ಬೆಂಗಳೂರಿನ ಗುಲಾಬಿ ಮಾರ್ಗ ಮೆಟ್ರೋ ನಿರ್ಮಾಣದಲ್ಲಿ ಕರ್ನಾಟಕದ ಕೊಡುಗೆಯೇ ಹೆಚ್ಚು
2014ರಲ್ಲಿ ಕಾಂಗ್ರೆಸ್ ಸರ್ಕಾರ ಕಾಳೇನ ಅಗ್ರಹಾರದಿಂದ ನಾಗವಾರದ ತನಕ 21.2 ಕಿಲೋ ಮೀಟರ್ ಉದ್ದದ ಗುಲಾಬಿ ಮಾರ್ಗ ಸುರಂಗ ಮತ್ತು ಎಲಿವೇಟೆಡ್ ಮೆಟ್ರೋ ಮಾರ್ಗದ ಯೋಜನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದೆ.
- ಮೆಟ್ರೋ ನಿರ್ಮಾಣದಲ್ಲಿ ಕರ್ನಾಟಕದ ಕೊಡುಗೆಯೇ ಹೆಚ್ಚು
- ದಾವಣಗೆರೆ ದಕ್ಷಿಣದ ಜನರಿಗೆ ಸರ್ಕಾರದ ಉತ್ತರವೇನು?: ಅಪ್ಸರ್ ಕೊಡ್ಲಿಪೇಟೆ
- ಕನ್ನಡಿಗರ ಶವಪೆಟ್ಟಿಗೆ ಮೇಲೆ ಎಷ್ಟು ಹೂವು ಸುರಿದರೇನು?
- ಬೆಂಗಳೂರಿಗೆ ಅಂಟಿದ ಕಳಂಕ ತೊಡೆದುಹಾಕಲು ಒಟ್ಟಾಗಿ ಶ್ರಮಿಸಿ: ಕೃಷ್ಣ ಬೈರೇಗೌಡ
- ದರ ಏರಿಕೆ ಮಾಡಿದ ಸರ್ಕಾರಕ್ಕೆ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ: ಆರ್.ಅಶೋಕ
ಆರಂಭದಲ್ಲಿ ಈ ಯೋಜನೆಯ ವೆಚ್ಚ 8,730 ಕೋಟಿ ಆಗಿತ್ತು, ಅಂತಿಮವಾಗಿ ಈಗ ಇದರ ವೆಚ್ಚ 17,346 ಕೋಟಿ ರೂಪಾಯಿಗಳಿಗೆ ತಲುಪಿದೆ.
ಈ ಯೋಜನೆಗೆ ಭೂ ಸ್ವಾಧೀನಕ್ಕೆ ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಎರಡು ಸಾವಿರದ ಏಳುನೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಯೋಜನೆಯ ಒಟ್ಟು ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು 50ರ ಸರಾಸರಿಯಲ್ಲಿ ವೆಚ್ಚವನ್ನು ಭರಿಸುತ್ತದೆ.
ಒಟ್ಟು ವೆಚ್ಚದ ಇಪ್ಪತ್ತರಷ್ಟು ಭಾಗವನ್ನ ರಾಜ್ಯ ಸರ್ಕಾರ, 20 ರಷ್ಟು ಭಾಗವನ್ನ ಕೇಂದ್ರ ಸರಕಾರ ನೀಡುತ್ತದೆ. ಉಳಿದ 60 ಪಾಲಿನ ಭಾಗವನ್ನು ಸಾಲದ ರೂಪದಲ್ಲಿ ಬ್ಯಾಂಕುಗಳಿಂದ ಪಡೆಯುತ್ತಾರೆ. ಈ ಸಾಲಕ್ಕೆ ರಾಜ್ಯ ಸರ್ಕಾರವೇ ಹೊಣೆಗಾರರಾಗಿರುತ್ತದೆ. ಸಾಲವನ್ನು ಮೆಟ್ರೋ ಯೋಜನೆಯಿಂದ ಬರುವ ಆದಾಯದಲ್ಲಿ ಪಾವತಿಸಬೇಕಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಗೆ ಒಟ್ಟಾರೆಯಾಗಿ 12,000 ಕೋಟಿ ರೂಪಾಯಿಗಳ ಖರ್ಚು ಮಾಡಿದೆ.
