ಚಾಮರಾಜನಗರ: ಸಾಹಿತ್ಯ ಲೋಕದ ನೇರ ನಡೆ-ನುಡಿ ಇಂದ ಸತ್ಯ ನಿಷ್ಟೂರಿಯಾಗಿದ್ದ ಮೊಗಳ್ಳಿ ಗಣೇಶ್ ದಲಿತ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿಎಂ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕು ಘಟಕಗಳ ಸಹಯೋಗದಲ್ಲಿ ನಗರದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಮೊಗಲ್ಲಿ ಗಣೇಶ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, 70ರ ದಶಕದಲ್ಲಿ ದಲಿತ ಸಾಹಿತ್ಯದ ಮುಂಚೂಣಿಯಲ್ಲಿ ಡಾ.ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಮುಳ್ಳೂರು ನಾಗರಾಜ, ಕೆ ಬಿ ಸಿದ್ದಯ್ಯ, ಅಂಥವರ ಸಾಲಿನಲ್ಲಿ ಮೊಗಳ್ಳಿ ಗಣೇಶ್ ಸಹ ಗುರುತಿಸಿಕೊಂಡವರು ಎಂದರು.
ಅವರ ಕಥೆಗಳಲ್ಲಿ ದಲಿತ ಸಮುದಾಯದ ಸಂವೇದನೆಯನ್ನು ಕಾಣಬಹುದು ಕನ್ನಡ ಜಾನಪದ ಅಧ್ಯಯನಕ್ಕೆ ದಲಿತ ಜಾನಪದ ಪರಿಕಲ್ಪನೆ ಮೂಲಕ ಹೊಸ ಆಯಾಮ ನೀಡಿದರು. ತಕರಾರು ವಿಮರ್ಶಾ ಸಂಕಲನದಲ್ಲಿ ಕಟು ವಿಮರ್ಶಾ ಧೋರಣೆಯನ್ನು ತಿಳಿಯಬಹುದು ಎಂದರು.

ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹಿರಿಯ ಹೋರಾಟಗಾರ ವೆಂಕಟರಮಣ ಸ್ವಾಮಿ(ಪಾಪು) ಮಾತನಾಡಿ, ಭೌತಿಕವಾಗಿ ಗಣೇಶ್ ಇಹಲೋಕದಿಂದ ದೂರವಾಗಿದ್ದರೂ ಅವರ ಸಾಹಿತ್ಯ ಬರಹಗಳ ಮೂಲಕ ಓದುಗರ ಮನದಲ್ಲಿ ಜಾಗೃತರಾಗಿದ್ದಾರೆ. ಅವರ ಬರಹಗಳನ್ನು ಓದುಗರು ಜೀವಂತವಾಗಿಡಬೇಕು ಎಂದರು.
ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷ ಡಾ. ಪ್ರೇಮ, ದಸಾಪ ಜಿಲ್ಲಾ ಕಾರ್ಯದರ್ಶಿ ಬಸವಣ್ಣ ಮೂಕಹಳ್ಳಿ, ತಾಲೂಕು ಅಧ್ಯಕ್ಷ ಶಿವಕುಮಾರ್ ಸರಗೂರು, ಡಾಕ್ಟರ್ ಅನಂತ್ ಕುಮಾರ್, ಚಾಮರಾಜನಗರ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಲ್ಲಿಕಾರ್ಜುನ, ಕಲಾವಿದ ಶಿವಶಂಕರ ಚಟ್ಟು, ಹೋರಾಟಗಾರ ಆಲೂರು ನಾಗೇಂದ್ರ, ಇತರರು ಹಾಜರಿದ್ದರು. ಮೃತರ ಸ್ಮರಣಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು.



