3ನೇ ರಾಜ್ಯ ಮಟ್ಟದ ವೈಚಾರಿಕ ಸಂವಾದ
ಹಾಸನ:ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಹಾಸನದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ (ಕೆ.ಟಿ. ಶಿವಪ್ರಸಾದ್ ವೇದಿಕೆ) 2026ರ ಸೆಪ್ಟೆಂಬರ್ 27ರ ಭಾನುವಾರದಂದು ‘ನಾನೇಕೆ ನಾಸ್ತಿಕ’ ಶೀರ್ಷಿಕೆಯಡಿ 3ನೇ ರಾಜ್ಯ ಮಟ್ಟದ ವೈಚಾರಿಕ ಸಂವಾದ ಸಮಾವೇಶವನ್ನು ಫಿರಾ, ನೇಗಿಲ ಯೋಗಿ ಟ್ರಸ್ಟ್, ಅಖಿಲ ಕರ್ನಾಟಕ ವಿಚಾರ ವೇದಿಕೆ ಮತ್ತು
ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ, BGVS, SFI, DYFI, AIYF, JMS, AITUC, CITU, KPRS, ದಲಿತ ಸಂಘಟನೆಗಳು ಹಾಗೂ KJVS ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ.
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
ಬೆಳಗ್ಗೆ 9:30ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ವೈಚಾರಿಕ ಚಿಂತಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ವೈದ್ಯರು ಈ ಮಹತ್ವದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 10: ಉದ್ಘಾಟನಾ ಸಮಾರಂಭ ಹಾಗೂ ಕೃತಿ ಲೋಕಾರ್ಪಣೆ
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಸಮಿತಿ ಅಧ್ಯಕ್ಷರಾದ ಪ್ರೊ. ರಾಜಪ್ಪ ದಳವಾಯಿ ನೆರವೇರಿಸಲಿದ್ದಾರೆ. ಭಾರತೀಯ ವಿಚಾರವಾದಿಗಳ ಒಕ್ಕೂಟದ (FIRA) ಅಧ್ಯಕ್ಷರಾದ ಡಾ. ನರೇಂದ್ರ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಎಂ.ಸಿ. ಡೋಂಗ್ರೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಡ್ಯಾಗ್ ಹರ್ಬ್‌ಜೋನ್ಸ್‌ರುಡ್ ಅವರು ನಾರ್ವೇಜಿಯನ್ ಭಾಷೆಯಲ್ಲಿ ರಚಿಸಿರುವ, FIRA ಕೇಂದ್ರ ಸಮಿತಿ ಸದಸ್ಯರಾದ ಶ್ರೀನಿವಾಸ ನಟೇಕರ್ ಕನ್ನಡಕ್ಕೆ ಅನುವಾದಿಸಿರುವ ‘ಮರೆಮಾಚಿದ ಭಾರತದ ನಾಸ್ತಿಕ ಚಿಂತನೆಗಳ ಇತಿಹಾಸ’ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
ದಿನವಿಡೀ ಚಿಂತನ-ಮಂಥನ: ನಾಲ್ಕು ಪ್ರಮುಖ ಗೋಷ್ಠಿಗಳು
ಗೋಷ್ಠಿ – 1: ‘ನಾಸ್ತಿಕತೆ ಎಂದರೇನು? – ವೈಚಾರಿಕ ಸಂವಾದ’
ಸಂವಾದಕರು: ಕೆ.ಎಸ್. ರವಿಕುಮಾರ್ (ವಿಜ್ಞಾನ ಲೇಖಕರು, ಹಾಸನ), ರೋಹಿತ್ ಅಗಸರಹಳ್ಳಿ (ಕನ್ನಡ ಉಪನ್ಯಾಸಕರು, ಸ.ಪ.ಪೂ. ಕಾಲೇಜು, ಆಲೂರು) ಹಾಗೂ ಡಾ. ಕೆ.ಸಿ. ಸೋಮಲತಾ (ಸಮಾಜಶಾಸ್ತ್ರ ಅಧ್ಯಾಪಕರು, ಮಹಾರಾಣಿ ಕಾಲೇಜು, ಮೈಸೂರು).
ಅಧ್ಯಕ್ಷತೆ: ಡಾ. ಎಚ್.ಆರ್.ಸ್ವಾಮಿ (ಅಧ್ಯಕ್ಷರು, ನೇಗಿಲ ಯೋಗಿ ಟ್ರಸ್ಟ್, ಬೆಂಗಳೂರು).
ನಿರ್ವಹಣೆ: ಎಚ್.ಎ. ಅಹಮದ್ ಹಗರೆ (ವಿಜ್ಞಾನ ಸಂವಹನಕಾರರು, ಹಾಸನ).
