ಕೊಲೆಗಾರನ ಕರುಣೆ

2 years ago

ಕೊಲೆಗಾರನ ಕರುಣೆ

ಕೂಲಿಯನ್ನು
ಕರುಣೆಯೆಂದು
ಕೊಂಡಾಡುವ ಲೋಕದಲ್ಲಿ…

ಕೂಲಿಗಳ್ಳತನವನ್ನು
ಉದ್ಯಮವೆನ್ನುತ್ತಾರೆ..

ಕೂಲಿ ಕೆಲಸವನ್ನು
ಕರ್ತವ್ಯವೆನ್ನುತ್ತಾರೆ…

ದಾನವನ್ನು
ಸನ್ಮಾನಿಸುವ ಸಮಾಜದಲ್ಲಿ

ದರೋಡೆಯನ್ನು
ಧರ್ಮವೆನ್ನುತ್ತಾರೆ..

ಬೇಡುವ ಬೇಧವನ್ನು
ದೈವೀ ನಿಯಮವೆನ್ನುತ್ತಾರೆ…

ಕೊಲೆಗಾರನ  ಕರುಣೆಯನ್ನು
ದರೋಡೆಕೋರರ ದಾನವನ್ನು
ಸಂಭ್ರಮಿಸುವ ಸಮಾಜದಲ್ಲಿ

ಶೋಷಣೆಯೇ ಕಾನೂನಾಗಿರುತ್ತದೆ

ಕ್ರೌರ್ಯವೇ
ಧರ್ಮವಾಗಿರುತ್ತದೆ..

ಇರಲಿ ಬಿಡಿ…

ಕದ್ದವರನ್ನು
ಪೂಜಿಸುವುದು

ಕೊಂದವರನ್ನು
ಭಜಿಸುವುದು

ನಮಗೇನು ಹೊಸತೇ?

– ಶಿವಸುಂದರ್, 9448659774

Leave a Reply