ಪೇಜಾವರ ಮಠ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಶ್ರೀ ಶ್ರೀ ದೇವವರ್ಧನ ತೀರ್ಥ ಶ್ರೀಪಾದರು ಭವ್ಯ ಶೋಭಾಯಾತ್ರೆಯಲ್ಲಿ ಭಾಗಿ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಹಾಜರು
ಬೆಂಗಳೂರು: ಬಸವನಗುಡಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿರುವ ಪರಮಪೂಜ್ಯ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಶ್ರೀ ಶಿರೂರು ಮಠಾಧೀಶರಾದ ಶ್ರೀಶ್ರೀಶ್ರೀ ವೇದವರ್ಧನತೀರ್ಥ ಶ್ರೀಪಾದರ ಸ್ವಾಗತ ಸಮಾರಂಭ ಮತ್ತು ಭವ್ಯ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
ಶಾಸಕ ರವಿಸುಬ್ರಮಣ್ಯ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಉಪಾಧ್ಯ, ಉತ್ತರಾಧಿ ಮಠದ ನಿರ್ದೇಶಕ ಸತ್ಯಧ್ಯಾನಚಾರ್ಯ ಕಟ್ಟಿ, ಕೇಶವ ಬಾಯರಿ, ಡಾ.ಉದಯಕುಮಾರ್ ಸರಳ್ತಾಯ, ಅಖಿಲ ಭಾರತ ಮಾಧ್ವ ಮಂಡಲ ಅಧ್ಯಕ್ಷ ಗೌತಮ್ ಹೆಚ್.ವಿ. ಮತ್ತು ಹರಿದಾಸ ಭಟ್, ವೀರನಾರಾಯಣ ಪಾಂಡುರಂಗಿ, ಪಾರುಪತ್ಯೆಗಾರ ಶ್ರೀಶಾಭಟ್ ಕಡೆಕಾರ್, ವಿದ್ಯಾಪೀಠ ವ್ಯವಸ್ಥಾಪಕ ಶಶಾಂಕ್ ಅಚಾರ್ಯ, ಕಾಂಗ್ರೆಸ್ ಪಕ್ಷದ ಮುಖಂಡ ಬಾಲಾಜಿ ಉಪಸ್ಥಿತರಿದ್ದರು.
ಭವ್ಯ ಶೋಭಯಾತ್ರೆಯು ನವ ಮಂತ್ರಾಲಯ ರಾಯರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭವ್ಯ ಮೆರವಣಿಗೆಯಲ್ಲಿ ವಿದ್ಯಾಪೀಠ ರಸ್ತೆಯ ಮೂಲಕ ಪೂರ್ಣಪ್ರಜ್ಞಾ ವಿದ್ಯಾಪೀಠದವರೆಗೆ ಸಾಗಿತು.
ನೂರಾರು ಆಗಮ ಪಂಡಿತರು, ಮಹಿಳಾ ಮಂಡಳಿಯವರಾದ ತ್ರಿಪುರ ಸುಂದರಿ, ಗಿರಿವಾಸವಿ ತಂಡದವರಿಂದ ಭಕ್ತಿಗೀತೆ ಹಾಡಿದರು, ಯಕ್ಷಗಾನ ವೇಷಧಾರಿಗಳು, ಪೂಜಾಕುಣಿತ, ಡೊಳ್ಳು, ವೀರಗಾಸೆ, ತಮಟೆವಾದ್ಯ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.