ಬೆಂಗಳೂರಿನಲ್ಲಿ ಮೆಟ್ರೋದ ವಿವಿಧ ಯೋಜನೆಗಳಿಗೆ ಒಟ್ಟಾರೆಯಾಗಿ ರಾಜ್ಯ ಸರ್ಕಾರ 27,184.32 ಕೋಟಿ ಖರ್ಚು ಮಾಡಿದೆ. ಜೊತೆಗೆ 5,066 ಕೋಟಿ ಸಾಲ ಮರುಪಾವತಿ ಮಾಡಿದೆ. ಒಟ್ಟಾರೆಯಾಗಿ 31,534 ಕೋಟಿ ರೂಪಾಯಿಗಳನ್ನು ಒದಗಿಸಿದೆ.
ಕೇಂದ್ರ ಸರ್ಕಾರ ಆರಂಭದಿಂದ ಇಲ್ಲಿಯ ತನಕ ಬೆಂಗಳೂರಿನ ಮೆಟ್ರೋ ಯೋಜನೆಗಳಿಗೆ 26,000 ಕೋಟಿ ರೂಪಾಯಿಗಳನ್ನು ನೀಡಿರುತ್ತದೆ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿ ಶೇಕಡ 20ರಷ್ಟು ಭಾಗವನ್ನ ನೀಡಬೇಕಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಟ್ರೋ ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಗಳ ಪಾತ್ರವೇ ಹೆಚ್ಚು ಇರುತ್ತದೆ. ಆದುದರಿಂದ ಕೇಂದ್ರದ ವ್ಯಕ್ತಿಗಳು ಇದು ತಮ್ಮ ಸಾಧನೆ ಎಂದು ತಮ್ಮ ಬೆನ್ನುಗಳನ್ನ ತಟ್ಟಿಕೊಳ್ಳುವುದು ಬೇಡ. ಇದು ಕರ್ನಾಟಕದ ಕನ್ನಡಿಗರು ನೀಡಿರುವ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಖಜಾನೆಯಿಂದ ರಾಜ್ಯ ಸರ್ಕಾರ ಯೋಜನೆಗಳನ್ನು ಪೂರ್ಣಗೊಳಿಸಿರುತ್ತದೆ. ಆದುದರಿಂದ ಈ ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರಕ್ಕಿಂತ ರಾಜ್ಯದ ಪಾಲೇ ಹೆಚ್ಚಾಗಿರುತ್ತದೆ. ಕೆಲವು ರಾಜ್ಯಗಳಿಗೆ ಮೆಟ್ರೋ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಿದೆ. ಅವುಗಳಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ಯೋಜನೆಗಳಿಗೆ ನೀಡಿರುವ ಅನುದಾನ ಕಡಿಮೆ ಎಂದು ಹಲವಾರು ಅಂಕಿಅಂಶಗಳಿಂದ ಸಾಬೀತಾಗಿದೆ.
ಒಟ್ಟಾರೆಯಾಗಿ ಬೆಂಗಳೂರು ಭಾರತ ದೇಶದ ಅತಿ ಹೆಚ್ಚು ಉದ್ದದ ಮೆಟ್ರೋ ಸಂಪರ್ಕವನ್ನು ಕಲ್ಪಿಸಿದ ಎರಡನೇ ನಗರವಾಗಿದೆ ಇದರ ಕೀರ್ತಿ ಕರ್ನಾಟಕ ಸರ್ಕಾರಕ್ಕೆ ಮತ್ತು ಸಮಸ್ತ ಕನ್ನಡಿಗರಿಗೆ ಸಲ್ಲುತ್ತದೆ.
ಕೇಂದ್ರದಿಂದ ಯಾವುದೇ ವಿಶೇಷವಾದ ಅನುದಾನವನ್ನು ತರದಿದ್ದರೂ, ಕೆಲವರು ಮೆಟ್ರೋ ಯೋಜನೆಯ ಯಶಸ್ಸು ತಮ್ಮದು ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುವ ಪ್ರಯತ್ನಗಳನ್ನು ಹಲವಾರು ಬಾರಿ ಮಾಡುತ್ತಾರೆ. ಆದರೆ, ರಾಜ್ಯದ ಜನರಿಗೆ ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾಲು ಎಷ್ಟು, ಕೇಂದ್ರದ ಪಾಲು ಎಷ್ಟು, ಸಾಲದ ಹೊರೆ ಯಾರ ಮೇಲೆ ಬೀಳುತ್ತದೆ, ಎನ್ನುವ ವಿವರವು ತಿಳಿದಿರುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




