ಹೋರಾಟದ ಮನೋಭಾವನೆಯೇ ನಿಜವಾದ ನಾಯಕತ್ವ: ಅಪ್ಸರ್ ಕೊಡ್ಲಿಪೇಟೆ

11 months ago

ದಿಟ್ಟ ನಾಯಕತ್ವ – ಬಲಿಷ್ಠ ಕಾರ್ಯಕರ್ತ ಸಮಾವೇಶ

ಎಸ್‌ಡಿಪಿಐ ರಾಯಚೂರಿನಲ್ಲಿ ಕಾರ್ಯಕ್ರಮ

ರಾಯಚೂರು: ರಾಯಚೂರಿನಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ “ದಿಟ್ಟ ನಾಯಕತ್ವ – ಬಲಿಷ್ಠ ಕಾರ್ಯಕರ್ತ” ಎಂಬ ಘೋಷವಾಕ್ಯದಡಿಯಲ್ಲಿ ಕಾರ್ಯಕರ್ತರ ಮತ್ತು ಸದಸ್ಯರ ಸಮಾವೇಶ ನಡೆಯಿತು. ಈ ವಿಶೇಷ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಕ್ಷದ ಸಂಘಟನೆ, ಸಮಾಜ ಸೇವೆ, ಮತ್ತು ರಾಜಕೀಯ ಸಜೀವತೆಯ ಕುರಿತು ಚರ್ಚಿಸಲಾಯಿತು. ನಿಜವಾದ ನಾಯಕತ್ವವೆಂದರೆ ಜನರ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಹೋರಾಟದ ಮನೋಭಾವನೆ ಎಂಬ ಸಂದೇಶವನ್ನು ಅಪ್ಸರ್ ಕೊಡ್ಲಿಪೇಟೆ ಹಂಚಿಕೊಂಡರು.

ನಮ್ಮ ಕಾರ್ಯಕರ್ತರು ಸಮಾಜದಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಪಕ್ಷದ ಮೌಲ್ಯಗಳನ್ನು ಸಾರಬೇಕು. ಎಸ್‌ಡಿಪಿಐ ಪಕ್ಷವು ಸಂವಿಧಾನಾತ್ಮಕ ಹಕ್ಕುಗಳ ಮತ್ತು ಸಮಾಜದ ನ್ಯಾಯವೊಂದಿಗೂ ನಿಂತಿರುವ ಪಕ್ಷವಾಗಿದೆ ಎಂಬುದನ್ನು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಜಿಲ್ಲಾಮಟ್ಟದ ನಾಯಕರೂ ಸಹ ಭಾಗವಹಿಸಿದ್ದರು. ಸಭೆಯಲ್ಲಿ ಅಂತ್ಯದಲ್ಲಿ ಬಲಿಷ್ಠ ಸಂಘಟನೆ ನಿರ್ಮಾಣಕ್ಕೆ ಶ್ರದ್ಧೆ ಮತ್ತು ಸಂಕಲ್ಪ ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಕ್ಬರ್ ನಾಗುಂಡಿ, ಜಿಲ್ಲಾಧ್ಯಕ್ಷ ಖಾದರ್ ಪಾಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಂಶೀರ್ ಅಲಿ ಮತ್ತು ಮೊಹಮ್ಮದ್ ಗೌಸ್, ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಮತೀನ್ ಅನ್ಸಾರಿ, ತೌಸೀಫ್ ಅಹಮದ್ ಜಿಲ್ಲಾ ಕಾರ್ಯದರ್ಶಿ ಶೇಖ್ ದಾವೂದ್, ವುಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾ ಅದ್ಯಕ್ಷೆ ತಬ್ಬಸ್ಸುಮ್, ಪ್ರಧಾನ ಕಾರ್ಯದರ್ಶಿ ಸಾದಿಯ ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸಾದಿಕ್ ಬೇಗ್, ಉಪಾಧ್ಯಕ್ಷ ಖಾಜಾ ಮೊಹಿದ್ದೀನ್,  ಕಾರ್ಯದರ್ಶಿ ಮೊಹಮದ್ ರಫಿಉದ್ದೀನ್ ಹಾಗೂ ಜಿಲ್ಲಾ ಮತ್ತು ತಾಲೂಕು ಸಮಿತಿ ಸದಸ್ಯರು, ವಿಮ್ ಸಹೋದರಿಯರು ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರು ಹಾಜರಿದ್ದರು.

Leave a Reply