ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಿಡಬೇಕು: ಆರ್ ಅಶೋಕ್

11 hours ago

ಕರ್ನಾಟಕದ ಕಮಿಷನ್ ಹಣದಿಂದ ಆಫ್ರಿಕಾದಲ್ಲಿ ಚಿನ್ನದ ಗಣಿ ಖರೀದಿ!

ಕಾಂಗ್ರೆಸ್ ಸರ್ಕಾರದ ಲೂಟಿ ಮತ್ತು ಭ್ರಷ್ಟಾಚಾರಕ್ಕೆ ಮಿತಿಯೇ ಇಲ್ಲದಂತಾಗಿದೆ! ಸಚಿವ Satish Jarkiholi ಅವರು ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಟೆಂಡರ್ ನೀಡಲು ಗುತ್ತಿಗೆದಾರರಿಂದ ಭಾರಿ ಪ್ರಮಾಣದ ಲಂಚ ಸ್ವೀಕರಿಸಿ, ಆ ಲಂಚದ ಹಣದಿಂದ ಆಫ್ರಿಕಾದ ಕಾಂಗೋ (Congo) ದೇಶದ ಚಿನ್ನದ ಗಣಿ ಕಂಪನಿಯಲ್ಲಿ ಶೇ. 40ರಷ್ಟು ಪಾಲು ಖರೀದಿ ಮಾಡಿರುವುದು ಇ.ಡಿ (ED) ತನಿಖೆಯಲ್ಲಿ ಬಯಲಾಗಿದೆ.

ಸಚಿವರ ಮಗಳು ಹಾಗೂ ಸಂಸದೆಯಾಗಿರುವ ಪ್ರಿಯಾಂಕಾ, ಮಗ ರಾಹುಲ್, ತಂಗಿ ಮತ್ತು ಕುಟುಂಬಸ್ಥರ ಹೆಸರಿನಲ್ಲಿ ವಿದೇಶಗಳಲ್ಲಿ ಕೋಟಿ ಕೋಟಿ ಹೂಡಿಕೆ ಮಾಡಲಾಗಿದೆ.

ಮುಖ್ಯಮಂತ್ರಿ DK Shivakumar ಅವರೇ…

ಕರ್ನಾಟಕದ ತೆರಿಗೆದಾರರ ಹಣವನ್ನು, ಬಡವರ ಹೊಟ್ಟೆ ಹೊಡೆದು ಗಳಿಸಿದ ಲಂಚದ ಹಣವನ್ನು ವಿದೇಶದ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಿರುವ ನಿಮ್ಮ ‘ಕಮಿಷನ್ ಕಾಂಗ್ರೆಸ್ ಸರ್ಕಾರ’ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನ ಸಂಪೂರ್ಣವಾಗಿ ಕಳೆದುಕೊಂಡಿದೆ.

“ಹತ್ತು ರೂಪಾಯಿ ಲಂಚ ಕೇಳಿದರೆ ನನಗೆ ತಿಳಿಸಿ” ಎಂದು ಬೊಗಳೆ ಬಿಡುವ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ, ED ತನಿಖೆ ಪೂರ್ಣವಾಗುವವರೆಗೂ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಿಡಬೇಕು.

– ಆರ್ ಅಶೋಕ್, ವಿಧಾನಸಭೆ ವಿಪಕ್ಷ ನಾಯಕ

Leave a Reply