ಹನುಮಂತನಗರ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದಲ್ಲಿ ಆಡಿ ಕೃತಿಕ ಮಹೋತ್ಸವ

2 years ago

ಬೆಂಗಳೂರು ನಗರದ ಅತ್ಯಂತ ಐತಿಹಾಸಿಕವಾದ ಮತ್ತು ಪವಿತ್ರವಾದ ದೇವಾಲಯಗಳಲ್ಲಿ ಹನುಮಂತ ನಗರದ ಕುಮಾರಸ್ವಾಮಿ ದೇವಾಲಯವು ಪ್ರಮುಖವಾಗಿರುತ್ತದೆ. ರಸ್ತೆಯಿಂದ ನೂರಾರು ಅಡಿ ಎತ್ತರದ ಬೆಟ್ಟದ ಮೇಲೆ ನೆಲೆಸಿರುವ ಕುಮಾರಸ್ವಾಮಿ ದೇವಾಲಯ ಬೆಂಗಳೂರು ನಗರದ ಲಕ್ಷಾಂತರ ಭಕ್ತರನ್ನು ಆಡಿ ಕೃತಿಕ ಮಹೋತ್ಸವದ ಸಂದರ್ಭದಲ್ಲಿ ಕೈ ಬಿಸಿ ಕರೆಯುತ್ತದೆ.

ಇಲ್ಲಿನ ದೇವಾಲಯಕ್ಕೆ ಇರುವ ಹಿರಿಮೆ ಮತ್ತು ಪವಿತ್ರತೆಯಿಂದ ದೇವಾಲಯಕ್ಕೆ ದೂರದ ಊರುಗಳಿಂದ ಬರುತ್ತಾರೆ ಪ್ರತಿ ವರ್ಷ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲನೇ ವಾರದಲ್ಲಿ ಮೂರು ದಿನಗಳ ಕಾಲ ಆಡಿ ಕೃತಿಕ ಮಹೋತ್ಸವ ಕಾರ್ಯಕ್ರಮ ನಡೆಯುತ್ತದೆ .ಈ ಬಾರಿ ಜುಲೈ 28 ರಿಂದ 30ರವರೆಗೆ ಮೂರು ದಿನಗಳ ಕಾಲ ಕಾರ್ಯಕ್ರಮ ಇರುತ್ತದೆ ಬೆಂಗಳೂರು ನಗರದಲ್ಲಿ ಇದೊಂದು ದೊಡ್ಡ ಜಾತ್ರೆ ಆಗಿರುತ್ತದೆ .ಸಹಸ್ರಾರು ಅಂಗಡಿಗಳು ತೆರೆದಿರುತ್ತದೆ. ಎಲ್ಲ ರೀತಿಯ ಪದಾರ್ಥಗಳು, ತಿನಿಸುಗಳು ,ಮಕ್ಕಳ ಆಟಿಕೆಗಳು, ಇಲ್ಲಿ ದೊರೆಯುತ್ತದೆ ದೇವರ ದರ್ಶನ ಮತ್ತು ಜಾತ್ರೆಯನ್ನು ನೋಡಲು ಮೂರು ದಿನಗಳ ಕಾಲ ಸಹಸ್ರಾರು ಮಂದಿ ಬರುತ್ತಾರೆ.

ಕಾರ್ತಿಕೇಯ ಅಥವಾ ಕುಮಾರಸ್ವಾಮಿ ದೇವರು ಗಣೇಶನ ಸಹೋದರನಾಗಿದ್ದು ಶಿವ ಪಾರ್ವತಿಯರ ಪುತ್ರನಾಗಿರುತ್ತಾನೆ. ತಾರಕಾಸುರ ರಾಕ್ಷಸನನ್ನು ಸಂವರಿಸುವ ಸಲುವಾಗಿ ಶಿವನ ಮೂರನೇ ಕಣ್ಣಿನಿಂದ ಕಿಡಿಗಳ ರೂಪದಲ್ಲಿ ಹೊರಬಂದು ಆರು ಬೇರೆ, ಬೇರೆ ದೇಹಗಳಾಗಿ ಜನನವಾಗಿ ಪಾರ್ವತಿ ಆರು ದೇಹಗಳನ್ನು ಒಂದು ಮಾಡಿ ಆರು ಮುಖದ ಸ್ವರೂಪದ ಕಾರ್ತಿಕೇಯನ್ನಾಗಿ ಬದಲಾಯಿಸಿರುತ್ತಾಳೆ ಕಾರ್ತಿಕೇಯ ಎಂದರೆ ಜಯದ ಸಂಕೇತ.

