ಚಿತ್ರದುರ್ಗದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡಿನಲ್ಲಿರುವ ಈ ಅಂಗಡಿಯನ್ನು ಕಳೆದ 20 ವರ್ಷಗಳಿಂದಲೂ ನೋಡುತ್ತಿರುವೆ. ಇಲ್ಲಿ ಕರ್ನಾಟಕದ ಎಲ್ಲಾ ಲೀಡಿಂಗ್ ಪತ್ರಿಕೆಗಳೂ, ವಾರ ಪತ್ರಿಕೆ,ಮಾಸ ಪತ್ರಿಕೆ, ಸ್ಕೂಲ್ ಮಕ್ಕಳಿಗೆ ಬೇಕಾದ ಪುಸ್ತಕಗಳು, ಬೈರಪ್ಪ, ರವಿಬೆಳೆಗೆರೆ, ಪ್ರತಾಪಸಿಂಹ, ತರಾಸು ಹೀಗೆ ಜನಪ್ರಿಯ ಲೇಖಕರ ಮತ್ತು ಸ್ಥಳೀಯ ಲೇಖಕರ ಪುಸ್ತಕಗಳಿಂದ ಕಿಕ್ಕಿರಿದಿರುತ್ತಿತ್ತು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ನಿಧಾನಕ್ಕೆ ಪುಸ್ತಕಗಳ ಮಾರಾಟ ಕಡಿಮೆಯಾಗುತ್ತಾ ಬಂತು. ಈಗಂತೂ ಅಂಗಡಿಯ 25% ಜಾಗ ಮಾತ್ರ ಪುಸ್ತಕ ಪೇಪರುಗಳಿಗೆ ಉಳಿಸಿಕೊಂಡು ಉಳಿದ ಜಾಗದಲ್ಲಿ ಜನರು ಕೊಳ್ಳಬಹುದಾದ ಸ್ಟೇಷನರಿ ಸಾಮಾನುಗಳನ್ನು ತುಂಬಿದ್ದಾರೆ. ಇದು ವ್ಯಾಪಾರದ ಆದ್ಯತೆ ಕೂಡ. ಖರ್ಚಾಗದ ಪುಸ್ತಕಗಳನ್ನು ವರ್ಷಗಟ್ಟಲೆ ಪ್ರದರ್ಶಿಸುವುದಕ್ಕಿಂತ ಖರ್ಚಾಗುವ ವಸ್ತುಗಳನ್ನು ಕಡಿಮೆ ಅವಧಿ ಇಟ್ಟುಕೊಳ್ಳುವುದು ಉತ್ತಮ.
ಇದು ಕೇವಲ ಚಿತ್ರದುರ್ಗದ ಪುಸ್ತಕದಂಗಡಿಯ ಕತೆ ಮಾತ್ರವಲ್ಲ, ನಾನು ನೋಡಿದ ಬಹುತೇಕ ಪುಸ್ತಕಗದಂಗಡಿಗಳ ರೂಪಾಂತರವಿದು. ಈ ಅಂಗಡಿಯಲ್ಲಿ ಇನ್ನೂ ಪುಸ್ತಕಗಳನ್ನು ಅಂಗಡಿಯ ಒಳಗಡೆ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ನ ಒಂದು ಪುಸ್ತಕದ ಅಂಗಡಿಯಂತೂ ಅಂಗಡಿ ಹೊರಗಡೆ ಒಂದು ಸ್ಟೂಲ್ ಹಾಕಿ ಕೆಲವು ಪತ್ರಿಕೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಕಾಲ ಕಸದಂತೆ. ಆ ಪುಸ್ತಕದಂಗಡಿ ಟೀ ಕಾಫಿ ಟಿಫಿನ್ ಗೆ ರೂಪಾಂತರವಾಗಿದೆ.

ಇದು ಸಮಾಜದ ಆದ್ಯತೆಯ ರೂಪಾಂತರಕ್ಕೂ ಸಾಕ್ಷಿಯಾಗಿದೆ. ಸಮಾಜದ ಆದ್ಯತೆಗಳು ಬದಲಾದಂತೆ ಈ ಸಮಾಜದ ಪ್ರತಿಬಿಂಬದಂತೆ ಅಂಗಡಿಗಳು ರೂಪಾಂತರಗೊಳ್ಳಲೇಬೇಕಲ್ಲ.
ನಿಮ್ಮ ಊರುಗಳ ಪುಸ್ತಕದಂಗಡಿಗಳ ಕಥೆ ಏನಾಗಿದೆ?
- ಡಾ.ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು




