ದೇವರಲ್ಲಿ ದುಃಖಿತ ದಂಪತಿಗಳ ಮನವಿ

2 years ago

ದೇವರಲ್ಲಿ ದುಃಖಿತ ದಂಪತಿಗಳ ಮನವಿ

ಅತಿ ಓದಿದಂತಹ ಮಕ್ಕಳು ಕೊಡದಿದ್ದರೂ ಚಿಂತೆ ಇಲ್ಲ
ನಮ್ಮ ದುಃಖಗಳಿಗೆ ಸ್ಪಂದಿಸುವಂತಹ ಸೂಕ್ಷ್ಮತೆಯುಳ್ಳ
ಮಕ್ಕಳನ್ನು ಕೊಡು ದೇವ

ಅತಿಯಾದ ಶ್ರೀಮಂತಿಕೆ ಮಕ್ಕಳಿಗೆ ಕೊಡದಿದ್ದರೂ ಚಿಂತೆ ಇಲ್ಲ
ಒಂದಷ್ಟು ಹೃದಯವಂತಿಕೆಯನ್ನು  ಕೊಡು ದೇವ

ಅರಮನೆ ಕಟ್ಟಿಸದಿದ್ದರೂ ಚಿಂತೆ ಇಲ್ಲ
ಸುಖದ ಬದುಕು ಕೊಡದಿದ್ದರೂ ಚಿಂತೆ ಇಲ್ಲ
ಕಾಲುಗಳು ಸೋತ ಸಂದರ್ಭದಲ್ಲಿ
ಹೆಗಲು ಕೊಟ್ಟು ರಕ್ಷಿಸಿಕೊಳ್ಳುವ
ಶ್ರೀಮಂತ ಮಕ್ಕಳಕೊಡು ದೇವ

ಬಾಳಿನ ಸಂಧ್ಯಾ ಕಾಲದಲ್ಲಿ ಜೊತೆಯಲ್ಲಿ ಇರದಿದ್ದರೂ ಚಿಂತೆ ಇಲ್ಲ
ನಮ್ಮ ಹೆಣಗಳು ಸಂಸ್ಕಾರಕ್ಕೆ ದೀರ್ಘವಾಗಿ
ಕಾಯುವಂತಾಗದಷ್ಟು ಸನಿಹದಲ್ಲಿ ಇರಲಿ

ದೇವರಂತೆ ನಮ್ಮ ಪೂಜಿಸದಿದ್ದರೂ ಚಿಂತೆ ಇಲ್ಲ
ಹಸಿವು ಬಾಧಿಸಿದಂತೆ ಅನ್ನವ ಕೊಟ್ಟು ಸಲುಹಿದರೆ ಸಾಕು
ಬಂಗಾರದ ಒಡವೆ ಕೊಡಿಸದಿದ್ದರೂ ಚಿಂತೆ ಇಲ್ಲ
ಒಂದಷ್ಟು ಪ್ರೀತಿಯನ್ನು ಕೊಡುವಂತ ಮಕ್ಕಳ ಕೊಡು ದೇವ

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply