ಕಾಶಿ ಮಠದ ಪೀಠಾಧಿಪತಿ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ಶತಮಾನದ ಪುಣ್ಯಸ್ಮರಣೆ
ಬೆಂಗಳೂರು: ಕಮಲಾನಗರದಲ್ಲಿ ಕಾಶಿ ಮಠದ ಶ್ರೀ ಶ್ರೀ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ಶತಮಾನೋತ್ಸವ ಪುಣ್ಯಸ್ಮರಣೆ ಪ್ರಯುಕ್ತ ಹಾಗೂ ಶ್ರೀ ಸಯಮೀಂದ್ರತೀರ್ಥ ಸ್ವಾಮೀಜಿರವರ ಮಾರ್ಗದರ್ಶನದಲ್ಲಿ ಮನೆ, ಮನೆ ಭಜನೆ ಕಾರ್ಯಕ್ರಮ ಮತ್ತು ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಅಕ್ಕಿ, ರಾಗಿ, ಬೇಳೆ ಮತ್ತು ಬಟ್ಟೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಕಾರ್ಯಕ್ರಮದ ಸಂಯೋಜಕರು ಹಾಗೂ ಸಮಾಜ ಸೇವಕ ಗುರುದತ್ತ ಪ್ರಭು, ರಾಜ್ಯ ಹೈಕೋರ್ಟ್ ನ ಹಿರಿಯ ನ್ಯಾಯವಾದಿ ಸುಧಾಕರ್ ಪೈ, ಜಿ.ಎ ಎಸ್.ಬಿ.ಅಸೋಸಿಯೆಷನ್ ಉಮೇಶ್ ಶೆಣೈ, ಹಿರಿಯ ವಿಜ್ಞಾನಿ ಗಣೇಶ್ ಸಾಂದ, ಮೋಹಿನಿ ದಯಾನಂದ ಪೈ, ಸೇರಿದಂತೆ ನೂರಾರು ಭಕ್ತಾದಿಗಳು ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಯೋಜಕರು, ಭಕ್ತರಾದ ಗುರುದತ್ತಪ್ರಭು ಮಾತನಾಡಿ ಉತ್ತಮ ಸಮಾಜ ನಿರ್ಮಾಣವಾಗಬೇಕು. ಸನಾತನ ಧರ್ಮ ಉಳಿಯಬೇಕು ಮತ್ತು ಕಾಶಿ ಮಠದ ಸ್ವಾಮೀಜಿಗಳ ಆಶೀರ್ವಾದದಿಂದ ಯುಗಾದಿ ಹಬ್ಬದ ಪ್ರಯುಕ್ತ ಮನೆಮನೆಯಲ್ಲಿ ಭಜನೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಹೊಸ ವರ್ಷದ ಈ ಸುಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ರಾಗಿ, ಅಕ್ಕಿ, ಬೇಳೆ ಮತ್ತು ಬಟ್ಟೆಗಳನ್ನು ವಿತರಿಸಲಾಗುತ್ತಿದೆ. ಸಮಾಜಕ್ಕೆ ನನ್ನದೊಂದು ಅಳಿಲು ಸೇವೆ, ಹೀಗೆ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತ ಬಂದರೆ ದೇಶದಲ್ಲಿ ಯಾವುದೇ ಬಡತನ ಇರೋದಿಲ್ಲ ಎಂದರು.
ಹಿಂದೂ ಸಮಾಜ ಉಳಿದರೆ ದೇಶ ಉಳಿಯುತ್ತದೆ, ನಮ್ಮ ಭಾರತೀಯ ಸಂಸ್ಕೃತಿ, ಸಂಪ್ರಾದಾಯ ಉಳಿಯಬೇಕು. ಈ ನಿಟ್ಟಿನಲ್ಲಿ ಪ್ರತಿ ವರ್ಷ ದೇವರ ನಾಮಸ್ಮರಣೆ, ಮನೆ, ಮನೆ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಇಂದು ನಮ್ಮ ಮನೆಯಲ್ಲಿ ನಡೆಯುತ್ತಿರುವ ಈ ಕಾರ್ಯದಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಮತ್ತು ಭಕ್ತಾದಿಗಳು ಪಾಲ್ಗೊಂಡು ದೇವರನಾಮ ಭಜನೆಗಳನ್ನು ಹಾಡಿದರು. ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.




