ಬೆಂಗಳೂರು: ಶ್ರೀ ವೈಷ್ಣೋ ದೇವಾಲಯದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವು ಬಿಟಿಎಂ 6ನೇ ಹಂತ 18ನೇ ಶ್ರೀ ವೈಷ್ಣೋ ಜಯಂತಿ ಮಹೋತ್ಸವ ಮೂರು ದಿನಗಳ ವಿಶೇಷ ಪೂಜಾ ಸಮಾರಂಭ, ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳು ಪೂಜಾ ಪಾಲ್ಗೊಂಡಿದ್ದರು.
ರಥೋತ್ಸವ ಸಮಾರಂಭದಲ್ಲಿ ಶ್ರೀ ವೈಷ್ಣೋದೇವಿಯ ಉತ್ಸವ ಮೂರ್ತಿಯ ಜೊತೆಯಲ್ಲಿ ಸಾವಿರಾರು ಮಹಿಳೆಯರು ಕಳಸ ಹೊತ್ತು ಪ್ರಮುಖ ರಾಜಬೀದಿಯಲ್ಲಿ ಸಾಗಿದರು.
ಶ್ರೀ ವೈಷ್ಣೋ ದೇವಾಲಯ ಟ್ರಸ್ಟ್ ನ ಟ್ರಸ್ಟಿ ರಾಕೇಶ್ ದುಂಗಲ್ ಮಾತನಾಡಿ, ಭಾರತದ ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದಾದ ವೈಷ್ಣೋದೇವಿ ದೇವಸ್ಥಾನ ಕತ್ರಾದ ತ್ರಿಕುಟ ಬೆಟ್ಟದ ಮೇಲೆ 1700ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಆದರೆ ವಯಸ್ಸಾದಾವರು, ಮಕ್ಕಳು ಅಲ್ಲಿ ಹೋಗಲು ಸಾಧ್ಯವಾಗದೇ ಇರುವವರಿಗೆ ಬೆಂಗಳೂರಿನ ನಗರದಲ್ಲಿ ವೈಟ್ ಮಾರ್ಬಲ್ ನಿಂದ ಸಾಕ್ಷತ್ ವೈಷ್ಣೋದೇವಿಯ ಮೂರ್ತಿ ಸ್ಥಾಪಿಸಲಾಗಿದೆ ಎಂದರು.
ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ವೈಷ್ಣೋದೇವಿ ದೇವಸ್ಥಾನ ಎಂದು ಬೆಂಗಳೂರು ನಗರದ ಭಕ್ತರಿಗೆ ದರ್ಶನಕ್ಕೆ ಲಭ್ಯವಿದೆ. 18 ವರ್ಷಗಳ ಹಿಂದೆ ಶ್ರೀ ವೈಷ್ಣೋ ದೇವಿಯ ಪ್ರತಿಷ್ಟಾಪಸಲಾಗಿದೆ.
ಕತ್ರಾದಲ್ಲಿರುವ ವೈಷ್ಣೋಮ ದೇವಿ ಪ್ರಭಾವ,ಶಕ್ತಿಯಷ್ಟೆ ಬೆಂಗಳೂರಿನ ವೈಷ್ಣೋಮ ದೇವಿಗೆ ಇದೆ. ಬೆಂಗಳೂರಿನ ವೈಷ್ಣೋ ದೇವಾಲಯಕ್ಕೆ ಲಕ್ಷಾಂತರ ಜನರು ಭೇಟಿ ನೀಡಿ, ದರ್ಶನ ಪಡೆದು ಪುನೀರಾಗಿದ್ದಾರೆ ಎಂದರು.
18ನೇ ವೈಷ್ಣೋ ರಥೋತ್ಸವ ಮತ್ತು ಜಯಂತಿ ಪ್ರಯುಕ್ತ ಗಣಪತಿ ಪೂಜೆ,ಪುಣ್ಯಾಹ, ರಕ್ಷಾ ಬಂಧನ, ಕಲಶ ಸ್ಥಾಪನೆ, ನವಗ್ರಹ ,ಆಂಜನೇಯ ಮತ್ತು ಮಹಾಮುತ್ಯುಂಜಯ ಹೋಮ ಮತ್ತು ಪಂಚರುದ್ರ, ಮಹಾಲಕ್ಷ್ಮೀ, ಕಾಲಭೈರವ, ಸುಬ್ರಮಣ್ಯ ಸ್ವಾಮಿ ಹೋಮ ಮತ್ತು ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ವೆ ಜನಾಃ ಸುಖಿನೋ ಭವಂತು ಎಂಬಂತೆ ಶ್ರೀ ವೈಷ್ಣೋಮ ದೇವಿ ದರ್ಶನ ಪಡೆದು ಪುನೀತರಾಗಿರಲಿ ಎಂದರು.




