ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು – ಸವಾಲುಗಳು ವಿಷಯದ ಕುರಿತಾದ ದುಂಡುಮೇಜಿನ ಸಭೆ
ಕರ್ನಾಟಕ ರಕ್ಷಣಾ ವೇದಿಕೆಯು ಇದೇ 14-6-2026ರಂದು ಭಾನುವಾರ ಬೆಳಿಗ್ಗೆ 10-30ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಹೋಟೆಲ್ ಲಲಿತ್ ಅಶೋಕದಲ್ಲಿ “ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು – ಸವಾಲುಗಳು“ ಎಂಬ ವಿಷಯದ ಕುರಿತಾದ ದುಂಡುಮೇಜಿನ ಸಭೆಯನ್ನು ಏರ್ಪಡಿಸಿದೆ.
- ನೂರರ ಕಸಾಪ ತೊಡಬೇಕಾಗಿರುವ ರೂಪ
- ಕನ್ನಡ ಸಾಹಿತ್ಯ ಪರಿಷತ್ತಿನ ಭವಿಷ್ಯದ ಕುರಿತು ಚಿಂತನೆ
- 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನೋಟ: ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ?
- ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆಗೆ ಬಹಿಷ್ಕಾರ: ಆರ್.ಅಶೋಕ
- ಮಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಿ: ಸಿಪಿಐ(ಎಂ)
ಕರ್ನಾಟಕದ ಅನೇಕ ಭಾಷಾತಜ್ಞರು, ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳು, ಹೋರಾಟಗಾರರು, ನ್ಯಾಯವಾದಿಗಳು ಸೇರಿದಂತೆ ಹಲವು ವಲಯಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಡಾ. ಕೆ ವಿ ನಾರಾಯಣ, ಡಾ. ಹಿ ಚಿ ಬೋರಲಿಂಗಯ್ಯ, ಪ್ರೊ. ಪುರುಷೋತ್ತಮ ಬಿಳಿಮಲೆ, ಡಾ. ರಾಜಪ್ಪ ದಳವಾಯಿ, ಡಾ. ಮಲ್ಲಿಕಾ ಗಂಟಿ, ಪ್ರೊ. ರವಿ ಕೋರಿಶೆಟ್ಟರ್, ಡಾ. ಬಂಜಗೆರೆ ಜಯಪ್ರಕಾಶ್, ಪ್ರೊ. ಮೇಟಿ ಮಲ್ಲಿಕಾರ್ಜುನ, ಡಾ. ಕೆ ವೈ ನಾರಾಯಣ ಸ್ವಾಮಿ, ಕುಂ. ವೀರಭದ್ರಪ್ಪ, ಡಾ. ವಿ.ಪಿ. ನಿರಂಜನಾರಾಧ್ಯ, ಬಿ. ಶ್ರೀಪಾದ್ ಭಟ್ , ಡಾ. ಆರ್.ಚಲಪತಿ, ಸಿ.ಜಿ.ಮಂಜುಳಾ, ಎಚ್.ಎಲ್.ಪುಷ್ಪ, ಡಾ. ಎಂ. ಎಸ್.. ಆಶಾ ದೇವಿ, ಡಾ. ಕೆ. ಷರೀಫಾ , ಡಾ. ಭಾರತಿ ದೇವಿ ಪಿ., ಪ್ರೊ. ಎಚ್.ಎಸ್. ಶ್ರೀಮತಿ, ಡಾ. ಅನಸೂಯ ಕಾಂಬಳೆ, ಪ್ರೊ. ಶಿವಗಂಗಾ ರುಮ್ಮಾ, ಡಾ.ಸಿ.ಎಸ್.ದ್ವಾರಕಾನಾಥ್, ಡಾ.ರಂಗನಾಥ್ ಕಂಟನಕುಂಟೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರವೇ




