ಬುದ್ಧಗುರು, ಬಸವಣ್ಣ, ಅಂಬೇಡ್ಕರ್, ಕುವೆಂಪು ಮುಂತಾದ ದಾರ್ಶನಿಕರು ಯಾವತ್ತೂ ಮಾಂಸಾಹಾರ ಸಂಸ್ಕೃತಿಯನ್ನಾಗಲೀ ಮಾಂಸಾಹಾರಿಗಳನ್ನಾಗಲೀ ಕೀಳುಗಂಡಿಲ್ಲ. ಹಾಗೆಂದು ಅವರು ಮಾಂಸಾಹಾರವನ್ನು promote ಮಾಡಿಲ್ಲ. ಬುದ್ಧಗುರು ದೇವರ ಹೆಸರಿನಲ್ಲಿ ಬಲಿ ಕೊಡುವ ಮೂಢಾಚಾರಗಳನ್ನು ವಿರೋಧಿಸುತ್ತಾರೆ. ಬಸವಣ್ಣನವರು ಲಿಂಗಾರ್ಪಿತವಾದದ್ದೆಲ್ಲವೂ ಮಹಾಪ್ರಸಾದ ಎನ್ನುತ್ತಾರೆ. ಮಾಂಸಾಹಾರ ಪ್ರಿಯರಾದ ಕುವೆಂಪು ಅವರ ಮಗ ತೇಜಸ್ವಿ ಒಬ್ಬ ಬೇಟೆಗಾರ. ವಿಶ್ವಜ್ಞಾನಿ ಅಂಬೇಡ್ಕರ್ ಕೂಡಾ ಮಾಂಸಾಹಾರಿಯಾಗಿದ್ದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಶೇಕಡಾ ೯೮ ರಷ್ಟು ನೊಬೆಲ್ ಪ್ರಶಸ್ತಿ ಪುರಸ್ಕೃತರು ಮಾಂಸಾಹಾರಿಗಳೇ ಆಗಿರುತ್ತಾರೆ. ವಿದೇಶಗಳಲ್ಲಿ ನಡೆಯುವ ಕವಿ ಮೇಳಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಸೇವನೆ ಅವಿಭಾಜ್ಯ ಅಂಗವಾಗಿದೆ. ಅಲ್ಲಿನ ಟೇಬಲ್ ಗಳಲ್ಲಿ ಕವಿಗಳು ಕುಡಿದು ತಿಂದುಣ್ಣುವಾಗ ನಡೆಸುವ ಅನೌಪಚಾರಿಕ ಸಾಹಿತ್ಯ ಚರ್ಚೆಗಳನ್ನು ಕೂಡಾ ದಾಖಲೀಕರಿಸಿ Table talk ಹೆಸರಿನಲ್ಲಿ ಕೃತಿಗಳನ್ನು ಪ್ರಕಟಿಸುವ ಪರಿಪಾಠವಿದೆ.
ಅವರು ತಿಂದುಂಡು ಕುಡಿದು ನಡೆಸುವ ಚಟುವಟಿಕೆಗಳೆಲ್ಲವೂ ಅತ್ಯಂತ civilized ಆಗಿರುತ್ತವೆ. ನಮ್ಮಲ್ಲಿ ಸಸ್ಯಾಹಾರ ಸ್ವೀಕರಿಸಲು ಕೂಡಾ ರಂಪಾಟಗಳನ್ನು ನಡೆಸುವಾಗ ಮಾಂಸಾಹಾರ ಸ್ವೀಕರಿಸಲು ತಲೆಗಳೇ ಉರುಳಬಹುದೇನೋ ! ನಮ್ಮವರ ವರ್ತನೆಗಳು ಅಷ್ಟರಮಟ್ಟಿಗೆ uncivilized ಆಗಿರುತ್ತವೆ. ಅತ್ಯಂತ ಶಿಸ್ತಿನ ಕ್ರಮಗಳನ್ನು ಅನುಸರಿಸಿ ಸಾಹಿತ್ಯ ಸಮ್ಮೇಳನದಲ್ಲಿ ತೀರಾ civilized ಆಗಿ ಮಾಂಸಾಹಾರ ಒದಗಿಸುವುದಾದರೆ ನಾನು ಒಪ್ಪುತ್ತೇನೆ. ಇಲ್ಲದಿದ್ದರೆ ಮಾಂಸಾಹಾರ ಸಂಸ್ಕೃತಿಯ ಮೇಲೆ ಸಸ್ಯಾಹಾರಿಗಳು ಹುಸಿ ಶ್ರೇಷ್ಠತೆಯ ಹೆಸರಿನಲ್ಲಿ ನಡೆಸುವ ಹಲ್ಲೆ- ಹವಣಿಕೆಗಳು ಮತ್ತಷ್ಟು ತೀವ್ರವಾಗುತ್ತವೆ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




