ಲಖ್ನೋ: ಬಿಜೆಪಿ ಸರ್ಕಾರ ತನ್ನ ಅಸ್ಪಷ್ಟ ಹೇಳಿಕೆಗಳು ಮತ್ತು ಮೊಕದ್ದಮೆಗಳ ಮೂಲಕ ಮೀಸಲಾತಿ ಹೋರಾಟವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಎಸ್‌ಸಿ-ಎಸ್‌ಟಿ ಮೀಸಲಾತಿಯಲ್ಲಿ ಉಪವರ್ಗೀಕರಣ ಮತ್ತು ಕೆನೆಪದರ ವಿವಾದದ ನಡುವೆ ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ರೀತಿಯ ಮೀಸಲಾತಿಯ ಮುಖ್ಯ ಉದ್ದೇಶವು ನಿರ್ಲಕ್ಷಿತ ಸಮಾಜದ ಸಬಲೀಕರಣವಾಗಿರಬೇಕು, ಆ ಸಮಾಜದ ವಿಭಜನೆ ಅಥವಾ ವಿಘಟನೆ ಅಲ್ಲ, ಇದು ಮೀಸಲಾತಿಯ ಮೂಲ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಉಪ-ವರ್ಗೀಕರಣಗಳಗೆ ಮಾನ್ಯತೆ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದು, ಅಸಂಖ್ಯಾತ ತಲೆಮಾರುಗಳಿಂದ ನಡೆಯುತ್ತಿರುವ ತಾರತಮ್ಯ ಮತ್ತು ಅಸಮಾನ ಅವಕಾಶಗಳನ್ನು ಕೆಲವು ತಲೆಮಾರುಗಳಲ್ಲಿ ಬಂದಿರುವ ಬದಲಾವಣೆಗಳಗೆ ಹೋಲಿಸುವುದು ಸರಿಯಲ್ಲ ಎಂದಿದ್ದಾರೆ.
ಶೋಷಿತ, ವಂಚಿತ ಸಮಾಜವನ್ನು ಸಶಕ್ತಗೊಳಿಸಲು ಮತ್ತು ಬಲಪಡಿಸಲು ‘ಮೀಸಲಾತಿ’ ಸಾಂವಿಧಾನಿಕ ಮಾರ್ಗವಾಗಿದೆ. ಇದು ಬದಲಾವಣೆಯನ್ನು ತರುತ್ತದೆ, ಅದರ ನಿಬಂಧನೆಗಳನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹೆಚ್ಚು ಹಿಂದುಳಿದಿರುವ ಜಾತಿಗಳ ಉನ್ನತಿಗಾಗಿ ಮೀಸಲಾತಿ ನೀಡಲು ಸಾಮಾಜಿಕವಾಗಿ ಭಿನ್ನಜಾತಿಯ ವರ್ಗವನ್ನು ರೂಪಿಸುವ ಪರಿಶಿಷ್ಟ ಜಾತಿಗಳಲ್ಲಿ ಉಪ-ವರ್ಗೀಕರಣ ಮಾಡಲು ಸಂವಿಧಾನಾತ್ಮಕವಾಗಿ ರಾಜ್ಯಗಳಿಗೆ ಅಧಿಕಾರವಿದೆ ಎಂದು ಹೇಳಿದೆ ಎಂದಿದ್ದಾರೆ.




