ಮೊಗಳ್ಳಿ ಗಣೇಶ್ ಅವರ ಮೂರು ಹೊಸ ಪುಸ್ತಕಗಳು

2 years ago

ನಾನೆಂಬುದು ಕಿಂಚಿತ್ತು
ಇದು ಮೊಗಳ್ಳಿಯವರ ಆತ್ಮಕಥನ. ಮೊಗಳ್ಳಿಯವರು ಆತ್ಮಕಥೆ ನಿರೂಪಣೆ ಸಂಪ್ರದಾಯದಲ್ಲಿ ಹೊಸ ಹಾದಿಯನ್ನೇ ತುಳಿದಿದ್ದಾರೆ” ಎನ್ನುತ್ತಾರೆ ಚಂದನ್ ಗೌಡ ಅವರು. ಮೊಗಳ್ಳಿ ಎಂಬ ಹಳ್ಳಿಯ ದಲಿತ ಬಾಲಕನೊಬ್ಬನ ಹೃನ್ಮನ್ ಸೆಳೆಯುವ ಬೆಳೆಯುವ ಸಾಹಸವಾಗಿ ಓದಿಸಿಕೊಂಡ ಈ ಆತ್ಮಕಥೆ ನನಗಂತೂ ಒಂದು ಅದ್ಭುತ ಕಥಾ ಪ್ರವಾಹದಂತೆ ಕಂಡಿದೆ” ಎಂದಿದ್ದಾರೆ ಅಬ್ದುಲ ರಶೀದ್

ಬೆಲೆ: 425/-

ಹೊಕ್ಕುಳು
ಈ ಕಾದಂಬರಿಯ ವಸ್ತು ಮತ್ತು ರಚನೆಯನ್ನು ಅತ್ಯಂತ ಸಮರ್ಥವಾಗಿ ಶೀರ್ಷಿಕೆ ಇದು ಎಂದು ಮುನ್ನುಡಿ ಬರೆದ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ

ಬೆಲೆ: 400/-

ಅಲ್ಲಿ ಯಾರೂ ಇಲ್ಲ
ಇದು ಮೊಗಳ್ಳಿಯವರ ಗಪದ್ಯ ಕಾದಂಬರಿ. ಅನಾಥ ಮಾನವ ಪಾಡು ಚೂರು ಚೂರಾದ ರೂಪಕಗಳಲ್ಲಿ ಗಾಯಗೊಂಡಿರುವಂತೆ ಕಂಡಿತು ಎಂಬ ಭಾವ ಮೊಗಳ್ಳಿಯವರದಾದರೆ ಮುನ್ನುಡಿ ಬರೆದ ಎಚ್ ಎಸ್ ಶಿವಪ್ರಕಾಶ ಅವರು “ಅನಾಥ ಭಾವ ಬೇರೆಯದೇ ಅಳಲು. ಅನಾಥ ಎನ್ನುವುದು ಭೌತಿಕ ವಾಸ್ತವವಾಗಿರುವುದಿಲ್ಲ” ಎನ್ನುತ್ತಾರೆ.

ಬೆಲೆ: 375/-

ಈ ಮೂರು ಪುಸ್ತಕಗಳು ಲಡಾಯಿ ಪ್ರಕಾಶನದಲ್ಲಿ ಲಭ್ಯ. ಈ ಮೂರು ಪುಸ್ತಕಗಳ ಒಟ್ಟು ಬೆಲೆ ರೂ 1200/- 10% ರಿಯಾಯಿತಿಯಲ್ಲಿ ರೂ 1080+ 40 (ಅಂಚೆವೆಚ್ಚ)= 1120/-

ಪುಸ್ತಕಕ್ಕಾಗಿ ಲಡಾಯಿ ಪ್ರಕಾಶನ 9480286844 (ಸಂಪರ್ಕ/ವ್ಯಾಟ್ಸಫ್/ಫೋನ್&ಗೂಗಲ್ ಪೇ ನಂಬರ್)

Leave a Reply