ಹಸಿರು ಪೀಠದ ಆದೇಶದ ಅನ್ವಯ ಮೊದಲು ದೊಡ್ಡ ಮೋರಿ ಅಥವಾ ರಾಜ ಕಾಲುವೆ ಎಂದು ಕರೆಯುವ ಇವುಗಳ ಅಕ್ಕ ಪಕ್ಕದಲ್ಲಿ ನಿವೇಶನದಾರರು ಮನೆಗಳನ್ನು ನಿರ್ಮಿಸಿಕೊಳ್ಳಲು ಅನುಮತಿಯನ್ನು ನಿರಾಕರಿಸಲಾಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಮತ್ತೆ ಇದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಯಿತು. 30 ಮೀಟರ್ ಮೊದಲನೇ ಹಂತದ ರಾಜ ಕಾಲುವೆ, 25 ಮೀಟರ್ ಎರಡನೇ ಹಂತದ ರಾಜ ಕಾಲುವೆ, 15 ಮೀಟರ್ ಮೂರನೇ ಹಂತದ ರಾಜ ಕಾಲುವೆಗೆ, ನಿಗದಿಯನ್ನ ಪಡಿಸಿ ಮನೆಗಳನ್ನು ನಿರ್ಮಿಸಲು ಅವಕಾಶವನ್ನ ಕೊಡಲಾಯಿತು.
ಮತ್ತೆ ಈ ವಿಚಾರದಲ್ಲಿ ಸಾಕಷ್ಟು ಒತ್ತಡಗಳು ಬಂದ ಕಾರಣದಿಂದ 2007ರ ಮುನ್ನ ಬಿಡಿಎ ವತಿಯಿಂದ ಅಥವಾ ಬೇರೆ ಬೇರೆ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿನ ನಿವೇಶನದಾರರು ಯಾವುದೇ ಹಂತದ ರಾಜ ಕಾಲುವೆ ಪಕ್ಕದಲ್ಲಿ ತಮ್ಮ ನಿವೇಶನದಲ್ಲಿ ಮನೆಗಳನ್ನ ನಿರ್ಮಿಸಿಕೊಳ್ಳಲು ಅನುಮತಿ ಕೊಡಲಾಯಿತು.
ಆದರೆ ಈ ಅನುಮತಿ ಸಿ ಐ ಟಿ ಬಿ, ಬಿಡಿಎ, ಹೌಸಿಂಗ್ ಬೋರ್ಡ್, ಸರ್ಕಾರದ ವಿವಿಧ ಸಂಸ್ಥೆಗಳಿಂದ ಅನುಮೋದನೆಗೊಂಡಿರುವ ಬಡಾವಣೆಗಳಿಗೆ ಮಾತ್ರ ಅನ್ವಯವಾಗಿ ಆದೇಶವಾಗಿರುತ್ತದೆ. ಆದರೆ ಇದೇ ಸಂದರ್ಭದಲ್ಲಿ ಲಕ್ಷಾಂತರ ನಿವೇಶನದಾರರು ಪ್ರತಿ ವರ್ಷವೂ ಕಂದಾಯವನ್ನು ಕಟ್ಟಿ, ಸಂಬಂಧಪಟ್ಟ ಪಾಲಿಕೆ ವತಿಯಿಂದ ಖಾತೆಯನ್ನು ಮಾಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂಥವರಿಗೆ 2007ರ ಮುನ್ನವೇ ಖಾತೆಯಾಗಿ ಕಂದಾಯ ನಿಗದಿಯಾಗಿದ್ದರು ಮನೆಗಳನ್ನು ನಿರ್ಮಿಸಲು ನಕ್ಷೆ ಮಂಜೂರಾತಿಯನ್ನು ಕೊಡುವುದಿಲ್ಲ ಎಂದು ಆದೇಶವಾಗಿದೆ.
ಸರ್ಕಾರದ ವಿವಿಧ ಸಂಸ್ಥೆಗಳಿಂದ ಅನುಮೋದಿತಗೊಂಡ ನಿವೇಶನದಾರರು ಮನೆ ಕಟ್ಟಬಹುದಾದರೆ, ರೆವೆನ್ಯೂ ನಿವೇಶನಗಳಿಗೆ ಅಭಿವೃದ್ಧಿ ಶುಲ್ಕವನ್ನು ಪಾವತಿಸಿ ಖಾತೆ ಮಾಡಿಸಿಕೊಂಡು ಕಂದಾಯ ಕಟ್ಟುತ್ತಿರುವವರಿಗೆ ಕಾನೂನು ಯಾಕೆ ಅನ್ವಯವಾಗುವುದಿಲ್ಲ.
ಮಳೆ ನೀರು ಹರಿಯುವುದಾದರೆ ಎಲ್ಲ ನಿವೇಶನಗಳಿಗೂ ಒಂದೇ ಪರಿಸ್ಥಿತಿ ಉಂಟಾಗುತ್ತದೆ. ಮಳೆಯ ನೀರಿಗೆ ಸರ್ಕಾರಿ ಸಂಸ್ಥೆಗಳಿಂದ ಅನುಮೋದನೆಗೊಂಡಿರುವ ಬಡಾವಣೆಯ ನಿವೇಶನ ಅಥವಾ ಅಭಿವೃದ್ಧಿ ಶುಲ್ಕ ಪಾವತಿಸಿ ಅಭಿವೃದ್ಧಿಪಡಿಸಿರುವ ನಿವೇಶನಗಳು ಎಂದು ತಿಳಿಯುತ್ತದೆಯೇ?
ಈ ಹಿನ್ನೆಲೆಯಲ್ಲಿ ಯಾವ ರೀತಿಯಲ್ಲಿ 2007ರ ಮುನ್ನ ವಿವಿಧ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಿದ ನಿವೇಶನದಾರರಿಗೆ ಎನ್‌ಜಿಟಿ ಆದೇಶದಿಂದ ಅಂದರೆ ಬಫರ್ ಜೋನ್ ವಿನಾಯಿತಿ ನೀಡಲಾಗಿದೆಯೋ, ಅದೇ ವಿನಾಯಿತಿಯನ್ನು 2007ರ ಮುನ್ನ ಅಭಿವೃದ್ಧಿ ಶುಲ್ಕವನ್ನು ಪಾವತಿಸಿ ಖಾತೆ ಮಾಡಿಕೊಂಡಿರುವ ಕಂದಾಯವನ್ನು ಪಾವತಿಸುತ್ತಿರುವ ನಿವೇಶನದಾರರಿಗೂ ಅನ್ವಯವಾಗುವಂತೆ ಆದೇಶ ಮಾಡಿ ಅವರಿಗೂ ನಕ್ಷೆ ಮಂಜೂರಾತಿ ನೀಡಿ ಮನೆಗಳನ್ನು ಕಟ್ಟಲು ಅನುವನ್ನ ಮಾಡಿಕೊಡಿ. ಕಾನೂನು ಎಲ್ಲರಿಗೂ ಒಂದೇ ಎನ್ನುವುದಾದರೆ ಈ ರೀತಿಯ ಅವೈಜ್ಞಾನಿಕ ತಾರತಮ್ಯದಿಂದ ಕೂಡಿದ ಆದೇಶಗಳ ಅವಶ್ಯಕತೆ ಏನಿದೆ?
– ಕೆ ಎಸ್ ನಾಗರಾಜ್, ಬೆಂಗಳೂರು



