ಹೌದು ರಾಹುಲ್ ಗಾಂಧಿ ನಿಮ್ಮ ದೃಷ್ಟಿಯಲ್ಲಿ ಬಾಲಕರಾದರೆ ಅವರು ಎಂದೂ ಸಹ ಮಾಧ್ಯಮಕ್ಕೆ ಹೆದರಿ ಓಡಿಹೋಗಿರುವುದಿಲ್ಲ. ನಮ್ಮ ಬಾಲಕ ಪ್ರತಿದಿನವೂ ಮಾಧ್ಯಮದವರ ಮುಂದೆ ನಿಂತು ಅವರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರವನ್ನು ಕೊಡುವಂತಹ ಅನುಭವ ಮತ್ತು ತಿಳುವಳಿಕೆ ಇದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ನಮ್ಮ ಬಾಲಕ ಇಡೀ ದೇಶದಾದ್ಯಂತ ಸಾವಿರಾರು ಕಿಲೋಮೀಟರ್ ಗಳ ಪಾದಯಾತ್ರೆಯನ್ನ ಮಾಡಿದರು ಎಲ್ಲಿಯೂ ಆಯಾಸಗೊಳ್ಳಲಿಲ್ಲ, ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ, ಗಟ್ಟಿಯಾದಂತಹ ದೇಹದೊಂದಿಗೆ ಶುದ್ಧ ಮನಸ್ಸಿನೊಂದಿಗೆ ಬದುಕನ್ನ ಸಾಗಿಸುತ್ತಿದ್ದಾರೆ.
ನಮ್ಮ ಬಾಲಕ ತನ್ನ ಪದವಿಯನ್ನು ನಿಖರವಾಗಿ ಹೇಳಿರುತ್ತಾರೆ. ಅದಕ್ಕೆ ಬೇಕಾದ ದಾಖಲೆಯನ್ನು ನೀಡಿರುತ್ತಾರೆ. ನಮ್ಮ ಬಾಲಕ ಸಣ್ಣ ವಯಸ್ಸಿನಲ್ಲಿ ತಮ್ಮ ಅಜ್ಜಿಯ ಘೋರವಾದ ಸಾವನ್ನು ಕಂಡರೂ ಅಂಜಿಕೊಳ್ಳಲಿಲ್ಲ, ಪ್ರಾಯದಲ್ಲಿಯೇ ತಮ್ಮ ತಂದೆಯ ಛಿದ್ರಛಿದ್ರವಾದ ದೇಹವನ್ನು ಕಂಡಾಗಲು ಗಟ್ಟಿ ಮನಸ್ಸಿನಿಂದ ಪರಿಸ್ಥಿತಿಯನ್ನ ಎದುರಿಸಿರುತ್ತಾರೆ.
ನಮ್ಮ ಬಾಲಕ ಬಿಜೆಪಿಯ ನಾಯಕರು ಮತ್ತು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಅವರನ್ನು ಪ್ರತಿದಿನವೂ ಹೀಯಾಳಿಸುತ್ತಾ ಪ್ರತಿ ಹಂತದಲ್ಲೂ ಅಪಮಾನಿಸಿದಾಗಲೂ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ, ಅಧೈರ್ಯಗೊಳ್ಳಲಿಲ್ಲ, ಕುತಂತ್ರಗಳಿಗೆ ಹೆದರಿಕೊಂಡು ಮನೆ ಸೇರಲಿಲ್ಲ.
ನಮ್ಮ ಬಾಲಕ ಯಾವುದೇ ವೇದಿಕೆಯಲ್ಲೂ ಟೆಲಿಪ್ರಾಂಟರ್ ಇಲ್ಲದೆ ಭಾಷಣವನ್ನ ಮಾಡಬಲ್ಲರು, ನಮ್ಮ ಬಾಲಕ ಹುಟ್ಟು ಶ್ರೀಮಂತನಾದರೂ ಶ್ರೀಮಂತಿಕೆಯನ್ನ ತೋರಿಸುವ ಸಲುವಾಗಿ ಪ್ರತಿದಿನವೂ ಹತ್ತಾರು ಬಾರಿ ಬಟ್ಟೆ ಬದಲಾಯಿಸಿ ತಿರುಗಾಡುವುದಿಲ್ಲ.
ನಮ್ಮ ಬಾಲಕ ತಮ್ಮ ರಕ್ಷಣಾ ಕೋಟೆಯನ್ನ ಭೇದಿಸಿಕೊಂಡು ಜನಸಾಮಾನ್ಯರ ನಡುವೆ ಮಾತನಾಡುತ್ತ ಅವರ ಕಷ್ಟಗಳನ್ನ ಕೇಳುತ್ತ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ ಕೊಡುವಂತಹ ಮನಸ್ಸಿದೆ, ಜೀವಕ್ಕೆ ಹೆದರಿ ಭದ್ರತೆಯ ಕೋಟೆಯೊಳಗೆ ಎಂದೂ ಬಂಧಿಯಾದವರಲ್ಲ.
