ದಿಟ್ಟ ನಾಯಕತ್ವ – ಬಲಿಷ್ಠ ಕಾರ್ಯಕರ್ತರ ಸಮಾವೇಶ: ಎಸ್‌ಡಿಪಿಐ ಹರಿಹರದಲ್ಲಿ ಯಶಸ್ವಿ ಕಾರ್ಯಕ್ರಮ
ಹರಿಹರ: ಹರಿಹರ ನಗರದ ಅಂಜುಮನ್ ಶಾದಿ ಹಾಲ್ ನಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ “ದಿಟ್ಟ ನಾಯಕತ್ವ – ಬಲಿಷ್ಠ ಕಾರ್ಯಕರ್ತ” ಎಂಬ ಘೋಷವಾಕ್ಯದಡಿಯಲ್ಲಿ ಕಾರ್ಯಕರ್ತರ ಮತ್ತು ಸದಸ್ಯರ ಸಮಾವೇಶವು ಭಾರಿ ಉತ್ಸಾಹದೊಂದಿಗೆ ನಡೆಯಿತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಈ ವಿಶೇಷ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯ ಫಯಾಝ್ ಅಹಮದ್ ರವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಕ್ಷದ ಸಂಘಟನೆ, ಸಮಾಜ ಸೇವೆ, ಮತ್ತು ರಾಜಕೀಯ ಸಜೀವತೆಯ ಕುರಿತು ಚರ್ಚಿಸಲಾಯಿತು. ನಿಜವಾದ ನಾಯಕತ್ವವೆಂದರೆ ಜನರ ಸಮಸ್ಯೆಗಳಿಗೆ ಮಿಡಿಯುವ ಮತ್ತು ಹೋರಾಟದ ಮನೋಭಾವನೆ ಅಗತ್ಯ ಎಂದು ಫಯಾಜ್ ಅಹಮದ್ ಹೇಳಿದರು.
ನಮ್ಮ ಕಾರ್ಯಕರ್ತರು ಸಮಾಜದಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಪಕ್ಷದ ಮೌಲ್ಯಗಳನ್ನು ಸಾರಬೇಕು. ಎಸ್‌ಡಿಪಿಐ ಪಕ್ಷವು ಸಂವಿಧಾನಾತ್ಮಕ ಹಕ್ಕುಗಳ ಮತ್ತು ಸಮಾಜದ ನ್ಯಾಯವೊಂದಿಗೂ ನಿಂತಿರುವ ಪಕ್ಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಜಿಲ್ಲಾಮಟ್ಟದ ನಾಯಕರೂ ಸಹ ಭಾಗವಹಿಸಿದ್ದರು. ಸಭೆಯಲ್ಲಿ ಅಂತ್ಯದಲ್ಲಿ ಬಲಿಷ್ಠ ಸಂಘಟನೆ ನಿರ್ಮಾಣಕ್ಕೆ ಶ್ರದ್ಧೆ ಮತ್ತು ಸಂಕಲ್ಪ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ಎಸ್ ಡಿ ಪಿ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಆರ್ ತಾಹೀರ್, ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜುನೈದ್, ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಮಿ ಮುಲ್ಲಾ ಹಾಗೂ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು, ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರು ಹಾಜರಿದ್ದರು.




