ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಇಂಜನಿಯರ್ಸ್ ಅಕಾಡೆಮಿ ಸಭಾಂಗಣದಲ್ಲಿ ಟೈನಿ ಸೈಪ್ಸ್ ಶಾಲೆಯ ವಾರ್ಷಿಕೋತ್ಸವ ಸಂಭ್ರಮ ನಡೆಯಿತು.
ಸಂಭ್ರಮ ಉತ್ಸವದಲ್ಲಿ ಮಕ್ಕಳು ಭರತನಾಟ್ಯ, ಕೂಚುಪುಡಿ, ಜಾನಪದ ನೃತ್ಯ, ಸುಗಮ ಸಂಗೀತ ಚಲನಚಿತ್ರಗೀತೆ ವಿವಿಧ ಸಂಗೀತಗಳು ಮಕ್ಕಳು ಪ್ರದರ್ಶನ ಮಾಡಿದರು.
ಶಾಲೆಯ ಅಧ್ಯಕ್ಷ ನಿರಂಜನ್ ಮಾತನಾಡಿ, ಮಕ್ಕಳು ದೇವರ ಸಮಾನ, ಅವರ ಮನಸ್ಸು ಗೆಲ್ಲುವು ಮೂಲಕ ಪಾಠ ಹೇಳಿಕೊಟ್ಟಗ ಮಾತ್ರ ಕಲಿಯುತ್ತಾರೆ. ಮಕ್ಕಳಿಗೆ ಓದುವ, ಕಲಿಯುವ ಜೊತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಮುಖ್ಯ. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಂದ ಮಕ್ಕಳು ಮಾನಸಿಕ, ದೈಹಿಕವಾಗಿ ಸಧೃಢವಾಗಿ ಬೆಳೆಯುತ್ತಾರೆ ಎಂದರು.
ಉತ್ತಮ ವಾತವರಣದಲ್ಲಿ ಮಕ್ಕಳು ಬೆಳವಣಿಗೆ ತಂದೆ, ತಾಯಿಗಳು ಸಹಕಾರ ನೀಡಬೇಕು. ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ಮಕ್ಕಳಿಗೆ ಕಲಿಸಬೇಕು. ಮಕ್ಕಳಿಗೆ ನರ್ಸರಿಯಿಂದ ಪದವಿವರೆಗೆ ಉತ್ತಮ ಶಿಕ್ಷಣ ಲಭಿಸಬೇಕು. ಮಕ್ಕಳು ವಿದ್ಯಾವಂತರಾದರೆ ದೇಶದ ಅಭಿವೃದ್ದಿಗೆ ಅವರು ಕೊಡುಗೆಯಾಗಿ ನಿಲ್ಲುತ್ತಾರೆ ಎಂದರು.
ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು ಮತ್ತು ವಿಜ್ಞಾನ ಮೇಳ, ಕ್ರೀಡಾಕೂಟದಲ್ಲಿ ಗೆದ್ದ ಮಕ್ಕಳಿಗೆ ಪದಕ ವಿತರಿಸಲಾಯಿತು.
ಪ್ರಾಂಶುಪಾಲರಾದ ಶಿಲ್ಪ, ಶಿಕ್ಷಕರಾದ ವಿಜಯಕುಮಾರ್, ಕ್ರಿಕೆಟ್ ಕೋಚ್ ಮಹೇಶ್ ಮೊದಲಾದವರು ಹಾಜರಿದ್ದರು.