ನಮ್ಮ ಬಾಲಕ ಹತ್ತಾರು ವರ್ಷಗಳ ಹಿಂದೆಯೇ ಮಂತ್ರಿಮಂಡಲದಲ್ಲಿ ಸೇರಿ ಮಂತ್ರಿ ಪದವಿ ಅನುಭವಿಸಬಹುದಾಗಿತ್ತು. ತಮ್ಮ ಬದುಕನ್ನು ಸಂಘಟನೆ ಮತ್ತು ಹೋರಾಟಗಳಿಗಾಗಿ ಮೀಸಲಿಟ್ಟ ಕಾರಣದಿಂದ ಅನೇಕ ಬಾರಿ ಅಧಿಕಾರವನ್ನು ತ್ಯಜಿಸಿರುತ್ತಾರೆ.
ನಮ್ಮ ಬಾಲಕನಿಗೆ ಸುಳ್ಳು ಹೇಳಲು ಬರುವುದಿಲ್ಲ, ಆಡಂಬರದ ಪ್ರಾಸಬದ್ಧವಾದ ಮಾತುಗಳ ಮೂಲಕ ಭಾಷಣವನ್ನು ಮಾಡುವುದಕ್ಕಿಂತ ವಿಚಾರಕ್ಕೆ ಮತ್ತು ಮನಸ್ಸಿನ ಭಾವನೆಗಳಿಗೆ ಮಾತ್ರವೇ ಆದ್ಯತೆಯನ್ನು ನೀಡುತ್ತಾರೆ.
ನಮ್ಮ ಬಾಲಕ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವಂತಹ ಬುದ್ದಿಯುಳ್ಳವರು ಮತ್ತು ಎಂದು ಸಹ ದ್ವೇಷದ, ಮಾತುಗಳನ್ನ ಆಡಿರುವುದಿಲ್ಲ ದ್ವೇಷಕ್ಕೆ ಬದಲಾಗಿ ಪ್ರೀತಿಯಲ್ಲಿ ಹೆಚ್ಚು ನಂಬಿಕೆಯನ್ನು ಉಳ್ಳವರಾಗಿದ್ದಾರೆ.
ನಮ್ಮ ಬಾಲಕ ಕಾಂಗ್ರೆಸ್ ಮುಕ್ತ ಪ್ರಜಾಪ್ರಭುತ್ವವನ್ನ ದೇಶದಲ್ಲಿ ಸ್ಥಾಪಿಸುತ್ತೇವೆ ಎಂದು ಅಬ್ಬರಿಸಿದವರಿಗೆ ಲೋಕಸಭೆಯಲ್ಲಿ ಹೆಚ್ಚು ಸ್ಥಾನವನ್ನು ಗೆದ್ದು ಅಧಿಕೃತ ವಿರೋಧಪಕ್ಷವಾಗಿ ನಿಂತು ಪ್ರತಿಯಾಗಿ ಮಾತನಾಡುವ ಮಟ್ಟಿಗೆ ಪಕ್ಷವನ್ನು ಸಂಘಟಿಸಿ ವಿರೋಧಿಗಳಿಗೆ ಪ್ರತಿಸ್ಪರ್ಧಿಯಾಗಿದ್ದಾರೆ.
ನಮ್ಮ ಬಾಲಕ 56 ಇಂಚಿನ ಎದೆ ಅಳತೆ ಉಳ್ಳವರು ಎಂದು ಎಂದು ಹೇಳಿಕೊಳ್ಳಲಿಲ್ಲ. ಆದರೂ ಪ್ರತಿದಿನ ಹತ್ತಾರು ಗಂಟೆ ನಡೆಯಬಲ್ಲರು, ಈಜಬಲ್ಲರು, ಎತ್ತರದ ಕಟ್ಟಡವ ಹತ್ತಿ ಇಳಿಯಬಲ್ಲರು.
ನಮ್ಮ ಬಾಲಕ ಈ ಬಾರಿ ಚುನಾವಣೆಯಲ್ಲಿ ನಾನೂರಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆಂದು ರಸ್ತೆರಸ್ತೆಯಲ್ಲಿ ಅಬ್ಬರಿಸುತ್ತಿದ್ದವರಿಗೆ ಸರಿಯಾದ ಪಾಠವನ್ನ ತಿಳಿಸಿ 200ರ ಗಡಿಗೆ ತಂದು ನಿಲ್ಲಿಸಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




