ಬಿಎಂಟಿಸಿ ವತಿಯಿಂದ ಬೆಂಗಳೂರು ನಗರದಲ್ಲಿ ಹಲವಾರು ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಾಣ ಮಾಡಿರುತ್ತೀರಿ. ಹಲವಾರು ವರ್ಷಗಳಿಂದ ಈ ಮಳಿಗೆಗಳಿಗೆ ಬಾಡಿಗೆದಾರರು ಯಾರೂ ಬಂದಿರುವುದಿಲ್ಲ. ಈ ವಾಣಿಜ್ಯ ಮಳಿಗೆಗಳಿಂದ ಬಿಎಂಟಿಸಿಗೆ ಯಾವುದೇ ಆದಾಯವು ಬರುತ್ತಿಲ್ಲ. ಇವುಗಳ ನಿರ್ಮಾಣಕ್ಕಾಗಿ ಮಾಡಿರುವ ವೆಚ್ಚಕ್ಕೆ ಬಡ್ಡಿಯೂ ಬಂದಿರುವುದಿಲ್ಲ.
- ಟಿಪ್ಪು ಸುಲ್ತಾನ್ ಶಹೀದ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ
- ಕನ್ನಡ ಪತ್ರಿಕೋದ್ಯಮಕ್ಕೆ ಮತ್ತೊಂದು ಹೊಸ ಗರಿ
- ರಾಜಕೀಯ, ಸಾಮಾಜಿಕ, ಆರ್ಥಿಕ ಬದುಕು ಕಟ್ಟಿಕೊಟ್ಟ ಕಾಂಗ್ರೆಸ್ ಹಿಂದೂ ವಿರೋಧಿ!
- ಪುಟ್ಟ ‘ಒಡೆಯ’ನನ್ನು ಪರಿಚಯಿಸಿದ ಡಾಲಿ ಧನಂಜಯ
- ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಿಡಬೇಕು: ಆರ್ ಅಶೋಕ್
ಮಳಿಗೆಗಳಿಗೆ ಬಾಡಿಗೆಗೆ ಬರಲು ಬಿಎಂಟಿಸಿ ನಿಗದಿಪಡಿಸುವ ದರದ ವಿಚಾರದಲ್ಲಿ ಅಸಮಾಧಾನ ಇರುವ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಈ ಮಳಿಗೆಗಳನ್ನು ಬಾಡಿಗೆಗೆ ಪಡೆಯಲು ಬಯಸುತ್ತಿಲ್ಲ.
ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಮಾನ್ಯ ಸಚಿವರು ಈ ವಿಚಾರದಲ್ಲಿ ಆದ್ಯತೆಯ ಆಧಾರದಲ್ಲಿ ಪರಿಶೀಲಿಸಿ, ಬಾಡಿಗೆ ವಿಚಾರದಲ್ಲಿ ಯಾವುದಾದರೂ ಒಂದು ಅಂತಿಮ ನಿರ್ಧಾರಕ್ಕೆ ಬಂದು ಮಳಿಗೆಗಳನ್ನು ಬಾಡಿಗೆಗೆ ಕೊಟ್ಟರೆ ಬಿಎಂಟಿಸಿಗೆ ಆದಾಯ ಬರುತ್ತದೆ. ಆಗುತ್ತಿರುವ ನಷ್ಟದಲ್ಲಿ ಒಂದಷ್ಟು ಪ್ರಮಾಣವನಾದರೂ ತುಂಬಿಸಿಕೊಳ್ಳಬಹುದು.
ಬಹಳಷ್ಟು ಮಳಿಗೆಗಳು ದಶಕವನ್ನು ಕಳೆದರೂ ಬಾಡಿಗೆದಾರರಿಲ್ಲದೆ ಉಳಿದುಕೊಂಡು ಧೂಳಿನಿಂದ ತುಂಬಿದೆ.
ಬೆಂಗಳೂರು ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣವೂ ಸೇರಿದಂತೆ, ಅನೇಕ ಬಸ್ ನಿಲ್ದಾಣಗಳ ಮುಂಭಾಗದಲ್ಲಿ ರಸ್ತೆಗಳು ಹಳ್ಳ ಬಿದ್ದಿದೆ ಮತ್ತು ಅಲ್ಲಿ ಸ್ವಚ್ಛತೆಯು ಇಲ್ಲ, ಇನ್ನು ಇಲ್ಲಿರುವ ಶೌಚಾಲಯಗಳ ಸ್ಥಿತಿಯಂತೂ ಹೇಳುವಂತೆಯೇ ಇಲ್ಲ. ಬಿಎಂಟಿಸಿ ಅಧಿಕಾರಿಗಳು ಇವುಗಳ ಕಡೆ ಗಮನವನ್ನು ಹರಿಸಿ.
– ಕೆ ಎಸ್ ನಾಗರಾಜ್, ಬೆಂಗಳೂರು




