ನಟರಾಜ್ ಹುಳಿಯಾರ್ ಅವರ ಡಾಕ್ಟರ್ ಸಾಹೇಬ್ – ರಾಮಮನೋಹರ ಲೋಹಿಯಾ ಜೀವನಯಾನ ಬಿಡುಗಡೆ

5 hours ago

ಸಿದ್ದರಾಮಯ್ಯ ಕೈಯಿಂದ ಲೋಕಾರ್ಪಣೆಗೊಳ್ಳಲಿದೆ ಮಹತ್ವದ ಕೃತಿ

3 ವರ್ಷಗಳ ತಪಸ್ಸಿಗೆ ಸಿಕ್ತು ಮುಕ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಹಾಗೂ ರಾಜಕೀಯ-ಸಾಮಾಜಿಕ ಚಿಂತನಾ ವಲಯದಲ್ಲಿ ಬಹುದಿನಗಳಿಂದ ಕುತೂಹಲ ಕೆರಳಿಸಿದ್ದ ಮಹತ್ವದ ಕೃತಿಯೊಂದು ಲೋಕಾರ್ಪಣೆಗೆ ಸಜ್ಜಾಗಿದೆ. ಖ್ಯಾತ ವಿಮರ್ಶಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್ ಅವರು ಕಳೆದ ಮೂರು ವರ್ಷಗಳ ಸತತ ಅಧ್ಯಯನ-ಪರಿಶ್ರಮದಿಂದ ರಚಿಸಿರುವ ಸಮಾಜವಾದಿ ನಾಯಕ ಡಾ. ರಾಮಮನೋಹರ ಲೋಹಿಯಾ ಅವರ ಸಮಗ್ರ ಜೀವನ ಚರಿತ್ರೆ ‘ಡಾಕ್ಟರ್ ಸಾಹೇಬ್’ (ರಾಮಮನೋಹರ ಲೋಹಿಯಾ ಜೀವನಯಾನ) ಪುಸ್ತಕ ಬಿಡುಗಡೆಗೊಳ್ಳುತ್ತಿದೆ.

ಕನ್ನಡದಲ್ಲೇ ಪ್ರಥಮ ಸಮಗ್ರ ಕೃತಿ: ರಾಮಮನೋಹರ ಲೋಹಿಯಾ ಅವರ ಕುರಿತು ಕನ್ನಡದಲ್ಲಿ ಪ್ರಥಮ ಬಾರಿಗೆ ಇಷ್ಟು ಬೃಹತ್ ಪ್ರಮಾಣದ ಸಮಗ್ರ ಜೀವನ ಚರಿತ್ರೆ ಪ್ರಕಟವಾಗುತ್ತಿರುವುದು ಇದರ ವಿಶೇಷತೆ. ಸುಮಾರು 500ಕ್ಕೂ ಅಧಿಕ ಪುಟಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ಲೋಹಿಯಾ ಅವರ ಅಪರೂಪದ ಐತಿಹಾಸಿಕ ಭಾವಚಿತ್ರಗಳ ಪ್ರತ್ಯೇಕ ‘ಫೋಟೋ ಆಲ್ಬಂ’ ಕೂಡ ಇರಲಿದೆ. ಪಲ್ಲವ ಪ್ರಕಾಶನ ಪ್ರಕಟಿಸಿರುವ ಈ ಗ್ರಂಥ ರಾಮ ಮನೋಹರ ಲೋಹಿಯಾ ಅವರ ಚಿಂತನೆಯ ಹೊಸ ದಿಕ್ಕನ್ನು ತೆರೆದಿಡಲಿದೆ.

ಸಿದ್ಧರಾಮಯ್ಯ ಅವರಿಂದ ಬಿಡುಗಡೆ: ಅಕ್ಟೋಬರ್ 12ರ ಸೋಮವಾರ ಸಂಜೆ 5.45ಕ್ಕೆ ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಏಟ್ರಿಯಾ ಹೋಟೆಲ್ ಎದುರಿಗಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುವ ಚಾರಿತ್ರಿಕ ಕಾರ್ಯಕ್ರಮದಲ್ಲಿ ಈ ಕೃತಿ ಅನಾವರಣಗೊಳ್ಳಲಿದೆ.

ಪುಸ್ತಕ ಬಿಡುಗಡೆ: ಸಿದ್ದರಾಮಯ್ಯ, ಮಾಜಿ ಸಿಎಂ
ಮುಖ್ಯ ಅತಿಥಿಗಳು: ಅಗ್ರಹಾರ ಕೃಷ್ಣಮೂರ್ತಿ, ಖ್ಯಾತ ಸಂಸ್ಕೃತಿ ಚಿಂತಕ
ವಿಶೇಷತೆ: ಕಾರ್ಯಕ್ರಮದಲ್ಲಿ ಕೃತಿಯ ಅರ್ಪಿತರು ಉಪಸ್ಥಿತರಿರಲಿದ್ದು, ಸಮಾರಂಭಕ್ಕೆ ಬರುವ ಓದುಗರಿಗೆ ಹಾಗೂ ಆಸಕ್ತರಿಗೆ ಈ ಬೃಹತ್ ಕೃತಿಯು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.

ಲೋಹಿಯಾ ವಿಚಾರಧಾರೆಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯನವರೇ ಖುದ್ದು ಈ ಕೃತಿಯನ್ನು ಬಿಡುಗಡೆ ಮಾಡುತ್ತಿರುವುದು ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಸಾಹಿತ್ಯಾಸಕ್ತರು ಹಾಗೂ ಪ್ರಗತಿಪರ ಚಿಂತಕರು ಈ ಮಹತ್ವದ ಗಳಿಗೆಗೆ ಸಾಕ್ಷಿಯಾಗಲು ಉತ್ಸುಕರಾಗಿದ್ದಾರೆ.

Leave a Reply