ಗೋಷ್ಠಿ – 2: ‘ವಿದ್ಯಾರ್ಥಿಗಳಿಂದ ಭಗತ್ ಸಿಂಗ್ ಅವರ ‘ನಾನೇಕೆ ನಾಸ್ತಿಕ’ ಬರಹದ ಸಾಮೂಹಿಕ ಓದು ಮತ್ತು ಚರ್ಚೆ’
ಚಾಲನೆ: ಹರೀಶ್ ಕಟ್ಟೇಬೆಳಗುಲಿ (ಸಾಹಿತಿ, ಹಾಸನ).
ನಿರ್ವಾಹಕರು: ಎಚ್.ಆರ್. ನವೀನ್‌ಕುಮಾರ್ (ಕೆ.ಪಿ.ಆರ್.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹಾಸನ).
ಗೋಷ್ಠಿ – 3: ‘ಭಾರತದಲ್ಲಿ ನಾಸ್ತಿಕತೆಯ ಇತಿಹಾಸ: ವಿಚಾರ ಮತ್ತು ಸಂವಾದ’
ವಿಚಾರ ಮಂಡನೆ: ಡಾ. ಬಿ.ಆರ್. ಮಂಜುನಾಥ್ (ಚಿಂತಕರು, ಬೆಂಗಳೂರು).
ಅಧ್ಯಕ್ಷತೆ: ವೆಂಕಟಯ್ಯ ಅಪ್ಪಗೆರೆ (ವಿಚಾರವಾದಿ ಲೇಖಕರು, ಬಳ್ಳಾರಿ).
ಗೋಷ್ಠಿ – 4: ‘ವೈದ್ಯರೊಂದಿಗೆ ಸಂವಾದ’
ಸಂವಾದಕರು: ಯಲಹಂಕದ ಡಯಾಲಿಸಿಸ್ ಕೇಂದ್ರದ ಎಂಡೋಕ್ರೈನಾಲಜಿಸ್ಟ್ ಡಾ. ಪ್ರವೀಣ್ ರಾಮಚಂದ್ರ ಹಾಗೂ ಬೆಂಗಳೂರಿನ ಮನೋವೈದ್ಯರಾದ ಡಾ. ಶಶಿಧರ್ ಬೆಳಗಿ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ವಿಜೇತರಿಗೆ ಹಾಗೂ ಸ್ಪರ್ಧಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಬಹುಮಾನ ಮತ್ತು ಪ್ರಮಾಣಪತ್ರ ವಿತರಣೆ ನಡೆಯಲಿದೆ. ಸಿಐಟಿಯು ಜಿಲ್ಲಾಧ್ಯಕ್ಷರಾದ ಧರ್ಮೆಶ್ ಅಂತಿಮ ನುಡಿಗಳನ್ನಾಡಲಿದ್ದಾರೆ.
ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ರಮೇಶ್ ಬಿ., ಗಿರೀಶ್ ಎಲ್. ಜಿ., ಪ್ರದೀಪ್ ಕುಮಾರ್ ಟಿ.ಎಸ್., ಹಂಸಿನಿ ಪಿ., ಅರ್ಹನೀತಿ ಎಸ್.ಡಿ. ಹಾಗೂ ಸುಪ್ರೀತಾ ಡಿ.ಆರ್. ವಹಿಸಿಕೊಳ್ಳಲಿದ್ದಾರೆ.
ಆಯೋಜನೆ ಹಾಗೂ ಸಹಭಾಗಿ ಸಂಘಟನೆಗಳು: ಈ ಕಾರ್ಯಕ್ರಮವನ್ನು ಭಾರತೀಯ ವಿಚಾರವಾದಿಗಳ ಒಕ್ಕೂಟ (FIRA) ಕರ್ನಾಟಕ, ನೇಗಿಲಯೋಗಿ ಟ್ರಸ್ಟ್ (NEYOT) ಬೆಂಗಳೂರು, ಐಯ್ಡ್ ವಿತೌಟ್ ರಿಲಿಜನ್ ಟ್ರಸ್ಟ್ ಮಂಗಳೂರು, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ (ರಿ) ಬೆಂಗಳೂರು ಹಾಗೂ ಭಗತ್‌ಸಿಂಗ್ ಜನ್ಮದಿನ ಆಚರಣಾ ಸಮಿತಿ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಇದಕ್ಕೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ, BGVS, SFI, DYFI, AIYF, JMS, AITUC, CITU, KPRS, ದಲಿತ ಸಂಘಟನೆಗಳು ಹಾಗೂ KJVS ಸಂಸ್ಥೆಗಳು ಸಾಥ್ ನೀಡಿವೆ.
ಅವರು ನನ್ನನ್ನು ಸಾಯಿಸಬಹುದು, ಆದರೆ ನನ್ನ ಆಲೋಚನೆಗಳನ್ನು ಸಾಯಿಸಲು ಸಾಧ್ಯವಿಲ್ಲ” ಎಂಬ ಭಗತ್ ಸಿಂಗ್ ಅವರ ನುಡಿಯಂತೆ, ವೈಚಾರಿಕತೆಯ ಬೆಳಕು ಪಸರಿಸಲು ಈ ಸಮಾವೇಶ ಸಜ್ಜಾಗಿದೆ.





