ಅದೆಷ್ಟು ಅಂತರ

2 years ago

ಪುಟ್ಟ ಗುಡಿಸಿಲಿನಲ್ಲಿ ವಾಸ ಮಾಡುವ ಮಂದಿಯ ನಡುವೆ, ದೊಡ್ಡದೊಡ್ಡ ಮನೆಗಳಲ್ಲಿ ಇರುವವರು, ಇವರಿಗೆ ಮೀರಿಸಿದಂತೆ ಬಂಗಲೆಗಳಲ್ಲಿ ಬದುಕುತ್ತಿರುವವರು, ನಾವೇನು ಕಡಿಮೆ ಎಂಬ ರೀತಿಯಲ್ಲಿ ವಿಸ್ತಾರವಾದ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟು ಕಾಣುವ ದೊಡ್ಡ ದೊಡ್ಡ ಅರಮನೆಯ ಮೀರಿಸುವ ಮನೆಗಳಲ್ಲಿ ಕೆಲವರ ವಾಸ ವಾಸ, ಗುಡಿಸಿಲಿಂದ ಹಿಡಿದು ಅರಮನೆಯಂತ ಅರಮನೆಯಲ್ಲಿ ವಾಸಿಸುವ ಎಲ್ಲರೂ ಮಲಗುವುದು ಒಂದಷ್ಟು ಜಾಗದಲ್ಲಿ, ದುಡಿದು ಬದುಕುವವರು ಎಲ್ಲಿದ್ದರೂ ನಿದ್ರೆಗೆ ಜಾರುತ್ತಾರೆ ,ಇಲ್ಲದವರು ಚಿಂತೆಯಲ್ಲಿಯೇ ರಾತ್ರಿಯೆಲ್ಲ ಕಳೆಯುತ್ತಾರೆ.

ದೇವಾಲಯದಲ್ಲಿಯೂ, ಮನೆಯ ಮುಂದಿನ ಬಯಲಿನಲ್ಲಿಯೋ, ಅರಿಶಿಣ ಕೊಂಬು ಸತಿಗೆ ಕಟ್ಟಿ  ಮದುವೆಯಾಗುವವರಿಂದ ಹಿಡಿದು, ಒಂದಷ್ಟು ಬಂಗಾರದ ಒಡವೆಗಳ ಜೊತೆಗೆ ಕಲ್ಯಾಣ ಮಂಟಪದಲ್ಲಿ ಮದುವೆಯಾಗುವವರ, ಜೊತೆಗೆ ಭೂಮಿಗೆ ಸ್ವರ್ಗವನ್ನೇ ಧರೆಗೆ ಇಳಿಸಿದಂತೆ ವಿದ್ಯುತ್ , ಹೂವಿನ ಅಲಂಕಾರಗಳ ನಡುವೆ ಅದ್ದೂರಿಯ ಮದುವೆಗಳೂ ನಡೆಯುತ್ತಿದೆ, ಇಲ್ಲಿ ಮದುವೆಗಳು ಹೇಗಾಯಿತು ಎನ್ನುವುದಕ್ಕಿಂತ ಸಂಸಾರದಲ್ಲಿನ ಸುಖ ಸಂತೋಷವಷ್ಟೇ ಇಲ್ಲಿ ಪ್ರಮುಖವಾಗುತ್ತದೆ.

ದೇವದತ್ತವಾಗಿ ಬಂದ ಸೌಂದರ್ಯದ ನಡುವೆ ಕಾಣಿಸಿಕೊಳ್ಳುವ ಜನರ ಜೊತೆಯಲ್ಲಿಯೇ ಅಲಂಕಾರಿಕ ವಸ್ತುಗಳು ಕೃತಕ ಸೌಂದರ್ಯದ ಸಾಧನಗಳೊಂದಿಗೆ ಸೌಂದರ್ಯವನ್ನ ಪ್ರಕಟಿಸುವ ಮಂದಿ , ಸಹಜ ಹಾಗೂ ಕೃತಕ ಯಾವುದೇ ಎಂಬುದು ಮೊದಲ ನೋಟದಲ್ಲಿ ಅರಿವಾಗುತ್ತದೆ.

ಪುಟ್ಟ ಮನೆಯಲ್ಲಿ ಹುಟ್ಟಿ ಅಪ್ಪ ಅಮ್ಮ ಪ್ರೀತಿಯಿಂದ ಕರೆದ ಹೆಸರಿನೊಂದಿಗೆ ಬೆಳೆದವರು ಯಾರಿಂದಲೂ ಹುಡುಕಿದ ಹೆಸರುಗಳ ಮಕ್ಕಳಿಗೆ ಇಟ್ಟು ಬೆಳೆಸುವವರು ದೊಡ್ಡ ದೊಡ್ಡ ಮನೆಗಳಲ್ಲಿ ಬೆಳೆಯುತ್ತಿದ್ದಾರೆ ಇವರ ನಡುವೆ ಸಾಧಕರ, ಸಜ್ಜನರ, ಹೆಸರುಗಳಷ್ಟೇ ಶತಶತಮಾನಗಳ ಕಾಲ ಉಳಿಯುತ್ತದೆ.

ಬಾಳೆ ಎಲೆಯ ಮೇಲೆ, ಮತ್ತಾವುದೋ ತಟ್ಟೆಯಲ್ಲಿ ಅನ್ನ ತಿನ್ನುವವರು ಇದ್ದಾರೆ, ಬೆಳ್ಳಿ ಬಂಗಾರದ ತಟ್ಟೆಗಳಲ್ಲಿ ತಿನ್ನುವವರು ಇದ್ದಾರೆ, ಇಲ್ಲಿ ರುಚಿ ಮಾತ್ರವೇ ಪ್ರಧಾನವಾಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply