ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ದಿನಾಂಕ: 12.12.2024 ರಂದು ಸಂಜೆ 05.00 ಗಂಟೆಗೆ ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಕಳತಾವೂರ್ ಮಳಾವ್ -03, ಸಜ್ಜನರ ಸಲ್ಲಾಪ -03, ಮೀನಾರೋ ಪಾಮಣೋ-ತಿಂಗಳ ಅತಿಥಿ ಸಮಾರಂಭವನ್ನು ಏರ್ಪಡಿಸಲಾಗಿದೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ. ಎ. ಆರ್. ಗೋವಿಂದಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಬಿ.ಟಿ ಲಲಿತಾ ನಾಯಕ, ಹಿರಿಯ ಸಾಹಿತಿ, ಚಿಂತಕರು ಹಾಗೂ ಮಾಜಿ ಮಂತ್ರಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ ಮತ್ತುತಿಂಗಳ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ದಿನೇಶ್ ಅಮಿನ್ ಮಟ್ಟು, ಹಿರಿಯ ಸಾಂಸ್ಕೃತಿಕ ಚಿಂತಕರು ಭಾಗವಹಿಸಲಿದ್ದಾರೆ. ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಕಾತರಪ್ಪ, ಲಮಾಣಿ (ಜಾನಪದ),ಗದಗ, ತಂಬೂರಿ ಉಮನಾಯಕ್ (ಜಾನಪದ), ದಾವಣಗೆರೆ, ರುಕ್ಮೀಣಿ ಬಾಯಿ(ಚಿತ್ರಕಲೆ), ಕೊಪ್ಪಳ ಇವರಿಗೆ ಗೌರವಾರ್ಪಣೆ ಹಾಗೂ ನಡೆಯಲಿದೆ. ಶ್ರೀ ಪಂಡಿತ್ ಎಂ.ಎಸ್. ಪ್ರದೀಪ್ ಕುಮಾರ್ ಮತ್ತು ತಂಡದವರಿಂದ ಸಿತಾರ್ ವಾದನವನ್ನು ಸಂಜೆ 5.00 ಕ್ಕೆ ಆಯೋಜಿಸಲಾಗಿದೆ.


