ಯೋಗ, ಯೋಗ್ಯತೆ ಬಗ್ಗೆ ಮಾತಾಡಲು ಕನಿಷ್ಠ ಅರ್ಹತೆಯಾದರೂ ಇದೆಯಾ ಎಂದು ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕಿತ್ತು Chalavadi T Narayanaswamy ಅವರೇ. ನಿಮ್ಮ ಹೋರಾಟ, ಹಾರಾಟ, ಚೀರಾಟ, ಪರೋಟಾಗಳ ಆಳ-ಅಗಲ ಎಲ್ಲವನ್ನೂ ಬಲ್ಲೆ. ಅದರ ಬಗ್ಗೆ ಮಾತಾಡುವಂತೆ ಪ್ರಚೋದಿಸಿ ಮತ್ತಷ್ಟು ಬೆತ್ತಲಾಗಬೇಡಿ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಧಮ್ ಬಿರಿಯಾನಿಯೊಂದಕ್ಕೇ ನಿಮ್ಮ ಧಮ್ ಇಳಿದಂತಿದೆ. ಮೋದಿಯವರ ಅನಾಚಾರಗಳನ್ನು ಸಮರ್ಥಿಸಲು ಹೋಗಿ ಮೈ ಎಲ್ಲಾ ಪರಚಿಕೊಂಡು ಗಾಯ ಮಾಡಿಕೊಂಡರೆ ಯಾರು ಹೊಣೆ? ಅದಕ್ಕೆ ಯೋಗ, ಯೋಗ್ಯತೆ ಎಂದು ಜ್ಯೋತಿಷಿಗಳಂತೆ ಮಾತಾಡಲು ಶುರು ಮಾಡಿದಂತಿದೆ.
ಮೋದಿಯ ಅನಾಚರಗಳ ಬಗ್ಗೆ ಹಿಂದೆಯೂ ಮಾತಾಡಿದ್ದೇನೆ, ಈಗಲು ಮಾತಾಡುತ್ತಿದ್ದೇನೆ, ಮುಂದೆಯೂ ಮಾತಾಡುತ್ತೇನೆ. ಮೋದಿಯವರನ್ನು ಸಮರ್ಥನೆ ಮಾಡುವ ಭರದಲ್ಲಿ ನಿಮ್ಮ ಬುಡಕ್ಕೆ ತಂದುಕೊಂಡು ನನ್ನ ಕೈಗೆ ದೊಣ್ಣೆ ಕೊಟ್ಟು ಬಡಿಸಿಕೊಳ್ಳಬೇಡಿ.
ಕಾಂಗ್ರೆಸ್ ಪಕ್ಷದ ತತ್ವ ಸಿಎದ್ದಾಂತ ಹಾಗೂ ಗಾಂಧಿ ಫ್ಯಾಮಿಲಿಯ ನಿಷ್ಟೆ ನನಗೆ ಸಿಕ್ಕಿರುವ ಯೋಗವಾದರೇ, ತಳ ಸಮುದಾಯಗಳು, ಶೋಷಿತ ಸಮುದಾಯಗಳನ್ನು ತುಳಿಯುವ ಸಂಘ ಪರಿವಾರದವರ ಮುಖವಾಡವನ್ನು ಬಿಚ್ಚಿಡುವುದು ಕೂಡ ನನಗೆ ಸಿಕ್ಕಿರುವ ಯೋಗವೇ ಎಂದು ಭಾವಿಸಿದ್ದೇನೆ.
ಸಾಮಾಜಿಕ ನ್ಯಾಯಕ್ಕಾಗಿ ಸ್ವಪಕ್ಷವೇ ಇರಲಿ, ಅಧಿಕಾರದಲ್ಲಿ ಕೂತಿರುವವರು ಯಾರೇ ಇರಲಿ ಪ್ರಶ್ನಿಸುವುದು ನನ್ನ ಯೋಗವೇ. ಆದರೆ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರಕ್ಕಾಗಿ ಯಾರೋ ಬಳಸಿ ಬಿಸಾಡಿದ್ದ ಚೆಡ್ಡಿಯನ್ನು ತಲೆಯ ಮೇಲೆ ಹೊತ್ತು ತಿರುಗುವುದೇ ನಿಮಗೆ ಸಿಕ್ಕ ಯೋಗ್ಯತೆ ಎಂದು ಭಾವಿಸಿದ್ದರೆ ನಿಮ್ಮ ಕರ್ಮ.
ಅಧಿಕಾರದಾಸೆಗೆ ನಿಮ್ಮ ಪಕ್ಷದ ನಾಯಕರನ್ನು ಹೀಯಾಳಿಸುವುದು ಬಿಡಿ, ಕನಿಷ್ಠ ಪ್ರಶ್ನೆಯನ್ನಾದರೂ ಮಾಡಿ ಖುರ್ಚಿ ಉಳಿಸಿಕೊಳ್ಳಿ ಆಗ ನಿಮ್ಮ “ಛಲ”ವಾದಿಯನ್ನು ನಾನೇ ಬೆಂಬಲಿಸುತ್ತೇನೆ. ಕೇಂದ್ರ ಸರ್ಕಾರ ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಯನ್ನೇ ನಿಮ್ಮಿಂದ ಪ್ರಶ್ನಿಸಲು ಆಗುತ್ತಿಲ್ಲ. ಇನ್ನೂ ಹೀಯಾಳಿಸಿ ನಿಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ? ಪ್ರಶ್ನೆ ಮಾಡದೆ ಇರುವುದನ್ನೇ ನೀವು ಯೋಗ್ಯತೆ ಎಂದುಕೊಂಡರೆ ಅಂತಹ ಯೋಗ್ಯತೆಗೆ ನೀವು ಮಾತ್ರ ಭಾಜನರಾಗಲು ಸಾಧ್ಯ.
ವಿದ್ಯಾರ್ಥಿ ದೆಸೆಯಿಂದಲೂ ಹೋರಾಟವನ್ನೇ ನಮ್ಮ ಬದುಕನ್ನಾಗಿಸಿಕೊಂಡು, ಐವತ್ತು ವರ್ಷಗಳ ಕಾಲ ಎಂದೂ ಅಧಿಕಾರಕ್ಕಾಗಿ ಪಕ್ಷ ಸಿದ್ಧಾಂತವನ್ನು ಬದಲಾಯಿಸದೆ ಇರುವುದೇ ನನ್ನ ನಿಷ್ಟೆ. ಅದೇ ನನ್ನ ಯೋಗ, ಅದೇ ನನ್ನ ಯೋಗ್ಯತೆ. ಅಂತಹ ಯೋಗ-ಯೋಗ್ಯತೆಗೆ ಅರ್ಹತೆಯೂ ಬೇಕಲ್ವಾ?
– ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ




