ದಲಿತರು ಮತ್ತು ಹಿಂದುಳಿದ ವರ್ಗದವರೆಗೆ ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಬದುಕು ಕಟ್ಟಿಕೊಟ್ಟ ಕಾಂಗ್ರೆಸ್ ಹಿಂದೂ ವಿರೋಧಿ!
- ಕನ್ನಡ ಪತ್ರಿಕೋದ್ಯಮಕ್ಕೆ ಮತ್ತೊಂದು ಹೊಸ ಗರಿ
- ರಾಜಕೀಯ, ಸಾಮಾಜಿಕ, ಆರ್ಥಿಕ ಬದುಕು ಕಟ್ಟಿಕೊಟ್ಟ ಕಾಂಗ್ರೆಸ್ ಹಿಂದೂ ವಿರೋಧಿ!
- ಪುಟ್ಟ ‘ಒಡೆಯ’ನನ್ನು ಪರಿಚಯಿಸಿದ ಡಾಲಿ ಧನಂಜಯ
- ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಿಡಬೇಕು: ಆರ್ ಅಶೋಕ್
- ಭದ್ರೆ ಬಯಲುಸೀಮೆಗೆ ಹರಿದು ಬಂದಿರುವುದು ರೈತರ ಪಾಲಿಗೆ ಹೊಸ ಆಶಾಕಿರಣ: ಅಪ್ಸರ್ ಕೊಡ್ಲಿಪೇಟೆ
ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಸಲುವಾಗಿ, ಅದರ ವಿರುದ್ಧ ಗಟ್ಟಿಯಾಗಿ ಧ್ವನಿಯನ್ನ ತೆಗೆದು, ಅವರಿಗೆ ಪ್ರವೇಶವಿಲ್ಲದ ದೇವಾಲಯಗಳಿಗೆ ತಾನು ಪ್ರವೇಶಿಸುವುದಿಲ್ಲವೆಂದು ಆಹ್ವಾನವನ್ನು ನಿರಾಕರಿಸಿ, ಹರಿಜನ ಪತ್ರಿಕೆಯನ್ನು ಪ್ರಾರಂಭಿಸಿ ತಮ್ಮ ಆಶ್ರಮದಲ್ಲಿ ದಲಿತರ ಏಳಿಗೆಗಾಗಿ ಪ್ರತ್ಯೇಕ ನಿಧಿ ಸಂಗ್ರಹಣ ಹುಂಡಿಯನ್ನು ಇಟ್ಟಿದ್ದ ಮತ್ತು ಪ್ರತಿದಿನ ತಮ್ಮ ಆಶ್ರಮದಲ್ಲಿ ಸಂಜೆಯ ವೇಳೆಯಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸುತ್ತಿದ್ದ ಹಾಗೂ ಹಂತಕನ ಗುಂಡಿಗೆ ಬಲಿಯಾದಾಗ ಹೇ ರಾಮ್ ಎಂದು ಹೇಳುತ್ತಾ ಪ್ರಾಣ ಬಿಟ್ಟ ಮಹಾತ್ಮ ಗಾಂಧೀಜಿ ರವರ ಆಶಯದ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ.
ಸ್ವಾತಂತ್ರ್ಯ ಚಳುವಳಿಯ ಜೊತೆಜೊತೆಯಲಿ ಅಸ್ಪೃಶ್ಯತೆಯ ವಿರುದ್ಧ ಹೋರಾಟ, ದಲಿತರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸುವ ವಿಚಾರಗಳನ್ನು ಪ್ರಸ್ತಾಪಿಸುತ್ತಾ, ಮುನ್ನಡೆದಂತಹ ಕಾಂಗ್ರೆಸ್ ಹಿಂದೂ ವಿರೋಧಿ.
ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂಲಕ ಸಂವಿಧಾನವನ್ನು ರಚಿಸಿ ಕೊಟ್ಟು, ದಲಿತರು ಮತ್ತು ಶೋಷಿತರು ವಿಶೇಷವಾಗಿ ಮಹಿಳೆಯರ ಹಕ್ಕುಗಳು ಹಾಗೂ ಅವರ ಬದುಕಿಗಾಗಿ ಹಲವಾರು ಕಾನೂನುಗಳನ್ನ ರೂಪಿಸಿ ಸ್ವಾಭಿಮಾನದ ಬದುಕಿನ ಜೊತೆಗೆ ಅವರ ರಕ್ಷಣೆಯ ಕವಚವನ್ನು ಸಂವಿಧಾನದ ಆಶಯದಲ್ಲಿ ಪ್ರಸ್ತಾಪಿಸಿರುವ ಕಾಂಗ್ರೆಸ್ ಹಿಂದೂ ವಿರೋಧಿ.
