ಮಂಗಳೂರು: ಬಜಾಲ್ ನ ಪಕ್ಕಲಡ್ಕ ಯುವಕ ಮಂಡಲದ ಸದಸ್ಯರು ಸಮಾಜದ ಒಳಿತಿಗೆ ನಡೆಸುವ ಚಟುವಟಿಕೆಗಳು ಬೇರೆಲ್ಲೂ ಕಾಣ ಸಿಗುವುದು ಅತಿ ವಿರಳ ಎಂದು ಬಜಾಲ್ ಹೋಲಿ ಸ್ಪಿರೀಟ್ ಚರ್ಚ್ ನ ಧರ್ಮಗಳುಗಳಾದ ರೆ.ಫಾ ಆಂಡ್ರ್ಯೂ ಡಿಸೋಜ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಕ್ಕಲಡ್ಕ ಯುವಕ ಮಂಡಲ (ರಿ) ಇದರ 73ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಕಂಡಂತೆ ಈ ಸಂಸ್ಥೆಗಳು ಕೇವಲ ಸಮಾಜ ಸೇವೆ ಮಾತ್ರವಲ್ಲ ಯುವಜನರನ್ನು ಜನಪರ ಚಿಂತನೆಗೆ ಹಚ್ಚಿಕೊಳ್ಳುವಂತೆ ತಯಾರುಗೊಳಿಸುತ್ತಿರುವುದು ಬಹಳ ವಿಶೇಷ. ಇಂತಹ ಬೆಳವಣೆಗೆಗಳೇ ಸಮಾಜದ ಒಳಿತಿಗೆ ಕೊಡುಗೆ ಕೊಡುವಂತದ್ದು ಈ ರೀತಿಯ ಮಾದರಿ ಕೆಲಸಗಳನ್ನು ಇತರೆ ಸಂಸ್ಥೆಗಳು ಅನುಸರಿಸಬೇಕಾಗಿದೆ ಎಂದರು.
ಜಿಲ್ಲೆಯ ಹಲವು ಕಡೆಗಳಲ್ಲಿರುವ ಯುವಕ ಮಂಡಲಗಳನ್ನು ಗಮನಿಸಿದ್ದೇನೆ ಆದರೆ ಇಷ್ಟೊಂದು ಹಿರಿಯ ಮತ್ತು ಸ್ಪಷ್ಟ ಗುರಿಗಳನ್ನು ಹೊಂದಿ ಕಾರ್ಯಚರಿಸುತ್ತಿರುವ ಪಕ್ಕಲಡ್ಕದಂತಹ ಯುವಕ ಮಂಡಲವನ್ನು ನಾನೆಲ್ಲೂ ಕಂಡಿಲ್ಲ. ಸಮಾಜಕ್ಕೆ ತಮ್ಮಿಂದಾದ ಕೊಡುಗೆಗಳನ್ನು ನೀಡುವ ಕೆಲಸಗಳನ್ನು ಹೆಚ್ಚಿಸಿಕೊಂಡಿದ್ದಾರೆಯೇ ಹೊರತು ಹಿಮ್ಮುಖವಾಗಿ ಚಲಿಸಿಲ್ಲ ಎಂದರು.
ಕಳೆದ ಎರಡು ವರುಷಗಳಿಂದ ಅನಾರೋಗ್ಯ ಪೀಡಿತರಿಗೆ ಉಚಿತ ಆಂಬ್ಯುಲೆನ್ಸ್ ಮೂಲಕ ನೀಡುವ ಸೇವೆಯೇ ಅದಕ್ಕೊಂದು ಉದಾಹರಣೆ. ಊರಿನ ಪ್ರೀತಿ ಸೌಹಾರ್ದತೆಗೆ ಕೊಂಡಿಯಾಗಿರುವ ಪಕ್ಕಲಡ್ಕ ಯುವಕ ಮಂಡಲದಂತಹ ಸಂಘ ಸಂಸ್ಥೆಗಳನ್ನು ಬೆಳೆಸಿ ಉಳಿಸುವಂತಹ ಹೊಣೆಗಾರಿಕೆ ಈ ಸಮಾಜಕ್ಕೂ ಇದೆ ಇಂತಹ ಯುವಕರ ಸಂಖ್ಯೆ ಹೆಚ್ಚಳಗೊಳ್ಳಲಿ ಎಂದು ಹಾರೈಸಿದರು.
ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಮಾಜಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರಾದ ಚಂದ್ರಕಲಾ ಡಿ ರಾವ್ , ಸತೀಶ್ ಕುಮಾರ್ ಬಜಾಲ್, ಪರಿವರ್ತನಾ ಸಹಕಾರಿ ಸಂಘದ ಅಧ್ಯಕ್ಷರಾದ ಕೃಷ್ಣಾನಂದ, ಯುವಜನ ಮುಖಂಡರಾದ ಬಿ.ಕೆ ಇಮ್ತಿಯಾಜ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಮಲಾಕ್ಷ ಶೆಟ್ಟಿ ಬಜಾಲ್, ಯುವ ಉದ್ಯಮಿ ಸಿರಾಜ್ ಮಂಜೇಶ್ವರ, ಶೈಲೇಶ್ ಶೆಟ್ಟಿ, ಸಂತೋಷ್ ಬಜಾಲ್, ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷ ದೀಪಕ್ ಬಜಾಲ್, ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ್ದ ಪ್ರಕಾಶ್ ಶೆಟ್ಟಿ, ರಾಮಚಂದ್ರ ಆಳ್ವ, ಸಂತೋಷ್ ಪಲ್ಲಕೆರೆ ಇವರುಗಳನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಕ್ಷಿತ್ ಭಂಡಾರಿ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಪಕ್ಕಲಡ್ಕ ಯುವಕ ಮಂಡಲದ ತಂಡಗಳಿಂದ ನೃತ್ಯಪ್ರದರ್ಶನ ಹಾಗೂ ಅಷ್ಟಮಿ ಎಂಬ ತುಳು ಸಂಸಾರಿಕ ನಾಟಕ ಪ್ರದರ್ಶನಗೊಂಡವು.
ಪಕ್ಕಲಡ್ಕ ಯುವಕ ಮಂಡಲ ಮುಖಂಡರಾದ ಜಗದೀಶ್ ಬಜಾಲ್ ಸ್ವಾಗತಿಸಿದರು, ದೀರಜ್ ಬಜಾಲ್ ವಂದಿಸಿ ನಾಗರಾಜ್ ಬಜಾಲ್ ನಿರೂಪಿಸಿದರು.