ಆಡಿ ಕೃತಿಕ ಸಂದರ್ಭದಲ್ಲಿ ಹನುಮಂತನಗರ ಕುಮಾರಸ್ವಾಮಿ ದೇವಾಲಯದಲ್ಲಿ ಕಾವಡಿ ಉತ್ಸವ ನಡೆಯುತ್ತದೆ ಭಕ್ತರು ತಮ್ಮ ಹರಕೆಯನ್ನು ತೀರಿಸುತ್ತಾ ತಮ್ಮ ಕಷ್ಟಗಳನ್ನು ನಿವಾರಿಸಲು ಭಗವಂತನಲ್ಲಿ ಪ್ರಾರ್ಥಿಸುವಂತಹ ಒಂದು ವಿಧಾನವೇ ಕಾವಡಿ ಆಗಿರುತ್ತದೆ ಇದರಲ್ಲಿ ಪೂಜೆಗೆ ಬೇಕಾದಂತಹ ಸಾಮಗ್ರಿಗಳನ್ನು ಹೊತ್ತು ತರುತ್ತಾರೆ.

ಹನುಮಂತನಗರದ ಕುಮಾರಸ್ವಾಮಿ ದೇವಾಲಯಕ್ಕೆ ನಾಲ್ಕು ನೂರು ವರ್ಷಗಳ ಇತಿಹಾಸವಿದೆ ಕೆಂಪೇಗೌಡರ ಕಾಲದಲ್ಲಿ ಬೆಟ್ಟದ ಮೇಲೆ ಶಿವಲಿಂಗವನ್ನ ಪ್ರತಿಷ್ಠಾಪಿಸಿದ್ದಾರೆಂಬ ಇತಿಹಾಸವಿದೆ 1901ರಲ್ಲಿ ಮೈಸೂರಿನ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಟಿ ನರಹರಿ ರಾಯರು ಈ ದೇವಾಲಯಕ್ಕೆ ಮಂಟಪವನ್ನು ಮತ್ತು ಸಣ್ಣ ಗೋಪುರವನ್ನು ನಿರ್ಮಿಸಿಕೊಟ್ಟರೆಂಬ ಇತಿಹಾಸವಿದೆ ಈ ಹಿನ್ನೆಲೆಯಲ್ಲಿ ಇದಕ್ಕೆ ನರಹರಿಗುಡ್ಡವೆಂದು ಕರೆಯುತ್ತಾರೆ.

1953 ರಲ್ಲಿ ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಲ್ಪಡುತ್ತದೆ 1954ರಲ್ಲಿ ಈ ದೇವಾಲಯದಲ್ಲಿ ಸಿದ್ದಾಂತಿ ಶ್ರೀ ಶಿವಶಂಕರ್ ಅವರ ಪುತ್ರರಾದ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಇವರು ಪಂಚಲೋಹದ ಕುಮಾರಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ ಅಂದಿನಿಂದ ಇಲ್ಲಿ ಕಾವಡಿ ಉತ್ಸವ ಆರಂಭವಾಗಿರುತ್ತದೆ ತದನಂತರ ಉದ್ಭವ ಆದಿಶೇಷನಿಗೆ ದೇವಾಲಯವನ್ನು ನಿರ್ಮಿಸಿ ಕೊಡುತ್ತಾರೆ ಕೆ ಪದ್ಮಮ್ಮನವರ ಕುಟುಂಬದವರು ಇದರ ಪ್ರಮುಖ ರಾಗಿರುತ್ತಾರೆ ಮುಂದಿನ ದಿನಗಳಲ್ಲಿ ದೇವಸ್ಥಾನ ಮತ್ತಷ್ಟು ಜೀರ್ಣೋದ್ಧಾರಗೊಂಡು ಶಿವ ಲಿಂಗ ಪಾರ್ವತಿ ವಿನಾಯಕ ವಿಗ್ರಹಗಳು ಪ್ರತಿಷ್ಠಾಪನೆಯಾಗುತ್ತದೆ ನಿರ್ಮಾಣವಾಗುತ್ತದೆ.

ಪ್ರತಿ ಮಂಗಳವಾರದ ದಿನಗಳಲ್ಲಿ ಸಹಸ್ರಾರು ಭಕ್ತರು ದೇವಾಲಯಕ್ಕೆ ಬಂದು ತಮ್ಮ ಶ್ರದ್ಧೆಯನ್ನು ತೋರಿಸುತ್ತಾರೆ ಈ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ಮತ್ತು ಸುತ್ತಲೂ ಉತ್ತಮವಾದ ಪರಿಸರವಿರುವುದರಿಂದ ನಗರದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿರುವ ಪಂಚಮುಖಿ ಗಣಪತಿ ದೇವಾಲಯ 1924ರಲ್ಲಿ ಪ್ರತಿಷ್ಠಾಪನೆ ಆಗಿರುತ್ತದೆ ಈಗ ದೇವಾಲಯಕ್ಕೆ ನೂರು ವರ್ಷಗಳು ತುಂಬಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply