ಬೆಂಗಳೂರು: ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-೨೦೨೪’ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು, ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ.
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ವಿಷೇಶ ಸೂಚನೆ: ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ ಕಳಿಸಿಕೊಡಬೇಕು. ಬರವಣಿಗೆ ಮಾಡಿದ ಹಸ್ತಪ್ರತಿಯನ್ನೂ ಕಳಿಸಬಹುದು.
ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ಜೂನ್ ೩೦
ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ:
ಸುನಂದಾ & ಪ್ರಕಾಶ ಕಡಮೆ
ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-೨೦೨೪
ನಂ. ೯೦, ‘ನಾಗಸುಧೆ ಜಗಲಿ’
೬/ಬಿ ಕ್ರಾಸ್, ಕಾಳಿದಾಸನಗರ,
ವಿದ್ಯಾನಗರ ವಿಸ್ತೀರ್ಣ
ಹುಬ್ಬಳ್ಳಿ- ೫೮೦೦೩೧
ದೂರವಾಣಿ: ೯೩೮೦೬೧೩೬೮೩,
೯೮೪೫೭೭೯೩೮೭



