ಸೋಯಾಅವರೆಯಲ್ಲಿ ಕಾಂಡ ಕೊರೆಯುವ ನೊಣ ನಿಯಂತ್ರಣಕ್ಕಾಗಿ ರೈತರಿಗೆ ಸಲಹೆಗಳು

2 years ago

ಧಾರವಾಡ: ಸೋಯಾಅವರೆಯಲ್ಲಿ ಕಾಂಡ ಕೊರೆಯುವ ನೊಣ ಜಗತ್ತಿನಾದ್ಯಂತ ಸೋಯಾಅವರೆಗೆ ತೊಂದರೆ ಕೊಡುವ ಕೀಟಗಳಲ್ಲಿ ಅಗ್ರಗಣ್ಯವಾದದ್ದು. ಮುಂಗಾರು ಹಂಗಾಮಿನಲ್ಲಿ ಶೇ. 70 ರಿಂದ 90 ರ ವರೆಗೆ ಈ ಹುಳುವಿನಿಂದ ಬೆಳೆಯು ಹಾನಿಗೊಳಗಾಗುತ್ತದೆ. ಕರಿ ಹೆಣ್ಣು ನೊಣವು ಎಲೆಗಳ ಮೇಲೆ ಮೊಟ್ಟೆಯನ್ನಿಡುತ್ತದೆ ಹಾಗೂ ಮೊಟ್ಟೆ ಒಡೆದ ನಂತರ ಹೊರಬಂದ ಮರಿಗಳು ಎಲೆ ಹಾಗೂ ಎಲೆ ತುಂಬುಗಳಲ್ಲಿ ಸುರಂಗ ಮಾಡಿ ಕಾಂಡವನ್ನು ಪ್ರವೇಶಿಸುತ್ತವೆ. ಇದರಿಂದ ಬೆಳೆಗೆ ಆಹಾರ ಸಾಗಾಣಿಕೆ ಕುಂಟಿತಗೊಂಡು ಎಲೆಗಳು ಒಣಗಿ ಇಳುವರಿಯಲ್ಲಿ ಗಣನೀಯವಾಗಿ ಹಾನಿ ಉಂಟು ಮಾಡುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಬಾಧೆಗೊಳಗಾದ ಸಸಿಗಳ ಭಾಗಗಳನ್ನು ಮತ್ತು ಒಣಗಿದ ಸಸಿಗಳನ್ನು ಕಿತ್ತು ನಾಶಪಡಿಸಬೇಕು.

ಬಿತ್ತನೇಯ ಕಾಲಕ್ಕೆ ಪ್ರತಿ ಕೆಜಿ ಬೀಜಕ್ಕೆ 10 ಮಿ.ಲಿ. ಥೈಯಾಮಿಥಾಕ್ಸಾಮ್ 30 ಎಫ್ ಎಸ್ ಅಥವಾ ಇಮಿಡಾಕ್ಲೊಪ್ರಿಡ್ 70 ಡಬ್ಲೂ ಎಸ್. ಔಷಧಿಯಿಂದ ಬೀಜೋಪಚಾರ ಮಾಡಬೇಕು. ಬಿತ್ತಿದ 15 ದಿನಗಳಲ್ಲಿ ಕೀಟದ ಬಾಧೆ ಕಾಣಿಸಿದಾಗ 0.25 ಮಿ.ಲಿ. ಸಂಯುಕ್ತ ಕೀಟನಾಶಕವಾದ (ಥೈಯಾಮಿಥಾಕ್ಸಾಮ್ 12.6% + ಲ್ಯಾಂಬ್ಡಾಸೈಯಾಲೋಥ್ರಿನ್ 9.5% ಝಡ್ ಸಿ) ಅಥವಾ 0.50 ಮಿ.ಲಿ ಇಮಿಡಾಕ್ಲೊಪ್ರಿಡ್ 17.8 ಎಸ್ ಎಲ್ ಅಥವಾ 0.3 ಗ್ರಾಂ. ಥೈಯಾಮಿಥಾಕ್ಸಾಮ್ 25 ಡಬ್ಲೂ ಜಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು.

Leave a Reply