ಕಳೆದ ಎರಡು ವರ್ಷಗಳಿಂದ ರಾಹುಲ್ ಗಾಂಧಿ ಇಲ್ಲಿನ ನಿರುದ್ಯೋಗ, ಆರ್ಥಿಕ ಹಿಂಜರಿತ, ಅಗ್ನಿವೀರ್, ಕ್ರೂನಿ ಬಂಡವಾಳಶಾಹಿ ಮತ್ತು ಆರೆಸ್ಸೆಸ್ ನ ನಾಜೀವಾದವನ್ನು ವಿರುದ್ಧ ತಮ್ಮದೇ ರೀತಿ ನೀತಿಯಲ್ಲಿ ಮಾತನಾಡಿದ್ದಾರೆ. ಮಾತನಾಡುತ್ತಿದ್ದಾರೆ. (ಇಲ್ಲಿ ಅವರು ನವ ಉದಾರೀಕರಣ ಕುರಿತು ಯಾವ ನಿಲುವು ತಳೆದಿದ್ದಾರೆ ಎನ್ನುವುದು ಬೇರೆಯದೆ ಚರ್ಚೆ)
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
ತಮ್ಮ ಹೊಸ ಇಮೇಜ್ ನಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡನಾಗಿ ಕಡಿಮೆ ಪ್ರಮಾಣದಲ್ಲಿ ವರ್ತಿಸಿದ್ದಾರೆ. ಇದೆಲ್ಲದರ ಮುಂದಿನ ಬೆಳವಣಿಗೆಯಾಗಿ 2024 ಲೋಕಸಭಾ ಚುನಾವಣೆಯ ಮಹತ್ವದ ಫಲಿತಾಂಶ.
2022 ಮತ್ತು 2024ರ ಭಾರತ ಜೋಡೋ, ನ್ಯಾಯ ಯಾತ್ರೆಗಳು ಇವರ ಸಾಮಾಜಿಕತೆಯ ಕಲಿಕೆಗೆ ಪಠ್ಯಗಳಾಗಿದ್ದು ಚಾರಿತ್ರಿಕ. ಕಳೆದ ಹತ್ತು ವರ್ಷಗಳಲ್ಲಿ ವಂಶಾಡಳಿತದ ಕುಡಿಯಿಂದ ಪಳಗುತ್ತಿರುವ ರಾಜಕಾರಣಿಯಾಗಿ ‘ರಾಗಾ’ ರೂಪುಗೊಂಡ ರೀತಿ ಅಧ್ಯಯನ ಯೋಗ್ಯ. ಕಾಂಗ್ರೆಸ್ ನ ನ್ಯಾಯ ಪತ್ರ ಪ್ರಣಾಳಿಕೆಯಲ್ಲಿ ಸಮಾಜವಾದದ ಸಮಾಜೋ-ಆರ್ಥಿಕತೆಯ ಹೊಳಹುಗಳಿಗೆ ರಾಗಾ ಅವರ ಹತ್ತು ವರ್ಷಗಳ ರೂಪುಗೊಂಡ ಪ್ರಕ್ರಿಯೆಯೇ ಕಾರಣ. ಇವರ ಸಾಮಾಜಿಕತೆಯ ಹುರುಪು ಕಾಂಗ್ರೆಸ್ ಪಕ್ಷಕ್ಕೆ ಎಪ್ಪತ್ತರ ದಶಕದ ಗರೀಬಿ ಹಟಾವೋ ಮುಖವಾಡ ತೊಡಿಸಿದ್ದಂತೂ ನಿಜ.
ಬಹುಶಃ ಮುಂದಿನ 2024-2029ರ ಅವಧಿ ರಾಗಾ ಅವರಿಗೆ ಪರೀಕ್ಷೆಯ ಘಟ್ಟ. ತಮ್ಮ ಇಂದಿನ ಹುರುಪು ಕಾಯ್ದುಕೊಂಡರೆ, ಸಮಾಜೋ- ಆರ್ಥಿಕತೆ ಕುರಿತು ಮತ್ತಷ್ಟು ಪ್ರಬುದ್ಧರಾದರೆ, seasoned ರಾಜಕಾರಣಿಯ ಪಟ್ಟುಗಳನ್ನು ಕಲಿತುಕೊಂಡರೆ, ಕಾಂಗ್ರೆಸ್ ನಂತಹ ಜಡ್ಡುಗಟ್ಟಿದ ಪಕ್ಷವನ್ನು ಪಳಗಿಸುವುದನ್ನು ಕಲಿತುಕೊಂಡರೆ ಎನ್ನುವ ಆಶಾವಾದಗಳು ಯಾರಿಗೆ ಮುಖ್ಯ ಎನ್ನುವುದು ‘ರಾಗಾ’ ಅರಿತುಕೊಳ್ಳಬೇಕಷ್ಟೆ
ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ‘ರಾಗಾ’ ಅವರ ಸಂಸದೀಯ ಭಾಷಣವನ್ನು ಅರಿತುಕೊಳ್ಳಬೇಕಷ್ಟೆ. ಇಂದು ಆರೆಸ್ಸೆಸ್ ನ ಸಿದ್ಧಾಂತಕ್ಕೆ ನೇರವಾಗಿ ಟಕ್ಕರ್ ಕೊಡುತ್ತಿರುವ ಕೆಲವೇ ಕೆಲವು ಅತಿ ವಿರಳ ಮುಖಂಡರಲ್ಲಿ ಒಬ್ಬರಾದ ‘ರಾಗಾ’ ಇದರ ಸಫಲತೆಗಾಗಿ ತನ್ನದೇ ಆದ ವೇದಿಕೆ ಸಿದ್ಧಪಡಿಕೊಂಡಿದ್ದಾರೆ. ಅಲ್ಲಿನ ಮಿತಿಗಳಾಚೆಗೆ ಅದರ ಮಹತ್ವ ಮುಖ್ಯವಾಗಬೇಕು.
ಮೊನ್ನೆ ಸಂಸತ್ತಿನಲ್ಲಿ ‘ರಾಗಾ’ ಮಾತನಾಡಿರುವುದನ್ನು ಹೀಗೆಯೇ ನೋಡಬೇಕು. ನಿರಂತರವಾಗಿ ಆರೆಸ್ಸೆಸ್ ನ ನಾಜೀವಾದ ಮೋದಿಯ ನಾರ್ಸಿಸಂ ಎರಡನ್ನೂ ಒಂದು ಕಲ್ಲಿನಲ್ಲಿ ಹೊಡೆಯಲು ಮುಂದಾಗಿರುವುದು ಸದ್ಯದ ಮಟ್ಟಿಗೆ ಮುಖ್ಯವಾಗಲೇಬೇಕಾಗುತ್ತದೆ. ಇದು ಅನಗತ್ಯ ಎನ್ನುವುದು ಟಿಪಿಕಲ್ ಮಧ್ಯಮವರ್ಗದ ನಿಲುವಾಗುತ್ತದೆ. ಮತಧರ್ಮದ ಕುರಿತು ಸೈದ್ಧಾಂತಿಕವಾಗಿ ಮಾತನಾಡಲು ಸಾವಿರಾರು ಪುಟಗಳ ಪಠ್ಯಗಳಿವೆ. ಆದರೆ ಅದರ ಮೂಲಕ ರಾಜಕಾರಣದಲ್ಲಿ ಸಾಪೇಕ್ಷವಾಗಿ (organic) ಹೇಗೆ ತಲುಪುವುದು? ಯಾರಾದರೂ ಉತ್ತರ ಹೇಳಿ?
ನಂತರ ‘ರಾಗಾ’ ಮಾಡಬಹುದಾದ ತಂತ್ರಗಾರಿಕೆ ಅದೂ ಇದೂ ಎಲ್ಲಾ ಚರ್ಚಿಸೋಣ
– ಬಿ ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು




