ಕಾಂಗ್ರೆಸ್ ಸರ್ಕಾರವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಿದಂತಿದೆ. ಆರ್ ಡಿ ಪಿ ಆರ್ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಈ ಕುರಿತು ಮಾತನಾಡದೆ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತಿರುವುದು ವಿಷಾದನೀಯ. ಅವರಿಗೆ ಇಚ್ಛಾಶಕ್ತಿಯಿಲ್ಲವೇ? ಅಥವಾ ಫ್ಯೂಡಲ್ ರಾಜಕೀಯ ಶಕ್ತಿಗಳ ವಿರುದ್ಧ ಅಸಹಾಯಕರೇ? ಅಥವಾ ಅಧಿಕಾರಶಾಹಿಯನ್ನು ನಿಯಂತ್ರಿಸಲು ಆಗುತ್ತಿಲ್ಲವೇ?
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕಳೆದ ನಾಲ್ಕು ವರ್ಷಗಳಿಂದ ಜಿ.ಪಂ., ತಾ.ಪಂ.ಗೆ ಚುನಾವಣೆ ನಡೆದಿಲ್ಲ. ಇವರು ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಇದರ ಕುರಿತು ನುಣಿಚಿಕೊಳ್ಳತ್ತಲೇ ಇದ್ದಾರೆ. ಈ ವರ್ಷಾಂತ್ಯಕ್ಕೆ ಗ್ರಾ.ಪಂ. ಅವಧಿಯೂ ಮುಗಿಯುತ್ತದೆ. ಅಪಾರ ಪ್ರಮಾಣದ ಧನಬಲ ತಂದುಕೊಡುವ ಗ್ರೇಟರ್ ಬೆಂಗಳೂರು ಕುರಿತು ಇರುವ ಅತ್ಯುತ್ಸಾಹ ವಿಕೇಂದ್ರೀಕರಣದ ಪಂಚಾಯತ್ ರಾಜ್ ಕುರಿತು ಇಲ್ಲ. (ಅಷ್ಟಕ್ಕೂ ಈಗಿರುವ ಮೂರು ಹಂತದ ವ್ಯವಸ್ಥೆಯೂ ಸಂಪೂರ್ಣ ಶಾಸಕರು, ಮಂತ್ರಿಗಳ ಮುಷ್ಠಿಯಲ್ಲಿದೆ. ಇದನ್ನು ಕಳಚಬೇಕು ಎನ್ನುವ ಪ್ರಯತ್ನವೇ ನಡೆದಿಲ್ಲ)
ಶಾಸಕಾಂಗ ಮತ್ತು ಕಾರ್ಯಾಂಗದ ಈ ಜಂಟೀ ದಬ್ಬಾಳಿಕೆ ವಿರುದ್ಧ ನ್ಯಾಯಾಂಗವು ಪ್ರಶ್ನಿಸಿದಾಗ ಉತ್ತರಿಸದೆ ಜಾರಿಕೊಳ್ಳುತ್ತಿದ್ದಾರೆ. ಪಂಚಾಯತ್ ರಾಜ್ ಉಳಿಸಿಕೊಳ್ಳಬೇಕೆಂದು ಹೋರಾಡುತ್ತಿರುವ ಕಾಡಶೆಟ್ಟಿಹಳ್ಳಿ ಸತೀಶ್ ರಂತಹ ಕೆಲವೇ ಕೆಲವರು ಏಕಾಂಗಿಯಾಗಿದ್ದಾರೆ.
ಸೀಮಿತ ಆಶಯಗಳ ಸಮಾಜವಾದಿ ರಾಜಕೀಯದ ಕೊನೆಯ ಕೊಂಡಿಯಂತಿರುವ ಸಿದ್ದರಾಮಯ್ಯನವರ ಆಡಳಿತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಕೊನೆಯ ಮೊಳೆ ಹೊಡೆಯಲಾಯಿತು ಎನ್ನುವುದು ಯಾರಿಗೂ ಒಳ್ಳೆಯದಲ್ಲ.
ಸಿದ್ದರಾಮಯ್ಯ ಸರ್ಕಾರವು ಸ್ವಹಿತಾಸಕ್ತಿ, ರಾಜಕೀಯ ಲೆಕ್ಕಾಚಾರವನ್ನು ಹಿಂದಕ್ಕೆ ತಳ್ಳಿ ಸಮರ್ಪಕವಾದ ಮೀಸಲಾತಿ ನೀತಿಯನ್ನು ಅಳವಡಿಸಿಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ಕೊಟ್ಟ ಕುದುರೆಯನ್ನು ಏರಬೇಕಲ್ಲವೇ ??
– ಬಿ.ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು




