ಮಂಗಳೂರು: ಖ್ಯಾತ ನಾಟಕ ಕಲಾವಿದರೂ, ಪಕ್ಕಲಡ್ಕ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದ ಪ್ರಸ್ತುತ ಅಸೈಗೋಳಿಯಲ್ಲಿ ವಾಸವಾಗಿದ್ದ ಕೆ ರಾಘವ ಬಂಗೇರ (78) ವಯೋಸಹಜ ಕಾಯಿಲೆಯಿಂದಾಗಿ ಇಂದು ಅಸೈಗೋಳಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಬಜಾಲ್ ಪಕ್ಕಲಡ್ಕದ ಪರಿಸರದಲ್ಲಿ ಹುಟ್ಟಿ ಬೆಳೆದ ರಾಘವ ಅವರು ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಯಿಂದ ಆಕರ್ಷಿತರಾಗಿ ಆ ಮೂಲಕ ಪಕ್ಕಲಡ್ಕ ಯುವಕ ಮಂಡಲದಲ್ಲಿ ಸಕ್ರಿಯ ಸದಸ್ಯರಾದರು. ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾದ ಈ ಯುವಕ ಮಂಡಲದಲ್ಲಿ ತನ್ನಲ್ಲಿರುವ ಪ್ರತಿಭೆಯನ್ನು ಬೆಳೆಸಲು ಸಂಪೂರ್ಣವಾಗಿ ತೊಡಗಿಸಿಕೊಂಡ ಅವರು, ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದೆಷ್ಟೋ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಅದರಲ್ಲೂ ಪ್ರಮುಖ ಪಾತ್ರವನ್ನು ನಿರ್ವಹಿಸಿ ಕಲಾಭಿಮಾನಿಗಳ ಹೃದಯ ಗೆದ್ದರು. ಮಾತ್ರವಲ್ಲ ಆ ನಾಟಕಗಳಲ್ಲಿ ಅನೇಕ ಹಾಡುಗಳನ್ನು ರಚಿಸಿ ಎಲ್ಲರ ಬಾಯಲ್ಲಿ ಆ ಹಾಡುಗಳು ಗುಣಿಗುಣಿಸುವಂತೆ ಮಾಡಿದ ನಿಜವಾದ ಕಲಾವಿದರಾಗಿದ್ದರು.
ಬಳಿಕ ಜಪ್ಪಿನಮೊಗರು ಪ್ರದೇಶದಲ್ಲೂ ವಾಸವಾಗಿದ್ದ ರಾಘವ ಪ್ರಸ್ತುತ ಅಸೈಗೋಳಿಯಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿದ್ದರು. ಅಲ್ಲಿಯೂ ತಮ್ಮ ಸಾಂಸ್ಕೃತಿಕ ಛಾಪನ್ನು ಮೂಡಿಸಿದ ರಾಘವ, ಅನೇಕ ಸ್ಥಳೀಯ ಸಂಘಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದರು.
ಪರಿಸರ ಪರಿಸ್ಥಿತಿ ಬದಲಾದರೂ ತಮ್ಮಲ್ಲಿದ್ದ ಎಡಪಂಥೀಯ ಚಿಂತನೆಗೆ ಯಾವತ್ತೂ ಚ್ಯುತಿ ಬಾರದ ರೀತಿಯಲ್ಲಿ ತಮ್ಮ ಕೊನೆಯ ಉಸಿರು ಇರುವವರೆಗೂ ಕಾಪಾಡಿಕೊಂಡು ಬಂದರು. ರಾಘವ ಬಂಗೇರರವರ ನಿಧನ ಎಡಪಂಥೀಯ ಚಳುವಳಿಗೆ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ರಾಘವ ಬಂಗೇರ ಪತ್ನಿ, ಮೂವರು ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



