಾಯವಾಗಿ ಇ-ಮೇಲ್ ಗೆ ಮಾತ್ರ ಕಳಿಸಬೇಕು. ಸಂಯೋಜಕರ ಮತ್ತು ಗಣಕರಂಗ ಮುಖ್ಯಸ್ಥರ ವೈಯಕ್ತಿಕ ನಂಬರಿಗೆ ವಾಟ್ಸಪ್ ಮಾಡುವ/ಕಳಿಸುವ ಲೇಖನವನ್ನು ಪರಿಗಣಿಸುವುದಿಲ್ಲ. ಸಹಕರಿಸಿರಿ.

9. ಸ್ಪರ್ಧೆಗೆ ಕಳಿಸುವ ಲೇಖನವನ್ನು ಸ್ವತಃ ಲೇಖಕರು ವಾಚಿಸಿದ ಮೊಬೈಲಿನಲ್ಲಿ ರಿಕಾರ್ಡ್ ಮಾಡಿದ ಆಡಿಯೋ ಕಡ್ಡಾಯವಾಗಿ ಕಳಿಸಬೇಕು. ಆಡಿಯೋ ಆರಂಭದಲ್ಲಿ ಸ್ಪರ್ಧೆಯ ಹೆಸರು, ಸ್ಪರ್ಧೆ ಆಯೋಜನೆ ಮಾಡಿರುವ ಸಂಸ್ಥೆಯ ಹೆಸರು, ನಿಮ್ಮ ಹೆಸರು, ಲೇಖನದ ಶೀರ್ಷಿಕೆ ಇತ್ಯಾದಿಗಳನ್ನು ಕಡ್ಡಾಯವಾಗಿ ಹೇಳಿರಬೇಕು.

10. ಫಲಿತಾಂಶ ಪ್ರಕಟಣೆಯ ನಂತರ ಅಭಿನಂಧನೆ ಸಲ್ಲಿಸುವ ವೇದಿಕೆ ಅಥವಾ ‘ಗೂಗಲ್ ಮಿಟ್’ ಕಾರ್ಯಕ್ರಮದಲ್ಲಿ ಆರಂಭದಿಂದ ಕೊನೆಯವರೆಗೆ ಕಡ್ಡಾಯವಾಗಿ ಭಾಗವಹಿಸಿ ಸ್ಪರ್ಧಾ ವಿಜೇತರಿಗೂ ಹಾಗೂ ತೀರ್ಪುಗಾರರಿಗೂ ಅಭಿನಂದನೆಗಳನ್ನು ಸಲ್ಲಿಸಬೇಕು. ಇಲ್ಲವಾದರೆ ಇ-ಪ್ರಮಾಣಪತ್ರ, ಪುಸ್ತಕ ಗೌರವ ಸಿಗಲಾರದು. ದಯವಿಟ್ಟು ಸಹಕರಿಸಿ.

11. ಗೌರವಾನ್ವಿತ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ತೀರ್ಪಿಗೆ ಎಲ್ಲ ಸ್ಪರ್ಧಿಗಳು ಬದ್ಧರಾಗಿರಬೇಕು. ಈ ವಿಷಯದಲ್ಲಿ ಯಾವುದೇ ಚರ್ಚೆಗೆ ಅವಕಾಶವಿಲ್ಲ. ಸಹಕರಿಸಿರಿ.

12. ಪ್ರಥಮ ಬಹುಮಾನ-ರೂ.1001/-, ದ್ವಿತೀಯ ಬಹುಮಾನ-ರೂ.501/-, ತೃತೀಯ ಬಹುಮಾನ-ರೂ.301/- ಮತ್ತು ಐವರಿಗೆ ತೀರ್ಪುಗಾರರ ಮೆಚ್ಚುಗೆ ಬಹುಮಾನ ನೀಡಲಾಗುವುದು. ವಿಜೇತರಿಗೆ ಮತ್ತು ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣಪತ್ರ, ಪುಸ್ತಕ, ಮತ್ತಿತರ ಗೌರವ ನೀಡಲಾಗುವುದು.

13. ಮುಕ್ತ ಅವಕಾಶದ ಈ ಸ್ಪರ್ಧೆಯಲ್ಲಿ ವಿಶ್ವದ ಎಲ್ಲಾ ಭಾಗಗಳಿಂದ ಬಸವಾಭಿಮಾನಿಗಳು ಮತ್ತು ಆಸಕ್ತರೆಲ್ಲರೂ ಭಾಗವಹಿಸಬಹುದು. ಮುಂಚಿತವಾಗಿ ನೋಂದಣಿ ಇಲ್ಲ. ಪ್ರವೇಶ ಫೀ ಇಲ್ಲ ನೇರವಾಗಿ ಲೇಖನವನ್ನು ಸ್ಪರ್ಧೆಯ ಕೊನೆಯ ದಿನಾಂಕದೊಳಗಾಗಿ ಕಳಿಸಬೇಕು. ಸ್ಪರ್ಧಾಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದವರ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ದಯವಿಟ್ಟು ಸಹಕರಿಸಬೇಕು.

14. ಕೃತಿಚೋರತನಕ್ಕೆ ಸಂಬಂಧಿಸಿದಂತೆ ದೇಶದ ಕಾನೂನು ಕ್ರಮಗಳಿಗೆ ಆಯಾ ಲೇಖಕರು ಜವಾಬ್ದಾರರು. ಗಣಕರಂಗ ಸಂಸ್ಥೆ ಹೊಣೆಗಾರವಲ್ಲ. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ತಿಳಿಸಿದರೆ ಗಣಕರಂಗ ಸಂಸ್ಥೆಯು ಅಂತಹ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಸಹಕಾರವಿರಲಿ.

15. ಸ್ಪರ್ಧೆಯ ನಂತರ ಸೂಕ್ತವೆನಿಸುವ ಲೇಖನಗಳನ್ನು ಸಾಧ್ಯವಾದರೆ ಗಣಕರಂಗ ಪ್ರಕಾಶನದಿಂದ ಮುದ್ರಣ ಅಥವಾ ಡಿಜಿಟಲ್ ಆವೃತ್ತಿ ಸೇರಿದಂತೆ ಆಧುನಿಕ ತಂತ್ರಜ್ಞಾನದ ಸೂಕ್ತ ಆವೃತ್ತಿ/ರೂಪದಲ್ಲಿ ಪ್ರಕಟಿಸುವಿಕೆಯ ಹಕ್ಕನ್ನು ಗಣಕರಂಗ ಪ್ರಕಾಶನವು ಹೊಂದಿರುತ್ತದೆ. ಸಹಕರಿಸಿರಿ.

16. ಕೊನೆಯ ದಿನಾಂಕದ (20-04-2023) ನಂತರ ಬಂದ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಸಹಕರಿಸಿರಿ.

17. ಸ್ಪರ್ಧೆಯ ನಿಯಮಗಳನ್ನು ದಯವಿಟ್ಟು ಸಾವಧಾನವಾಗಿ ಸಂಪೂರ್ಣ ಓದಿಕೊಳ್ಳಿ, ಅನಗತ್ಯ ವಿಚಾರಿಸಬೇಡಿ.

ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ :
ರವಿ ಚಲವಾದಿ,
ಸ್ಪರ್ಧೆಯ ಸಂಯೋಜಕರು-8217645076
&
ಸಿದ್ಧರಾಮ ಹಿಪ್ಪರಗಿ, ಮುಖ್ಯಸ್ಥರು, ಗಣಕರಂಗ (ರಿ), ಧಾರವಾಡ. 9845109480.

Leave a Reply