
ಕವಿ ಸಮಯ
ಕೊಲೆಗಾರನ ಕರುಣೆ
ಕೊಲೆಗಾರನ ಕರುಣೆ ಕೂಲಿಯನ್ನುಕರುಣೆಯೆಂದುಕೊಂಡಾಡುವ ಲೋಕದಲ್ಲಿ… ಕೂಲಿಗಳ್ಳತನವನ್ನುಉದ್ಯಮವೆನ್ನುತ್ತಾರೆ.. ಕೂಲಿ ಕೆಲಸವನ್ನುಕರ್ತವ್ಯವೆನ್ನುತ್ತಾರೆ… ದಾನವನ್ನುಸನ್ಮಾನಿಸುವ ಸಮಾಜದಲ್ಲಿ ದರೋಡೆಯನ್ನುಧರ್ಮವೆನ್ನುತ್ತಾರೆ.. ಬೇಡುವ ಬೇಧವನ್ನುದೈವೀ ನಿಯಮವೆನ್ನುತ್ತಾರೆ… ಕೊಲೆಗಾರನ ಕರುಣೆಯನ್ನುದರೋಡೆಕೋರರ ದಾನವನ್ನುಸಂಭ್ರಮಿಸುವ ಸಮಾಜದಲ್ಲಿ ಶೋಷಣೆಯೇ ಕಾನೂನಾಗಿರುತ್ತದೆ ಕ್ರೌರ್ಯವೇಧರ್ಮವಾಗಿರುತ್ತದೆ..