ಸಮಗ್ರ ವಿಶ್ಲೇಷಣೆ – 2014-2022
2014 ರಿಂದ 2022 ರ ಅವಧಿಯಲ್ಲಿ ಕೇಂದ್ರ ಜಾರಿ ನಿರ್ದೇಶನಾಲಯ (ED) ಕೈಗೊಂಡ ತನಿಖಾ ಕ್ರಮಗಳು ದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಈ ಅವಧಿಯಲ್ಲಿ ತನಿಖಾ ಸಂಸ್ಥೆ ಕೈಗೊಂಡ ಕ್ರಮಗಳ ಅಂಕಿಅಂಶಗಳನ್ನು ಆಧರಿಸಿ ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿದ ತನಿಖಾ ವರದಿಯ ಪಕ್ಷವಾರು ವಿವರ ಇಲ್ಲಿದೆ.
- ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಿಡಬೇಕು: ಆರ್ ಅಶೋಕ್
- ಭದ್ರೆ ಬಯಲುಸೀಮೆಗೆ ಹರಿದು ಬಂದಿರುವುದು ರೈತರ ಪಾಲಿಗೆ ಹೊಸ ಆಶಾಕಿರಣ: ಅಪ್ಸರ್ ಕೊಡ್ಲಿಪೇಟೆ
- ಹಸಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುತ್ತಿರುವ ಏಕೈಕ ವಾರ್ಡ್ ಯಡಿಯೂರು
- ಕಪ್ಪುಪಟ್ಟಿ ಧರಿಸಿ ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
- ಪ್ರಿಯಾಂಕ್ ಖರ್ಗೆ ಅವರ ಗೃಹ ಇಲಾಖೆ ಯಾರನ್ನು ರಕ್ಷಿಸುತ್ತಿದೆ?: ಆರ್ ಅಶೋಕ್
ಪ್ರಮುಖ ಮುಖ್ಯಾಂಶಗಳು
- ಒಟ್ಟು ತನಿಖೆಗೆ ಒಳಪಟ್ಟ ರಾಜಕೀಯ ನಾಯಕರು: 121
- ವಿರೋಧ ಪಕ್ಷಗಳ ನಾಯಕರು: 115 (ಶೇ. 95)
- ಸರ್ಕಾರ/ಆಡಳಿತ ಪರ ನಾಯಕರು: 6 (ಶೇ. 5)
ಪಕ್ಷವಾರು ತನಿಖೆಗೆ ಒಳಪಟ್ಟ ನಾಯಕರ ವಿವರ
ಕೇಂದ್ರ ತನಿಖಾ ಸಂಸ್ಥೆ ನಡೆಸಿದ ವಿಚಾರಣೆ, ದಾಳಿ ಹಾಗೂ ಪ್ರಕರಣ ದಾಖಲಾದ ನಾಯಕರ ಪಕ್ಷವಾರು ಪಟ್ಟಿ ಕೆಳಗಿನಂತಿದೆ:
| ಕ್ರಮ ಸಂಖ್ಯೆ | ರಾಜಕೀಯ ಪಕ್ಷ | ತನಿಖೆಗೆ ಒಳಪಟ್ಟ ನಾಯಕರ ಸಂಖ್ಯೆ |
| 1 | ಕಾಂಗ್ರೆಸ್ (INC) | 24 |
| 2 | ತೃಣಮೂಲ ಕಾಂಗ್ರೆಸ್ (TMC) | 19 |
| 3 | ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) | 11 |
| 4 | ಶಿವಸೇನಾ | 8 |
| 5 | ಬಿಜು ಜನತಾ ದಳ (BJD) | 6 |
| 6 | ದ್ರಾವಿಡ ಮುನ್ನೇತ್ರ ಕಳಗಂ (DMK) | 6 |
| 7 | ರಾಷ್ಟ್ರೀಯ ಜನತಾ ದಳ (RJD) | 5 |
| 8 | ಬಹುಜನ ಸಮಾಜ ಪಕ್ಷ (BSP) | 5 |
| 9 | ಸಮಾಜವಾದಿ ಪಕ್ಷ (SP) | 5 |
| 10 | ತೆಲುಗು ದೇಶಂ ಪಕ್ಷ (TDP) | 5 |
| 11 | ಆಮ್ ಆದ್ಮಿ ಪಕ್ಷ (AAP) | 3 |
| 12 | ವೈಎಸ್‌ಆರ್ ಕಾಂಗ್ರೆಸ್ ಪಕ್ಷ (YSRCP) | 3 |
| 13 | ಇಂಡಿಯನ್ ನ್ಯಾಷನಲ್ ಲೋಕದಳ (INLD) | 3 |
| 14 | ಕಮ್ಯುನಿಸ್ಟ್ ಪಕ್ಷ (CPM) | 2 |
| 15 | ನ್ಯಾಷನಲ್ ಕಾನ್ಫರೆನ್ಸ್ (NC) | 2 |
| 16 | ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) | 2 |
| 17 | ಎಐಎಡಿಎಂಕೆ (AIADMK) | 1 |
| 18 | ತೆಲಂಗಾಣ ರಾಷ್ಟ್ರ ಸಮಿತಿ / ಬಿಆರ್‌ಎಸ್ (TRS) | 1 |
| 19 | ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) | 1 |
| 20 | ಸ್ವತಂತ್ರ ನಾಯಕರು / ಇತರರು | 2 |
ಸಾರಾಂಶ ಹಾಗೂ ವಾಸ್ತವ
ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಮ್ಮೆ ಒಬ್ಬೊಬ್ಬ ನಾಯಕರ ಮೇಲೆ ಇಷ್ಟು ಬಾರಿ ದಾಳಿ ನಡೆದಿದೆ ಎಂಬಂತೆ ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದರೆ, ಈ ಮೇಲಿನ ಅಂಕಿಅಂಶಗಳು ಆಯಾ ಪಕ್ಷಗಳ ಎಷ್ಟು ನಾಯಕರು ಇಡಿ ತನಿಖಾ ವ್ಯಾಪ್ತಿಗೆ ಬಂದಿದ್ದಾರೆ ಎಂಬುದನ್ನು ಮಾತ್ರ ಸ್ಪಷ್ಟವಾಗಿ ಸೂಚಿಸುತ್ತವೆ.

ಇವೆಲ್ಲವುಗಳ ನಡುವೆ ಬಿಜೆಪಿ ನಾಯಕರು ಸತ್ಯಸಂಧರೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ ನಾಯಕರು ಯಾವೊಂದು ಹಗರಣದಲ್ಲೂ ಸಿಕ್ಕಿಲ್ಲವೇಕೆ? ಎಂಬ ಪ್ರಶ್ನೆಗೆ ಮುಂಬರುವ ದಿನಗಳಲ್ಲಿ ಖಚಿತ ಉತ್ತರ ಸಿಗಬಹುದು.




