ಕಂಟೆಂಟ್ ಕ್ರಿಯೇಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಮೆಟಾ ಹೊಸ ಆದೇಶ!

16 hours ago

ಫೇಸ್‌ಬುಕ್‌ನಿಂದ ಅತಿ ದೊಡ್ಡ ಶಾಕ್!

ಇನ್ಮುಂದೆ ನಿಮ್ಮ ಪೋಸ್ಟ್‌ಗಳಿಗೆ ‘ರೀಚ್’ ಸಿಗಲ್ವಾ? ಫೇಸ್‌ಬುಕ್ ಪೇಜ್ ನಡೆಸೋ ಪ್ರತಿಯೊಬ್ಬರೂ ತಕ್ಷಣ ಓದಲೇಬೇಕಾದ ಬ್ರೇಕಿಂಗ್ ಸುದ್ದಿ ಇಲ್ಲಿದೆ!
ಬೆಂಗಳೂರು: ನೀವು ಫೇಸ್‌ಬುಕ್‌ನಲ್ಲಿ ಪೇಜ್ ಇಟ್ಟುಕೊಂಡಿದ್ದೀರಾ? ದಿನವೂ ವಿಡಿಯೋ, ರೀಲ್ಸ್, ಫೋಟೋ ಹಾಕಿ ಕೋಟ್ಯಂತರ ‘ರೀಚ್’ (Reach) ಲೆಕ್ಕ ಹಾಕಿ ಖುಷಿಪಡುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಭಾರೀ ಶಾಕಿಂಗ್ ಸುದ್ದಿ!

ಕಂಟೆಂಟ್ ಕ್ರಿಯೇಟರ್‌ಗಳು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮತ್ತು ಡಿಜಿಟಲ್ ಮೀಡಿಯಾಗಳಿಗೆ ಮೆಟಾ (Meta) ಸಂಸ್ಥೆ ಬಿಗ್ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವರ್ಷಗಳಿಂದ ಪೋಸ್ಟ್‌ಗಳ ಜನಪ್ರಿಯತೆ ಅಳೆಯಲು ಪ್ರಮುಖ ಆಧಾರವಾಗಿದ್ದ ‘ರೀಚ್’ (Facebook Reach) ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಬಂದ್ ಮಾಡಲು ಫೇಸ್‌ಬುಕ್ ಅಧಿಕೃತ ತೀರ್ಮಾನ ಕೈಗೊಂಡಿದೆ!

ಅಕ್ಟೋಬರ್ 31 ರಿಂದ ‘ರೀಚ್’ ಇತಿಹಾಸದ ಪುಟಕ್ಕೆ!: ಮೆಟಾ ಬಿಸಿನೆಸ್ ಸೂಟ್‌ನಲ್ಲಿ (Meta Business Suite) ಇದೀಗ ಅಧಿಕೃತ ಎಚ್ಚರಿಕೆಯ ಸಂದೇಶವೊಂದು ಪ್ರಕಟವಾಗಿದ್ದು, “Facebook reach will no longer be available starting on 31 October 2026” ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ, ಇದೇ ಅಕ್ಟೋಬರ್ 31 ರ ನಂತರ ನಿಮ್ಮ ಪೋಸ್ಟ್‌ಗಳು ಎಷ್ಟು ಜನರಿಗೆ ಮುಟ್ಟಿವೆ ಎಂಬುದನ್ನು ಅಳೆಯುತ್ತಿದ್ದ ‘ರೀಚ್’ ಮೆಟ್ರಿಕ್ ಸಂಪೂರ್ಣವಾಗಿ ಮಾಯವಾಗಲಿದೆ.

ಹಾಗಾದ್ರೆ ಇನ್ಮುಂದೆ ಪೋಸ್ಟ್ ಕ್ಲಿಕ್ ಆಗಿದ್ಯಾ ಇಲ್ವಾ ಅಂತ ತಿಳಿಯೋದು ಹೇಗೆ?: ಮೆಟಾ ‘ರೀಚ್’ ವ್ಯವಸ್ಥೆಯನ್ನು ತೆಗೆದುಹಾಕಿದ ಬೆನ್ನಲ್ಲೇ ಹೊಸ ಮಾನದಂಡವನ್ನು ಜಾರಿಗೆ ತಂದಿದೆ.


• ಬರಲಿದೆ ಹೊಸ ‘Viewers’ ಮೆಟ್ರಿಕ್: ಇನ್ನು ಮುಂದೆ ನಿಮ್ಮ ಯಾವುದೇ ವಿಡಿಯೋ, ರೀಲ್ಸ್ ಅಥವಾ ಕಂಟೆಂಟ್ ಎಷ್ಟು ಖಾತೆಗಳಿಗೆ (Accounts) ತಲುಪಿದೆ ಮತ್ತು ಎಷ್ಟು ಮಂದಿ ಅದನ್ನು ನೋಡಿದ್ದಾರೆ ಎಂಬುದನ್ನು ತಿಳಿಯಲು ‘Viewers’ (ವೀಕ್ಷಕರು) ಮಾನದಂಡವೇ ಪ್ರಮುಖವಾಗಲಿದೆ.
• ಕೇವಲ ಪರದೆಯ ಮೇಲೆ ಪೋಸ್ಟ್ ಸ್ಕ್ರಾಲ್ ಆಗಿ ಹೋದರೆ ಸಾಲದು; ನಿಜವಾಗಿಯೂ ಕಂಟೆಂಟ್ ನೋಡಿದ ಖಾತೆಗಳ ಲೆಕ್ಕವನ್ನು ಮಾತ್ರ ಈ ‘Viewers’ ತೋರಿಸಲಿದೆ.

ಕ್ರಿಯೇಟರ್‌ಗಳು ಮತ್ತು ಪೇಜ್ ಅಡ್ಮಿನ್‌ಗಳು ತಕ್ಷಣ ಮಾಡಬೇಕಾದ ಕೆಲಸವೇನು?
1. ಹಳೆಯ ಡೇಟಾ ಡೌನ್‌ಲೋಡ್ ಮಾಡಿಕೊಳ್ಳಿ: ಇದುವರೆಗಿನ ನಿಮ್ಮ ಪೇಜ್‌ನ ರೀಚ್ ಆಧಾರಿತ ವರದಿಗಳು ಬೇಕಿದ್ದರೆ, ಮೆಟಾ ಬಿಸಿನೆಸ್ ಸೂಟ್‌ನ ಮೇಲ್ಭಾಗದಲ್ಲಿರುವ “Export Data” ಬಟನ್ ಕ್ಲಿಕ್ ಮಾಡಿ ತಕ್ಷಣ ಸೇವ್ ಮಾಡಿಕೊಳ್ಳಿ.
2. ವ್ಯೂವರ್ಸ್ ಕಡೆ ಗಮನ ಕೊಡಿ: ಕೇವಲ ಕ್ಲಿಕ್‌ಬೈಟ್ ಅಥವಾ ಸ್ಕ್ರಾಲಿಂಗ್ ವೀಕ್ಷಣೆಗಳ ಬದಲಾಗಿ ಜನರು ಪೂರ್ಣವಾಗಿ ವೀಕ್ಷಿಸುವ ಉತ್ತಮ ಗುಣಮಟ್ಟದ ಕಂಟೆಂಟ್ ನೀಡುವುದಕ್ಕೆ ಒತ್ತು ನೀಡಿ.

ಫೇಸ್‌ಬುಕ್‌ನ ಈ ಹಠಾತ್ ನಡೆ ಲಕ್ಷಾಂತರ ಕ್ರಿಯೇಟರ್‌ಗಳಲ್ಲಿ ಆತಂಕ ಮೂಡಿಸಿದ್ದು, ಡಿಜಿಟಲ್ ಲೋಕದಲ್ಲಿ ಈಗ ಈ ಹೊಸ ಅಪ್‌ಡೇಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.

Leave a Reply