ರಕ್ಷಾ ಫೌಂಡೇಷನ್ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಣೆ

2 years ago

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣಾ ಕಾರ್ಯಕ್ರಮ

ಬೆಂಗಳೂರು: ಜಯನಗರದ ಚಂದ್ರಗುಪ್ರ ಮೌರ್ಯ(ಶಾಲಿನಿ)ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ (ರಿ)ವತಿಯಿಂದ 12ನೇ ವರ್ಷದ ಕರ್ನಾಟಕ ವಿವಿಧ ಶಾಲೆಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 2 ಲಕ್ಷ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಮತ್ತು ಎಸ್.ಎಸ್.ಎಲ್.ಸಿ./ಪಿಯಿ ಶೇಕಡ 90%ರಷ್ಟು ಅಂಕಗಳಿಸಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಗದು ಬಹುಮಾನ, ಸನ್ಮಾನ ಮತ್ತು ಅನಾಥ ಆಶ್ರಮದ 2ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ಸಾರ್ವಜನಿಕರಿಗೆ ಉಚಿತ ಅಂಬುಲೆನ್ಸ್ ಸೇವೆ ಲೋಕರ್ಪಣೆ ಸಮಾರಂಭ ನಡೆಯಿತು.

ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಾ ಮಹಾಸ್ವಾಮೀಜಿ, ಲೋಕಸಭಾ ಸದಸ್ಯ ತೇಜಸ್ವಿಸೂರ್ಯ, ಚಲನಚಿತ್ರ ನಟ ಸುದೀಪ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಶಾಸಕರಾದ ಉದಯ್ ಗರುಡಾಚಾರ್, ಸತೀಶ್ ರೆಡ್ಡಿ, ಮಾಜಿ ಮೇಯರ್ ಎಸ್.ಕೆ.ನಟರಾಜ್, ಬಿಬಿಎಂಪಿ ಮಾಜಿ ಸದಸ್ಯೆ ನಾಗರತ್ನ ರಾಮಮೂರ್ತಿಚಾಲನೆ ನೀಡಿದರು.

ಸಿದ್ದಗಂಗಾ ಮಠದ ಸಿದ್ದಲಿಂಗಾ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಸೇವಾ ಸಂಘಟನೆಗಳು ಸಹ ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ರಕ್ಷಾ ಫೌಂಡೇಷನ್ ಮಕ್ಕಳ ಶಿಕ್ಷಣದ ಉನ್ನತಿಗಾಗಿ ನೋಟ್ ಪುಸ್ತಕ ವಿತರಿಸುತ್ತಿದ್ದಾರೆ. ಹತ್ತಾರು ಜನರ ಸೇವೆ ಮಾಡುವುದು ದೇವರ ಕೆಲಸ. ಶಿಕ್ಷಣದಿಂದ ಮಾತ್ರ ಶಕ್ತಿ ಬರುತ್ತದೆ. ಜ್ಞಾನಕ್ಕೆ ಸಮಾನಾದ ಯಾವುದು ಇಲ್ಲ ಎಂದರು.

ಸಮಾಜದಲ್ಲಿ ಜ್ಞಾನವಂತರೆ ನೀಜವಾದ ಶ್ರೀಮಂತರು. ಸಮಾಜದಲ್ಲಿ ಅವರಿಗೆ ಗೌರವ ಸಿಗುತ್ತದೆ. ಮಕ್ಕಳಿಗೆ ಆಸರೆಯಾಗಿ ರಕ್ಷಾ ಫೌಂಡೇಷನ್ ಶ್ರಮಿಸುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳು ಪ್ರತಿಭಾವಂತರು ಅವರಿಗೆ ಪ್ರೋತ್ಸಹ ಸಹಕಾರ ನೀಡಬೇಕು. ಪರಿಶ್ರಮ, ಪ್ರಯುತ್ನವಿರುವ ಎಲ್ಲ ಮಕ್ಕಳು ಪ್ರತಿಭಾವಂತರು. ನಿರಂತರ ಪ್ರಯುತ್ನದಿಂದ ಸಾಧಕರಾಗಿ ಬೆಳಯಬಹುದು ಎಂದರು.

ಸುದೀಪ್ ಮಾತನಾಡಿ, ಮಕ್ಕಳು ದೇವರ ಸಮಾನ, ಅವರ ಜೊತೆ ಭಾಗವಹಿಸುವುದು ಸಂತೋಷಕರವಾದ ವಿಷಯ. ಮಕ್ಕಳ, ಮಹಿಳೆಯರ ಪ್ರೀತಿ ಗಳಿಸಬೇಕು. ಅನಾಥರು ಯಾರು ಇಲ್ಲ, ಎಲ್ಲರನ್ನು ದೇವರು ಕಾಪಾಡುತ್ತಾನೆ. ಮಹಿಳೆಯರು ಪೊಲೀಸ್ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಸಂಸದ ತೇಜಸ್ವಿಸೂರ್ಯ ಮಾತನಾಡಿ, ಶಿಕ್ಷಣದ ಮಹತ್ವ ಎಲ್ಲರಿಗೂ ತಿಳಿದಿದೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ರಕ್ಷಾ ಫೌಂಡೇಷನ್ ವತಿಯಿಂದ ನೋಟ್ ಪುಸ್ತಕ, ಪ್ರತಿಭಾ ಪುರಸ್ಕಾರ ಮತ್ತು ನಗದು ಬಹುಮಾನ ನೀಡಿ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ. ಅನ್ನ, ಅಕ್ಷರ, ಆಶ್ರಯ ನೀಡಿದ ಸಿದ್ದಗಂಗಾ ಮಠದ ಆದರ್ಶ, ಸಿದ್ದಾಂತಗಳನ್ನು ಎಲ್ಲರು ಪಾಲಿಸೋಣ ಎಂದರು.

ಸಿ.ಕೆ.ರಾಮಮೂರ್ತಿ ಮಾತನಾಡಿ ರಕ್ಷಾ ಫೌಂಡೇಷನ್ ವತಿಯಿಂದ 12ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆಯನ್ನು 50 ಕ್ಕೂ ಹೆಚ್ಚು ಶಾಲೆಗಳ ಮಕ್ಕಳಿಗೆ ವಿತರಿಸಲಾಗುತ್ತಿದೆ. 12 ವರ್ಷಗಳ ಹಿಂದೆ ನೂರು ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಆರಂಭಿಸಿ, ಇಂದು 2 ಲಕ್ಷ ನೋಟ್ ಪುಸ್ತಕ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ಶ್ರೀಮಂತ ಕುಟುಂಬದ ಮಕ್ಕಳಿಗೆ ಸಿಗುವ ಶಿಕ್ಷಣ ಬಡ ಮಕ್ಕಳಿಗೂ ಸಿಗಬೇಕು, ಅವರು ಸಹ ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿ ತರಬೇಕು ಎಂಬುದು ರಕ್ಷಾ ಫೌಂಡೇಷನ್ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಬಿಬಿಎಂಪಿ ಮಾಜಿ ಸದಸ್ಯರಾದ ಸೋಮಶೇಖರ್, ಲಕ್ಷ್ಮಿ ನಟರಾಜ್, ಮಾಲತಿ ಸೋಮಶೇಖರ್, ದೀಪಿಕಾ ಎಲ್.ಮಂಜುನಾಥರೆಡ್ಡಿ ಮೊದಲಾದವರು ಹಾಜರಿದ್ದರು.

Leave a Reply