ದೇಶದಲ್ಲಿ ಹಲವಾರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನ ದಲಿತರು, ಹಿಂದುಳಿದ ವರ್ಗದವರು, ಮಹಿಳೆಯರಿಗೆ ಅವಕಾಶವನ್ನ ಕಲ್ಪಿಸಿಕೊಟ್ಟು ದೇಶದಲ್ಲೇ ಮೊದಲ ಬಾರಿಗೆ ಶ್ರೇಷ್ಠ ವಿದ್ವಾಂಸ ಅಪಾರ ಪಾಂಡಿತ್ಯವುಳ್ಳ ದಲಿತ ಸಮುದಾಯದ ಕೆ ಆರ್ ನಾರಾಯಣ್ ರವರನ್ನು, ರಾಷ್ಟ್ರಪತಿ ಮಾಡಿದಂತಹ ಕಾಂಗ್ರೆಸ್ ಹಿಂದೂ ವಿರೋಧಿ.
ದಲಿತರು ಮತ್ತು ಹಿಂದುಳಿದ ವರ್ಗದವರ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಪ್ರಗತಿಗಾಗಿ ಹಲವಾರು ಕಾರ್ಯಕ್ರಮಗಳನ್ನ ನೀಡಿದಂತಹ ಮತ್ತು ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ತಲೆಯ ಮೇಲೆ ಮಲ ಹೋರುವ ಪದ್ಧತಿಯನ್ನು ರದ್ದು ಮಾಡಿದ್ದು, ಶೋಷಿತ ಜನಾಂಗದವರನ್ನ ಶತಶತಮಾನಗಳಿಂದ ಜೀತ ಪದ್ಧತಿ ಎಂಬ ಅಮಾನುಷ ವ್ಯವಸ್ಥೆಯಲ್ಲಿ ನಡೆಸಿಕೊಳ್ಳುತ್ತಿದ್ದ ಉಳ್ಳವರ ವಿರುದ್ಧ ಕಾನೂನು ರೂಪಿಸಿ, ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಿದ್ದ ಕಾಂಗ್ರೆಸ್ ಹಿಂದೂ ವಿರೋಧಿ.
ಹೊಲಗದ್ದೆಗಳಲ್ಲಿ ಶತಶತಮಾನಗಳಿಂದ ಬೆವರು ಸುರಿಸಿ, ಮಾಲೀಕರು ಕೊಡುವ ಒಂದಷ್ಟು ಕಾಳಿಗಾಗಿ ಕೂಲಿ ಮಾಡುತ್ತಿದ್ದ ಲಕ್ಷಾಂತರ ಜನರಿಗೆ ಉಳುವವನೇ ಭೂಮಿಯ ಒಡೆಯ ಎಂದು ಕಾನೂನನ್ನು ತಂದು ಆ ಮೂಲಕ ಲಕ್ಷಾಂತರ ದಲಿತರು ಹಿಂದುಳಿದ ವರ್ಗದವರಿಗೆ ಭೂಮಿಯ ಮಾಲೀಕತ್ವವನ್ನು ನೀಡಿದ ಕಾಂಗ್ರೆಸ್ ಹಿಂದೂ ವಿರೋಧಿ.
ಹಿಂದುಳಿದ ವರ್ಗದವರಿಗೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಬದುಕನ್ನು ಕಟ್ಟಿಕೊಡುವ ಸಲುವಾಗಿ ದೇಶದಲ್ಲಿಯೇ ಅತ್ಯಂತ ಶ್ರೇಷ್ಠವಾದ ವರದಿ ಎಂದು ಹೆಸರು ಪಡೆದಿರುವ ಹಾವನೂರು ಆಯೋಗದ ಮೂಲಕ ಹಿಂದುಳಿದ ವರ್ಗದವರ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸಿದ ಕಾಂಗ್ರೆಸ್ ಹಿಂದೂ ವಿರೋಧಿ.
ಆರಾಧನ ಎಂಬ ಯೋಜನೆಯ ಮೂಲಕ ಸಣ್ಣಪುಟ್ಟ ಸಮಾಜದವರು ಕಟ್ಟಿಕೊಂಡು ಪೂಜಿಸುತ್ತಿರುವ ದೇವಾಲಯಗಳ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿಕೊಟ್ಟ ಕಾಂಗ್ರೆಸ್ ಹಿಂದೂ ವಿರೋಧಿ.
ಮೊದಲ ಬಾರಿಗೆ ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ಸ್ಥಾಪಿಸಿ ಹಂತಹಂತವಾಗಿ ಈ ಇಲಾಖೆಯಲ್ಲಿ ಅರ್ಚಕರ ಬದುಕಿಗೆ ಹಲವಾರು ಯೋಜನೆಗಳನ್ನು ತಂದುಕೊಟ್ಟು, ಅವರನ್ನು ನೆಮ್ಮದಿಯಿಂದ ತಮ್ಮ ಪೂಜಾ ಕಾರ್ಯ ನಡೆಸಲು ವ್ಯವಸ್ಥೆಯನ್ನು ಮಾಡಿಕೊಟ್ಟ ಕಾಂಗ್ರೆಸ್ ಹಿಂದೂ ವಿರೋಧಿ.
ಅರ್ಚಕರಿಗೆ ಆರೋಗ್ಯ ರಕ್ಷಣೆಗೆ ವ್ಯವಸ್ಥೆ, ಆಕಸ್ಮಿಕ ಸಾವುಗಳಾದರೆ ಎರಡು ಲಕ್ಷ ರೂಪಾಯಿಗಳ ಪರಿಹಾರ, ಅವರ ಮಕ್ಕಳ ವೈದ್ಯಕೀಯ ಶಿಕ್ಷಣಕ್ಕೆ ಒಂದು ಲಕ್ಷ, ಇಂಜಿನಿಯರಿಂಗ್ ಶಿಕ್ಷಣಕ್ಕೆ 50,000, ಪದವಿ ಶಿಕ್ಷಣಕ್ಕೆ 25 ಸಾವಿರ ಪ್ರೋತ್ಸಾಹ ಧನ, ಅರ್ಚಕರಿಗೆ ಪ್ರತಿ ವರ್ಷ ಪ್ರವಾಸ ಯೋಗ, ಕಾಶಿ, ಅಮರನಾಥ ಮತ್ತು ಮಾನಸ ಸರೋವರ ಯಾತ್ರೆಗಳಿಗೆ ಹೋಗುವವರಿಗೆ ಪ್ರೋತ್ಸಾಹ ಧನವನ್ನ ನೀಡುವಂತಹ ಯೋಜನೆಯನ್ನು ನೀಡಿದ ಕಾಂಗ್ರೆಸ್ ಹಿಂದೂ ವಿರೋಧಿ.
ದಲಿತರಿಗಾಗಿ ಹಿಂದುಳಿದ ವರ್ಗದವರಿಗಾಗಿ ಅನೇಕ ವಸತಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿದಂತಹ ಕಾಂಗ್ರೆಸ್ ಹಿಂದೂ ವಿರೋಧಿ.
ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಸಮಾಜದ ಎಲ್ಲ ವರ್ಗದವರಿಗೆ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಸೌಲಭ್ಯಗಳು ದೊರೆಯಲು ವ್ಯವಸ್ಥೆಯನ್ನ ಮಾಡಿಕೊಟ್ಟ, ಈ ಮೂಲಕ ಬಹುತೇಕ ಹಿಂದೂ ಸಮಾಜದ ಎಲ್ಲ ವರ್ಗದವರು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಯೋಜನೆ ರೂಪಿಸಿಕೊಟ್ಟ ಕಾಂಗ್ರೆಸ್ ಹಿಂದೂ ವಿರೋಧಿ.
ಆರ್ಥಿಕತೆಯ ವಿಚಾರದಲ್ಲಿ ಮಹತ್ತರವಾದ ಸುಧಾರಣೆಗಳನ್ನು ತಂದು, ವಿಶ್ವ ಮಾರುಕಟ್ಟೆಯನ್ನು ಸೃಷ್ಟಿಸಿ, ಬಹುರಾಷ್ಟ್ರೀಯ ಕಂಪನಿಗಳ ಸ್ಥಾಪನೆಗೆ ಅನುವು ಮಾಡಿಕೊಟ್ಟು ಲಕ್ಷಾಂತರ ಪ್ರತಿಭಾವಂತರಿಗೆ ತಾಂತ್ರಿಕ ಶಿಕ್ಷಣ ಉಳ್ಳವರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕ್ರಾಂತಿಯನ್ನ ಮಾಡಿದ, ಕಾಂಗ್ರೆಸ್ ಹಿಂದೂ ವಿರೋಧಿ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಯಾರು ಎನ್ನುವುದನ್ನು ಒಮ್ಮೆ ಸಮೀಕ್ಷೆ ನಡೆಸಲಿ.
ಕಾಂಗ್ರೆಸ್ ಯಾವುದೇ ಧರ್ಮದ ವಿರುದ್ಧವೂ ಅಲ್ಲ, ಯಾವುದೇ ಧರ್ಮದ ಪರವು ಅಲ್ಲ. ಕಾಂಗ್ರೆಸ್ ಹಸಿದವರ, ನೋಂದವರ, ಶೋಷಿತರ ಪರ, ಕುವೆಂಪುರವರ ವಿಶ್ವಮಾನವ ಸಂದೇಶದ ದಾರಿಯಲ್ಲಿ ಸಾಗುವುದು, ಮಹಾತ್ಮ ಗಾಂಧೀಜಿಯವರ ಸರ್ವಧರ್ಮ ಸಮನ್ವಯದ ಆಶಯದಂತೆ ನಡೆಯುವುದು, ಬಸವಣ್ಣನವರ ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ದುಡಿಯುವುದು, ಪ್ರಮುಖವಾದ ಉದ್ದೇಶವಾಗಿದೆ.
ಕಾಂಗ್ರೆಸ್ ಎಂದೂ ಜಾತಿಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ. ಅಂತಹ ಸಂಗತಿಗಳನ್ನು ಬಳಸಿಕೊಂಡು ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಚಿಂತನೆಯನ್ನು ಮಾಡುವುದಿಲ್ಲ. ಅಂತಹ ಆಲೋಚನೆಗಳು ಎಂದೂ ಕಾಂಗ್ರೆಸ್ ನಲ್ಲಿ ಹುಟ್ಟುವುದಿಲ್ಲ.
ಅಸ್ಪೃಶ್ಯತೆಯನ್ನ ಆರಾಧಿಸುತ್ತಾ ಆನಂದಿಸುವವರ ವಿರುದ್ಧ ಧಿಕ್ಕರಿಸದೆ, ಕಠಿಣವಾದ ನಿಲುವುಗಳನ್ನ ಕೈಗೊಳ್ಳದೆ ಜಾಣತನದಿಂದ ಮಾತನಾಡುವವರು ಹಿಂದೂರಕ್ಷಕರು.
ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ದೇಶದಲ್ಲಿ ಜಾರಿಯಾದ ಮಂಡಲ್ ಆಯೋಗದ ಶಿಫಾರಸುಗಳ ವಿರುದ್ಧ ಯುವ ಜನರನ್ನ ಎತ್ತಿ ಕಟ್ಟಿ, ಹಿಂದುಳಿದ ವರ್ಗದವರ ಸೌಲಭ್ಯ ಸೌಕರ್ಯಗಳ ವಿಚಾರದಲ್ಲಿ ಅಸಹನೆ ತೋರಿದ ವ್ಯಕ್ತಿಗಳು ಹಿಂದೂ ರಕ್ಷಕರು.
ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ, ಕೆರೆಯ ನೀರನ್ನು ಬಳಸಬಾರದು, ಬಾವಿಗಳ ನೀರನ್ನು ಕುಡಿಯಬಾರದು, ಶಾಲೆಗಳಿಗೆ ಬರಬಾರದು, ಪ್ರಮುಖ ರಸ್ತೆಗಳಲ್ಲಿ ತಲೆಯೆತ್ತಿ ನಡೆಯಬಾರದು, ಮೈತುಂಬ ಬಟ್ಟೆ ತೊಟ್ಟು ಬದುಕಬಾರದು ಎಂಬಂತಹ ಕೀಳು ಮಟ್ಟದ ನಡವಳಿಕೆಗಳ ವಿರುದ್ಧ ಎಂದೂ ಸಹ ಹೋರಾಟ ಮಾಡದ ವ್ಯಕ್ತಿಗಳು ಹಿಂದೂ ರಕ್ಷಕರು.
ಘೋಷಣೆಗಳಲ್ಲಿ ಭಾಷಣಗಳಲ್ಲಿ, ವೇಷಭೂಷಣಗಳಲ್ಲಿ ಹಿಂದುಗಳ ರಕ್ಷಣೆ ಇಲ್ಲ. ಹಿಂದೂಗಳ ರಕ್ಷಣೆ ಕಾರ್ಯಕ್ರಮಗಳಲ್ಲಿ ಇದೆ.
– ಕೆ ಎಸ್ ನಾಗರಾಜ್, ಬೆಂಗಳೂರು




