ಯಾವುದು ನಿಜವಾದ ಧರ್ಮ
ಪರರ ಆಸ್ತಿ ಕಬಳಿಸದೆ ಇರುವುದು, ಸರ್ಕಾರಿ ಸ್ವತ್ತುಗಳ ಸುಳ್ಳು ದಾಖಲೆಗಳೊಂದಿಗೆ ಸ್ವಾಧೀನಪಡಿಸಿಕೊಳ್ಳದೆ ಇರುವುದು, ಮುಗ್ಧ ಜನರ ಸ್ಥಿರಾಸ್ತಿಗಳನ್ನು ವಾಮಮಾರ್ಗದಿ ವಶಕ್ಕೆ ಪಡೆದುಕೊಳ್ಳದೆ ಇರುವುದೇ ನಿಜವಾದ ಧರ್ಮ.
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
ಅಮಾಯಕ ಹೆಣ್ಣು ಮಕ್ಕಳನ್ನು ಶೋಷಣೆ ಮಾಡದಿರುವುದು, ಸಂಕಷ್ಟದಲ್ಲಿರುವ ಮಹಿಳೆಯರ ಸ್ವಾರ್ಥಕ್ಕೆ ಬಳಸಿಕೊಳ್ಳದಿರುವುದು, ವಯಸ್ಸಿನ ಅಂತರವಿಲ್ಲದೆ ಎಲ್ಲರಲ್ಲೂ ಕಾಮದ ಕಣ್ಣಿನಿಂದ ಕಾಣದಿರುವುದೇ ನಿಜವಾದ ಧರ್ಮ.
ಅಧಿಕಾರ ಸಿಕ್ಕಾಗ ಖಜಾನೆಯ ಹಣವನ್ನು ತಮ್ಮ ಮನೆಯಲ್ಲಿ ತುಂಬಿಸಿಕೊಳ್ಳದಿರುವುದೇ, ಸೇವೆ ಮಾಡುವ ನೆಪದಲ್ಲಿ ಹಣವನ್ನು ಸ್ವಾಹ ಮಾಡದಿರುವುದೇ, ಕಳಪೆ ಕಾಮಗಾರಿಗಳ ಮೂಲಕ ಜನರ ತೆರಿಗೆಯ ಹಣವನ್ನು ಪೋಲು ಮಾಡಿ, ತಮ್ಮ ಮನೆಗಳ ಶ್ರೀಮಂತಿಕೆ ಬೆಳೆಸಿಕೊಳ್ಳದಿರುವುದೇ ನಿಜವಾದ ಧರ್ಮ.
ಸಮಾನತೆಯ ವಿಚಾರದಲ್ಲಿ ಅಪಸ್ವರ ತೆಗೆಯದೆ ಶೋಷಿತರ ಮತ್ತು ಅಸಹಾಯಕರ ವಿಚಾರದಲ್ಲಿ ಅಸಡ್ಡೆ ತೋರದೆ, ಬೆವರು ಹರಿಸಿ ಬದುಕುವ ಜನರ ನಡುವೆ ಅಸ್ಪೃಶ್ಯತೆ ಎಂಬ ಭಾವನೆಯಿಂದ ಬದುಕದಿರುವ ಮನಸ್ಥಿತಿಯೇ ನಿಜವಾದ ಧರ್ಮ.
ಸಿಗುವ ಎಲ್ಲ ಸಂಪತ್ತು ನಮ್ಮದಾಗಬೇಕೆಂದಿನಿಸದೆ, ಸಿಗುವ ಎಲ್ಲಾ ಅವಕಾಶಗಳು ನಮ್ಮ ಬಂಧುಗಳಿಗೆ ಇರಬೇಕೆಂಬ ಭಾವ ಇಲ್ಲದೆ, ಎಲ್ಲ ಸುಖವು ತಮಗೆ ಮಾತ್ರವೆಂಬ ಆಲೋಚನೆಗಳಿಲ್ಲದೆ, ತನ್ನದಲ್ಲದ ಪಾಲನ್ನು, ತನ್ನದಲ್ಲದ ಅವಕಾಶವನ್ನು, ತನ್ನದಲ್ಲದ ಸೌಕರ್ಯ ಸೌಲಭ್ಯಗಳನ್ನು ಅನ್ಯರಿಗೂ ಸಿಗುವಂತೆ ಮಾಡುವುದೇ ನಿಜವಾದ ಧರ್ಮ.
ಮಾನವೀಯತೆ, ಪ್ರೀತಿ ವಿಶ್ವಾಸ, ಪರಸ್ಪರ ಗೌರವಿಸುವ ಸಂಸ್ಕೃತಿ, ಪ್ರಶ್ನಿಸುವವರನ್ನು ದ್ವೇಷಿಸದೆ, ಟೀಕೆಗಳಿಗೆ ಹೆದರದೆ ಎಲ್ಲರೊಂದಿಗೆ ಬೆರತು ಬದುಕುವುದೇ ನಿಜವಾದ ಧರ್ಮ.
ನಮ್ಮ ಕೈಗಳು ಶುದ್ಧವಾಗಿದ್ದರೆ, ನಮ್ಮ ಮನಸ್ಸುಗಳು ನಿರ್ಮಲವಾಗಿದ್ದರೆ, ನಮ್ಮ ಆಲೋಚನೆಗಳು ಕೆಟ್ಟದಾಗಿರದಿದ್ದರೆ, ನಮ್ಮ ಕೃತ್ಯಗಳೆಲ್ಲವೂ ನೋವು ತರದೆ ಇದ್ದರೆ ಧರ್ಮ ಉಳಿಯುತ್ತದೆ ಎಲ್ಲಾ ಕಾಲದಲ್ಲೂ ತನ್ನ ಅಸ್ತಿತ್ವದಲ್ಲಿ ಅಪಾಯವಿಲ್ಲದೆ ಸಾಗುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




