ಜಗದ್ಗುರು ಶ್ರೀ ರೇಣುಕಾಚಾರ್ಯರ ಕಂಚಿನ ಪುತ್ಥಳಿ ಲೋಕಾರ್ಪಣೆ

2 years ago

ಶ್ರೀಶೈಲ ಜಗದ್ಗುರುಗಳು, ಶ್ರೀ ಕಾಶಿ ಜಗದ್ಗುರುಗಳು, ಬಿ.ಎಸ್.ಯಡಿಯೂರಪ್ಪರವರಿಂದ ಶ್ರೀ ರೇಣುಕಾಚಾರ್ಯರ ಪುತ್ಥಳಿ ಲೋಕಾರ್ಪಣೆ

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮಮಂದಿರ ಬಳಿಯ ಶ್ರೀಮದ್ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಕಂಚಿನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತು.

ಶ್ರೀ ಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ವಾದರು, ಶ್ರೀ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯಡಿಯೂರು ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಪಟ್ಟದ ಮಲಯ ಶಾಂತಮನಿ ರಾಜದೇಶಿಕೇಂದ್ರಶಿವಾಚಾರ್ಯ ಸ್ವಾಮಿಗಳು, ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಅರಣ್ಯಖಾತೆ ಸಚಿವ ಈಶ್ವರ್ ಖಂಡ್ರೆ, ಶಾಸಕ ಶಾಮನೂರು ಶಿವಶಂಕರಪ್ಪ, ಸ್ಥಳೀಯ ಶಾಸಕ ಎಸ್.ಸುರೇಶ್ ಕುಮಾರ್, ಸಮಾಜ ಮುಖಂಡರಾದ ಬಿ.ಎಸ್.ಪರಮಶಿವಯ್ಯ, ಸಮಾಜ ಮುಖಂಡರು, ಮಾಜಿ ಉಪಮೇಯರ್ ಬಿ.ಎಸ್.ಪುಟ್ಚರಾಜು, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹೆಗ್ಗರೆರವರು ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಕಂಚಿನ ಪುತ್ಥಳಿ ಲೋಕರ್ಪಣೆ ಮಾಡಿದರು.

ಶ್ರೀ ಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಪಂಚಪೀಠಗಳು ಮಾನವ ಕಲ್ಯಾಣಕ್ಕೆ ಶ್ರಮಿಸುತ್ತಿವೆ. ಸಿದ್ದಾಂತ ಶಿಖಾಮಣಿ ಇಡೀ ಮನುಕುಲದ ಒಳಿತಿಗಾಗಿ ಇದೆ. ವೀರಶೈವ ಲಿಂಗಾಯಿತ ಧರ್ಮಗ್ರಂಥ ಸಿದ್ದಾಂತ ಶಿಖಾಮಣಿ ವರ್ಗ, ಧರ್ಮ ಎಲ್ಲರಿಗೂ ಮಾರ್ಗದರ್ಶನ ನೀಡುತ್ತದೆ. ಶ್ರೀ ರೇಣುಕಚಾರ್ಯರು ಮೊದಲು ಅಗಸ್ತ್ಯ ಮಹರ್ಷಿರವರಿಗೆ ಉಪದೇಶ ನೀಡಿದರು ಎಂದರು.

ವೀರಶೈವ ಸಿದ್ಧಾಂತದಲ್ಲಿ ಜಾತಿ ಬೇಧಬಾವವಿಲ್ಲ. ಮಠಗಳ ಅಭಿವೃದ್ದಿಗಾಗಿ ಅನುದಾನ ನೀಡಿದ ಮೊಟ್ಟ ಮೊದಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ಶ್ರೀ ರೇಣುಕಾಚಾರ್ಯರ ಸಿದ್ದಾಂತವನ್ನು ಎಲ್ಲರ ಹೃದಯದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಕೃತಯುಗದಲ್ಲಿ ಏಕಾಚಾರ್ಯರಾಗಿ, ರೇಣುಕಾಚಾರ್ಯ ಕಲಿಯುಗದಲ್ಲಿ ರೇವಣಸಿದ್ದೇಶ್ವರರಾಗಿ ಅವತಾರ ತಾಳಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಬೆಳದಂತೆ ಅದನ್ನ ಬಳಸಿಕೊಂಡು ಸಿದ್ದಾಂತ ಶಿಖಾಮಣಿ ಮಹಾನ್ ಗ್ರಂಥವನ್ನು ಎಲ್ಲ ಭಾಷೆಯಲ್ಲಿ ಓದುವಂತೆ ತಂತ್ರಜ್ಞಾನ ಆಳವಡಿಸಲಾಗುವುದು. ಮಹಾನ್ ಗ್ರಂಥ ಸಿದ್ದಾಂತ ಶಿಖಾಮಣಿ ಮಾತನಾಡುವ ರೇಣುಕಾಚಾರ್ಯರು ಇದ್ದಂತೆ ಎಂದರು.

ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಆಚಾರ, ವಿಚಾರ ತಿಳಿಯಬೇಕು. ಪಂಚಪೀಠಗಳು ಲೋಕಕಲ್ಯಾಣಕ್ಕೆ ಭಕ್ತರ ಮನೆ ಬಾಗಿಲಿಗೆ ಹೋಗಿ ಧರ್ಮ ಜಾಗೃತಿ ಮಾಡುತ್ತಿವೆ. ಪಂಚಪೀಠಗಳು ಧರ್ಮವನ್ನು ಕಾಪಾಡುತ್ತಿವೆ. ಹಿಂದೂ ಧರ್ಮದ ಮೇಲೆ ಅಕ್ರಮಣದಿಂದ ನೊಂದುಹೋಗಿದ್ದಾರೆ. ಹಿಂದೂ ಧರ್ಮದವರು ಅಹಿಂಸೆಯ ಪ್ರತಿಪಾದಕರು ಎಂದರು.

ಭಾರತ ದೇಶ ಉಜ್ವಲವಾಗಿ ಕಂಗೊಳಿಸುತ್ತಿದೆ. ಬಸವಣ್ಣ, ಶಿವಕುಮಾರ ಮಹಾಸ್ವಾಮೀಜಿಗಳು ನಾಡಿನಲ್ಲಿ ಹುಟ್ಟಿದ ಮಹಾನ್ ಸಂತರು. ಮಠಗಳಿಗೆ ಭಕ್ತರ ಸೇವೆ ಮಾಡಲು ನನ್ನ ಆಡಳಿತದ ಅವಧಿಯಲ್ಲಿ ಅಭಿವೃದ್ದಿಗಾಗಿ ಅನುದಾನ ಕೊಟ್ಟಿದ್ದೇನೆ ಎಂದರು.

ಉಭಯ ಜಗದ್ಗುರುಗಳ ರಥದಲ್ಲಿ ಭವ್ಯ ಮೆರವಣಿಗೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಕಳಸ ಹೊತ್ತ ನೂರಾರು ಮಹಿಳೆಯರು ಮತ್ತು ಡೊಳ್ಳು, ಕಂಸಾಳೆ ವಿವಿಧ ಕಲಾತಂಡಗಳ ಜೊತೆಯಲ್ಲಿ ಭವ್ಯ ಮೆರವಣಿಗೆ ಸಾಗಿ ಬಂತು.

Leave a Reply